ಮುಂದಿನ ಜನ್ಮದಲ್ಲಿ ಮುಸಲ್ಮಾನಾಗುತ್ತೇನೆಂದ ಸಿದ್ದರಾಮಯ್ಯ ಈಗಿಂದಲೇ ತಯಾರಿ ನಡೆಸಿದ್ದಾರೆ: ಬಸನಗೌಡ ಯತ್ನಾಳ್
ಇದು ಕೇವಲ ಒಂದು ಜಾತಿಗೆ ಸೇರಿದ ಹೋರಾಟವಲ್ಲ, ಯಾಕೆಂದರೆ ಗುಡಿ, ಮಠಗಳ ಜಾಗವನ್ನು ಕಬಳಿಸುವ ಹುನ್ನಾರ ನಡೆದಿದೆ, ವಿಜಯಪುರದಲ್ಲಿ ದಲಿತರಿಗೆ ಸೇರಿದ ಸ್ಮಶಾನವನ್ನೂ ತನ್ನದು ಅಂತ ವಕ್ಫ್ ಬೋರ್ಡ್ ಹೇಳಿದೆ, ಹಾಗಾಗಿ ಇದು ಎಲ್ಲ ಹಿಂದೂಗಳಿಗೆ ಸೇರಿದ ಹೋರಾಟ ಎಂದು ಬಸನಗೌಡ ಯತ್ನಾಳ್ ಹೇಳಿದರು.
ವಿಜಯಪುರ: ಸಂಸತ್ತಿನಲ್ಲಿ ವಕ್ಫ್ ಗೆ ಸಂಬಂಧಿಸಿದ ಕಾಯ್ದೆಯನ್ನು ತಿದ್ದುಪಡಿ ಮಾಡಿ ಜಾರಿಗೆ ತರುವ ಮೊದಲೇ ಕರ್ನಾಟಕದಲ್ಲಿ ವಕ್ಫ್ಗೆ ಸೇರಿದ್ದು ಹೇಳಿಕೊಳ್ಳುತ್ತಿರುವ ಜಮೀನುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ವ್ಯವಸ್ಥಿತ ಸಂಚನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಜಮೀರ್ ಅಹ್ಮದ್ ನಡೆಸಿರುವರೆಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟುವೆ ಅಂತ ಹೇಳಿರುವ ಸಿದ್ದರಾಮಯ್ಯ ಈಗಲೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವಂತಿದೆ ಎಂದು ಅವರು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮಸೀದಿ ಮುಂದೆ ಡ್ಯಾನ್ಸ್ ಮಾಡಬಾರದು ಎಂದರೆ ಪಾಕಿಸ್ತಾನ, ಬಾಂಗ್ಲಾಕ್ಕೆ ಹೋಗಲಿ; ಬಸನಗೌಡ ಯತ್ನಾಳ್ ವಾಗ್ದಾಳಿ
Follow Us
Latest Videos

