ನಾನು ಹೇಳಿದೆ ಅಂತ ಶಿವಕುಮಾರ್ರನ್ನು ತಿಹಾರ್ ಜೈಲಿಗೆ ಕಳಿಸುತ್ತಾರೆಯೇ? ಹೆಚ್ ಡಿ ಕುಮಾರಸ್ವಾಮಿ
ಸರ್ಕಾರ ರಚನೆಯಾದ ಒಂದೆರಡು ತಿಂಗಳು ಬಳಿಕ ವರ್ಗಾವಣೆ ಧಂದೆಯಲ್ಲಿ ರೂ. 1,000 ಕೋಟಿ ಕೈ ಬದಲಾವಣೆಯಾಗಿದೆಯೆಂದು ಹೇಳಿದಾಗ, ನಿಮ್ಮ ಅಧಿಕಾರಾವಧಿಯಲ್ಲಿ ವರ್ಗಾವಣೆ ಧಂದೆ ನಡೆದಿರಲಿಲ್ಲವೇ ಎಂದು ಕಾಂಗ್ರೆಸ್ ನಾಯಕರು ಕೇಳಿದ್ದರು, ಆದರೆ ತಮ್ಮ ಸರ್ಕಾರದ ಅವಧಿಯಲ್ಲಿ ಮತ್ತು ಈಗ ನಡೆದಿರುವ ವರ್ಗಾವಣೆಯ ನಡುವೆ ಅಜಗಜಾಂತರ ವ್ಯತ್ಯಾಸವಿದೆ ಎಂದು ಕುಮಾರಸ್ವಾಮಿ ಹೇಳಿದರು.
ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವತೆಗೆ (Chamundeshwari) ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ರಾಜ್ಯ ರಾಜಕಾರಣದಲ್ಲಿ ಈಗ ಅವರ ಬದ್ಧ ವೈರಿಯಾಗಿರುವ ಡಿಕೆ ಶಿವಕುಮಾರ್ (DK Shivakumar) ವಿಷಯದಲ್ಲಿ ಕೊಂಚ ಸಾಫ್ಟ್ ಅಗಿದ್ದಾರೆ ಅಂತ ಭಾಸವಾಯಿತು. ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಮಾತಾಡುತ್ತಿರುವ ತಾನು ಯಾರ ಬಗ್ಗೆಯೂ ಅಸೂಯೆ, ಈರ್ಷ್ಯೆ ಇಟ್ಟುಕೊಂಡಿಲ್ಲ, ಶಿವಕುಮಾರ್ ಪುನಃ ತಿಹಾರ್ ಜೈಲಿಗೆ (Tihar jail) ಹೋಗುತ್ತಾರೆ ಅಂತ ತಾನು ಹೇಳಿದ್ದು ಯಾಕೆ? ಕುಮಾರಸ್ವಾಮಿ ಹೇಳಿದಾಕ್ಷಣ ಅವರನ್ನು ಜೈಲಿಗೆ ಹಾಕುತ್ತಾರಾ ಅಂತ ಜೆಡಿಎಸ್ ನಾಯಕ ಪ್ರಶ್ನಿಸಿದರು. ಸುಲಿಗೆ ಮಾಡೋದನ್ನು ಬಿಟ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದರೆ ಸರಕಾರಕ್ಕೆ ಬೆಂಬಲವಿದ್ದೇ ಇದೆ ಎಂದ ಕುಮಾರಸ್ವಾಮಿ, ಆದರೆ ಕಾಂಗ್ರೆಸ್ ಸರ್ಕಾರಕ್ಕೆ ಲೂಟಿ ಮಾಡೋದು ಮುಖ್ಯವಾಗಿದೆ, ಸರ್ಕಾರ ರಚನೆಯಾದ ಒಂದೆರಡು ತಿಂಗಳು ಬಳಿಕ ವರ್ಗಾವಣೆ ಧಂದೆಯಲ್ಲಿ ರೂ. 1,000 ಕೋಟಿ ಕೈ ಬದಲಾವಣೆಯಾಗಿದೆಯೆಂದು ಹೇಳಿದಾಗ, ನಿಮ್ಮ ಅಧಿಕಾರಾವಧಿಯಲ್ಲಿ ವರ್ಗಾವಣೆ ಧಂದೆ ನಡೆದಿರಲಿಲ್ಲವೇ ಎಂದು ಕಾಂಗ್ರೆಸ್ ನಾಯಕರು ಕೇಳಿದ್ದರು, ಆದರೆ ತಮ್ಮ ಸರ್ಕಾರದ ಅವಧಿಯಲ್ಲಿ ಮತ್ತು ಈಗ ನಡೆದಿರುವ ವರ್ಗಾವಣೆಯ ನಡುವೆ ಅಜಗಜಾಂತರ ವ್ಯತ್ಯಾಸವಿದೆ ಎಂದು ಕುಮಾರಸ್ವಾಮಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ