PM Narendra Modi Karnataka Visit: ಪುನೀತ್ ರಾಜ್​ಕುಮಾರ್ ಅಭಿಮಾನಿಯೊಬ್ಬರು ಪ್ರಧಾನಿ ಮುಂದೆ ಎರಡು ಬೇಡಿಕೆ ಇಟ್ಟಿದ್ದು!

PM Narendra Modi Karnataka Visit: ಪುನೀತ್ ರಾಜ್​ಕುಮಾರ್ ಅಭಿಮಾನಿಯೊಬ್ಬರು ಪ್ರಧಾನಿ ಮುಂದೆ ಎರಡು ಬೇಡಿಕೆ ಇಟ್ಟಿದ್ದು!

TV9 Web
| Updated By: Digi Tech Desk

Updated on:Feb 06, 2023 | 4:39 PM

ಒಂದು ಪುನೀತ್ ರಾಜ್ ಕುಮಾರ ಮನೆಗೆ ಪ್ರಧಾನಿಗಳು ಭೇಟಿ ನೀಡಬೇಕು ಮತ್ತು ಎರಡನೇಯದ್ದು-ಮಾರ್ಚ್ 17 ರಂದು ನಡೆಯಲಿರುವ ಸ್ಫೂರ್ತಿ ದಿವಸ್ ಬಗ್ಗೆ ಪ್ರಧಾನಿಗಳು ಮಾತಾಡಬೇಕು. ಪ್ರಧಾನಿಯವರು ನೀಡಿರಬಹುದಾದ ಪ್ರತಿಕ್ರಿಯ ಬಗ್ಗೆ ಗೊತ್ತಾಗಿಲ್ಲ.

ಬೆಂಗಳೂರು: ಕರ್ನಾಟಕ ರತ್ನ ದಿವಂಗತ ಪುನೀತ್ ರಾಜ್ ಕುಮಾರ್ (Puneeth Rajkumar) ಅಭಿಮಾನಿಯೊಬ್ಬರು ನೆಲಮಂಗಲದ ಬಿಐಇಸಿ (BIEC) ಬಳಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರನ್ನು ಭೇಟಿಯಾಗಿ, ಅವರೊಂದಿಗೆ ಒಂದರ್ಧ ನಿಮಿಷ ಮಾತಾಡಿ 2 ಬೇಡಿಕೆಗಳನ್ನು ಮುಂದಿಟ್ಟ ಸ್ವಾರಸ್ಯಕರ ನಡೆದಿದೆ. ಅಪ್ಪು ಅವರ ಈ ಅಭಿಮಾನಿ ಹೆಸರು ಸತೀಶ್ ಉರಾಳ್ ಅಂತ. ಪ್ರಧಾನಿಯವರ ಹತ್ತಿರಕ್ಕೆ ಹೋಗುವ ಅವಕಾಶವನ್ನು ಇವರು ಹೇಗೆ ಪಡೆದುಕೊಂಡರೋ ಗೊತ್ತಿಲ್ಲ. ಸತೀಶ್, ಪ್ರಧಾನಿ ಮೋದಿ ಜೊತೆ ಮಾತಾಡುವುದನ್ನು ವಿಡಿಯೋದಲ್ಲಿ ನೀವು ನೋಡಬಹುದು. ಅವರು ಎರಡು ಬೇಡಿಕೆಗಳನ್ನು ಪ್ರಧಾನಿಗಳ ಮುಂದಿಟ್ಟಿದ್ದಾರೆ. ಒಂದು ಪುನೀತ್ ರಾಜ್ ಕುಮಾರ ಮನೆಗೆ ಪ್ರಧಾನಿಗಳು ಭೇಟಿ ನೀಡಬೇಕು ಮತ್ತು ಎರಡನೇಯದ್ದು-ಮಾರ್ಚ್ 17 ರಂದು ನಡೆಯಲಿರುವ ಸ್ಫೂರ್ತಿ ದಿವಸ್ ಬಗ್ಗೆ ಪ್ರಧಾನಿಗಳು ಮಾತಾಡಬೇಕು. ಪ್ರಧಾನಿಯವರು ನೀಡಿರಬಹುದಾದ ಪ್ರತಿಕ್ರಿಯ ಬಗ್ಗೆ ಗೊತ್ತಾಗಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 06, 2023 04:03 PM