ನಾನು ಪ್ರಲ್ಹಾದ್ ಜೋಶಿಯವರ ವಿರುದ್ಧ ಟೀಕೆ ಮಾಡಿರುವನೇ ಹೊರತು ಬ್ರಾಹ್ಮಣ ಸಮಾಜದ ವಿರುದ್ಧ ಅಲ್ಲ: ಹೆಚ್ ಡಿ ಕುಮಾರಸ್ವಾಮಿ

ನಾನು ಪ್ರಲ್ಹಾದ್ ಜೋಶಿಯವರ ವಿರುದ್ಧ ಟೀಕೆ ಮಾಡಿರುವನೇ ಹೊರತು ಬ್ರಾಹ್ಮಣ ಸಮಾಜದ ವಿರುದ್ಧ ಅಲ್ಲ: ಹೆಚ್ ಡಿ ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on:Feb 06, 2023 | 6:27 PM

ತಾವು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಲೂ ಬ್ಯಾಹ್ಮಣ ಸಮುದಾಯಕ್ಕೆ ಸಾಕಷ್ಟು ಅನುದಾನಗಳನ್ನು ಒದಗಿಸಿರುವುದಾಗಿ ಕುಮಾರಸ್ವಾಮಿ ಹೇಳಿದರು.

ಬೆಂಗಳೂರು:  ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮತ್ತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರ (Pralhad Joshi) ನಡುವೆ ಜಗಳ ಮುಂದುವರಿದಿದೆ. ಇಂದು ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕುಮಾರಸ್ವಾಮಿ ಅವರು, ತಾನು ಬ್ರಾಹ್ಮಣ ಸಮಾಜದ (Brahmin Community) ಬಗ್ಗೆ ಮಾತಾಡೇ ಇಲ್ಲ, ಆ ಸಮಾಜದ ಬಗ್ಗೆ ತನಗೆ ಅಪಾರ ಗೌರವವಿದೆ, ತಾನು ಮಾಡಿರುವ ಟೀಕೆ ವೈಯಕ್ತಿಕವಾದ್ದು ಮತ್ತು ಕೇವಲ ಜೋಶಿಯವರನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾತಾಡಿರುವುದಾಗಿ ಹೇಳಿದರು. ತಾವು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಲೂ ಬ್ಯಾಹ್ಮಣ ಸಮುದಾಯಕ್ಕೆ ಸಾಕಷ್ಟು ಅನುದಾನಗಳನ್ನು ಒದಗಿಸಿರುವುದಾಗಿ ಕುಮಾರಸ್ವಾಮಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 06, 2023 06:27 PM