ಜೆಡಿಎಸ್ ಪಕ್ಷದ ಅಸಲು ವಾರಸುದಾರರು ನಾವೇ, ಯಾವ ಕಾರಣಕ್ಕೂ ಎನ್ಡಿಎ ಜೊತೆ ಸೇರಲ್ಲ: ಸಿಎಂ ಇಬ್ರಾಹಿಂ: ಜೆಡಿಎಸ್ ರಾಜ್ಯಾಧ್ಯಕ್ಷ
ಸೈದ್ಧಾಂತಿಕವಾಗಿ ಎನ್ ಡಿಎ ಮೈತ್ರಿಕೂಟ ಮತ್ತು ಜೆಡಿಎಸ್ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿವೆ, ಹಾಗಾಗಿ ತಮ್ಮ ಪಕ್ಷ ಎನ್ಡಿಎನೊಂದಿಗೆ ಬೆರೆಯುವುದು ಸಾಧ್ಯವೇ ಇಲ್ಲ ಎಂದು ಇಬ್ರಾಹಿಂ ಹೇಳಿದರು. ಕಾಂಗ್ರೆಸ್ ಪಕ್ಷದ ನಾಯಕರು, ನಿತೀಶ್ ಕುಮಾರ್, ಶರದ್ ಪವಾರ್ ಮೊದಲಾದವರೆಲ್ಲ ತಮ್ಮೊಂದಿಗೆ ಮಾತಾಡಿದ್ದಾರೆ ಎಂದು ಅವರು ಹೇಳಿದರು.
ಬೆಂಗಳೂರು: ಅಕ್ಟೋಬರ್ 16 ರಂದು ತಮ್ಮ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ತನ್ನ ಮಾತನ್ನು ಉಳಿಸಿಕೊಂಡಿದ್ದಾರೆ. ನಗರದಲ್ಲಿಂದು ಕಾರ್ಯಕರ್ತರ ಸಭೆ ನಡೆಸಿ ಮಾತಾಡಿದ ಇಬ್ರಾಹಿಂ, ಜೆಡಿಎಸ್ ಪಕ್ಷದ ಅಧ್ಯಕ್ಷನಾಗಿರುವ ತನ್ನನ್ನು ಹುದ್ದೆಯಿಂದ ಕೆಳಗಿಳಿಸಬೇಕಾದರೆ ಸರ್ವ ಸದಸ್ಯರ ಸಭೆ (general body meeting) ಕರೆದು 2/3 ಬಹುಮತ ಪಡೆದು ತೆಗೆಯಬೇಕಾಗುತ್ತದೆ. ಅಸಲಿಗೆ ತನ್ನನ್ನು ಪಕ್ಷದಿಂದ ಹೊರಹಾಕಲು ದೇವೇಗೌಡರಾಗಲೀ, ಕುಮಾರಸ್ವಾಮಿ ಆಗಲೀ ಯಾರು? ತಾನು ಪಕ್ಷದ ಅಧ್ಯಕ್ಷ ಮತ್ತು ತಮ್ಮ ಪಕ್ಷ ಯಾವ ಕಾರಣಕ್ಕೂ (NDA) ಮೈತ್ರಿಕೂಟದ ಜೊತೆ ಸೇರಲ್ಲ ಎಂದು ಇಬ್ರಾಹಿಂ ಹೇಳಿದರು. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅಥವಾ ಅಮಿತ್ ಶಾ (Amit Shah) ವಿರುದ್ಧ ವೈಯಕ್ತಿಕ ದ್ವೇಷ ತಮಗಾಗಲೀ ಮುಸ್ಲಿಂ ಸಮುದಾಯಕ್ಕಾಗಲೀ ಖಂಡಿತ ಇಲ್ಲ ಆದರೆ ಸೈದ್ಧಾಂತಿಕವಾಗಿ ಎನ್ ಡಿಎ ಮೈತ್ರಿಕೂಟ ಮತ್ತು ಜೆಡಿಎಸ್ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿವೆ, ಹಾಗಾಗಿ ತಮ್ಮ ಪಕ್ಷ ಎನ್ ಡಿ ಎನೊಂದಿಗೆ ಬೆರೆಯುವುದು ಸಾಧ್ಯವೇ ಇಲ್ಲ ಎಂದು ಇಬ್ರಾಹಿಂ ಹೇಳಿದರು. ಕಾಂಗ್ರೆಸ್ ಪಕ್ಷದ ನಾಯಕರು, ನಿತೀಶ್ ಕುಮಾರ್, ಶರದ್ ಪವಾರ್ ಮೊದಲಾದವರೆಲ್ಲ ತಮ್ಮೊಂದಿಗೆ ಮಾತಾಡಿದ್ದಾರೆ ಎಂದು ಇಬ್ರಾಹಿಂ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ