Breakfast meeting: ಡಿಕೆ ಸುರೇಶ್ ಬಾಗಿಲು ತಟ್ಟಿದ್ರೂ ಕೆಸಿ ವೇಣುಗೋಪಾಲ್ ಮನೆಬಾಗಿಲು ತೆರೆದುಕೊಳ್ಳಲಿಲ್ಲ!

Breakfast meeting: ಡಿಕೆ ಸುರೇಶ್ ಬಾಗಿಲು ತಟ್ಟಿದ್ರೂ ಕೆಸಿ ವೇಣುಗೋಪಾಲ್ ಮನೆಬಾಗಿಲು ತೆರೆದುಕೊಳ್ಳಲಿಲ್ಲ!

ಅರುಣ್​ ಕುಮಾರ್​ ಬೆಳ್ಳಿ
|

Updated on: May 18, 2023 | 11:55 AM

ವೇಣುಗೋಪಾಲ್ ಮನೆಯೊಳಗೆ ಎಷ್ಟು ಇಂಟೆನ್ಸ್ ಮಾತುಕತೆ ನಡೆಯುತ್ತಿದ್ದರೆಂದರೆ, ಹೊರಗಡೆ ಸಂಸದ ಡಿಕೆ ಸುರೇಶ್ ಬಾಗಿಲು ತಟ್ಟಿದರೂ ಕ್ಯಾರೆ ಅನ್ನುವವರಿರಲಿಲ್ಲ.

ದೆಹಲಿ: ರಾಷ್ಟ್ರದ ರಾಜಧಾನಿಯಲ್ಲಿ ಕಾಂಗ್ರೆಸ್ ಪಕ್ಷದ ಚಟುವಟಿಕೆಗಳು ತೀವ್ರ ಸ್ವರೂಪದಲ್ಲಿ ನಡೆಯುತ್ತಿವೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಕೆಸಿ ವೇಣುಗೋಪಾಲ್ (KC Venugopal) ಇಂದು ತಮ್ಮ ನಿವಾಸದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ (DK Shivakumar) ಜೊತೆ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿದರು. ಅವರೊಂದಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ ಕೂಡ ಇದ್ದರು. ವೇಣುಗೋಪಾಲ್ ಮನೆಯೊಳಗೆ ಎಷ್ಟು ಇಂಟೆನ್ಸ್ ಮಾತುಕತೆ ನಡೆಯುತ್ತಿದ್ದರೆಂದರೆ, ಹೊರಗಡೆ ಸಂಸದ ಡಿಕೆ ಸುರೇಶ್ (DK Suresh) ಬಾಗಿಲು ತಟ್ಟಿದರೂ ಕ್ಯಾರೆ ಅನ್ನುವವರಿರಲಿಲ್ಲ. ಸುರೇಶ್ ಬಾಗಿಲು ತಟ್ಟುತ್ತಾ ಕಾಯುತ್ತಲೇ ಇದ್ದರು, ಆದರೆ ಬಾಗಿಲು ಮಾತ್ರ ತೆರೆಯಲಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ