Prajadhvani Yatre: ದೀಪ ಬೆಳಗಿಸಲು ಉಗ್ರಪ್ಪನವರಿಗೆ ಡಿಕೆ ಶಿವಕುಮಾರ್ ಮೋಂಬತ್ತಿ ನೀಡದಿರುವುದು ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ?
ಉಗ್ರಪ್ಪನವರಿಗೆ ಅವಮಾನವಾದರೂ ತೋರಿಸಿಕೊಳ್ಳುವುದಿಲ್ಲ. ಮಾಜಿ ಸಂಸದರು ಸಿದ್ದರಾಮಯ್ಯ ಬಣಕ್ಕೆ ಸೇರಿದವರು ಅಂತ ನಮ್ಮಂಥವರಿಗೆ ಗೊತ್ತಿರುವಾಗ ಡಿಕೆಶಿಗೆ ಗೊತ್ತಿರದಿರುತ್ತದೆಯೇ?
ಚಿತ್ರದುರ್ಗ: ಕಾಂಗ್ರೆಸ್ ನಾಯಕರ ನಡುವಿವ ಒಳಜಗಳ, ವೈಮನಸ್ಸು, ಮುನಿಸು, ಕೋಪತಾಪಗಳ ಮುಗಿಯುವ ಹಾಗೆ ಕಾಣುತ್ತಿಲ್ಲ ಮಾರಾಯ್ರೇ. ಪ್ರಜಾಧ್ವನಿ ಯಾತ್ರೆ (Prajadhavni Yatre) ಚಿತ್ರದುರ್ಗದ ತಲುಪಿ ಹಿರಿಯೂರಲ್ಲಿ ಸಮಾವೇಶ ಆರಂಭಕ್ಕೆ ಮೊದಲು ದೀಪ ಬೆಳಗುವ ಮೊದಲು ಅಂಥದೊಂದು ಪ್ರಸಂಗ ನಡೆಯಿತು. ವಿಡಿಯೋವನ್ನು ಚೆನ್ನಾಗಿ ಗಮನಿಸಿ. ಡಿಕೆ ಶಿವಕುಮಾರ (DK Shivakumar) ತಾವು ದೀಪ ಬೆಳಗಿಸಿದ ಬಳಿಕ ಅವರಿಂದ ಮೋಂಬತ್ತಿ ತೆಗೆದುಕೊಂಡು ದೀಪ ಹೊತ್ತಿಸಲು ಮುಂದಾದ ಪಕ್ಷದ ಹಿರಿಯ ನಾಯಕ ವಿ ಎಸ್ ಉಗ್ರಪ್ಪನವರನ್ನು (VS Ugrappa) ಹಿಂದೆ ತಳ್ಳಿ ಒಬ್ಬ ಮಹಿಳೆಗೆ ಮುಂದೆ ಕರೆದು ದೀಪ ಬೆಳಗಲು ಶಿವಕುಮಾರ್ ಹೇಳುತ್ತಾರೆ. ಉಗ್ರಪ್ಪನವರಿಗೆ ಅವಮಾನವಾದರೂ ತೋರಿಸಿಕೊಳ್ಳುವುದಿಲ್ಲ. ಮಾಜಿ ಸಂಸದರು ಸಿದ್ದರಾಮಯ್ಯ ಬಣಕ್ಕೆ ಸೇರಿದವರು ಅಂತ ನಮ್ಮಂಥವರಿಗೆ ಗೊತ್ತಿರುವಾಗ ಡಿಕೆಶಿಗೆ ಗೊತ್ತಿರದಿರುತ್ತದೆಯೇ?
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos