ಕುಮಾರಸ್ವಾಮಿ ವಿಧಾನಸೌಧದಲ್ಲಿ ಮಾತಾಡಿದ ಆಡಿಯೋವೊಂದನ್ನು ಬಿಡುಗಡೆ ಮಾಡಿದ ಡಿಕೆ ಸುರೇಶ್

|

Updated on: Nov 06, 2024 | 5:37 PM

ಸುರೇಶ್ ಆಡಿಯೋ ಬಿಡುಗಡೆ ಮಾಡಿದ ಚುನಾವಣಾ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇದ್ದರು. ಕಾಂಗ್ರೆಸ್ ಮತ್ತು ಎನ್​ಡಿಎ ಒಕ್ಕೂಟ ಚನ್ನಪಟ್ಟಣ ಉಪ ಚುನಾವಣೆಯನ್ನು ಪ್ರತಿಷ್ಠೆಯ ವಿಷಯವಾಗಿ ಪರಿಗಣಿಸಿವೆ. ಕುಮಾರಸ್ವಾಮಿಗೆ ಮಗನನ್ನು ರೀಲಾಂಚ್ ಮಾಡುವ ಉಮೇದಿಯಿದ್ದರೆ ಯೋಗೇಶ್ವರ್ ರನ್ನು ಗೆಲ್ಲಿಸಿ ಕುಮಾರಸ್ವಾಮಿಯ ಪ್ರಭಾv ಕಮ್ಮಿ ಮಾಡುವ ಗುರಿ ಕಾಂಗ್ರೆಸ್​ಗಿದೆ.

ಚನ್ನಪಟ್ಟಣ: ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಆಡಿಯೋಗಳನ್ನು ಸಾರ್ವಜನಿಕಗೊಳಿಸುವ ಕೆಲಸ ಶುರುವಾಗಿದೆ. ಚುನಾವಣೆಗಳನ್ನು ಐದು ವರ್ಷಕ್ಕೊಮ್ಮೆ ಮಾಡುವ ಅಗತ್ಯವಿಲ್ಲ, ಚುನಾವಣೆಗಳನ್ನು ಗೆಲ್ಲಲು ಮತದಾರರ ಬಳಿಗೆ ಹೋಗಲೇಬೇಕು ಅಂತೇನಿಲ್ಲ, ಅದಕ್ಕೆ ತಂತ್ರಗಾರಿಕೆ ಬೇಕು, ಮತದಾನಕ್ಕೆ ಇನ್ನೂ ಒಂದು ವಾರ ಇದೆ ಅನ್ನುವಾಗ ಕ್ಷೇತ್ರಗಳಿಗೆ ಹೋಗಿ ಈ ತಂತ್ರಗಾರಿಕೆಯನ್ನು ಬಳಸಿದರೆ ಸಾಕು ಎಂದು ಹೆಚ್ ಡಿ ಕುಮಾರಸ್ವಾಮಿಯವರು ವಿಧಾನಸೌಧದಲ್ಲಿ ಹೇಳಿದರೆನ್ನಲಾಗಿರುವ ಆಡಿಯೋವನ್ನು ಇಂದು ಬೇವೂರಲ್ಲಿ ಮಾಜಿ ಸಂಸದ ಡಿಕೆ ಸುರೇಶ್ ಬಿಡುಗಡೆ ಮಾಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಆಂಬ್ಯುಲೆನ್ಸ್​ನಲ್ಲಿ ಪ್ರಚಾರಕ್ಕೆ ಬರ್ತಾರೆ: ದೇವೇಗೌಡ ವಿರುದ್ಧ ಡಿಕೆ ಸುರೇಶ್ ಹೇಳಿಕೆಯನ್ನೇ ಪ್ರತ್ಯಸ್ತ್ರ ಮಾಡಲು ಮುಂದಾದ ದಳ