‘ಈ ಸಲ ಕಪ್ ನಮ್ದೇ ಅಂತ ಮಾತ್ರ ಹೇಳಬೇಡಿ’; ಡಿಕೆಶಿ ಭೇಟಿ ಬಳಿಕ ಅನಿಲ್ ಕುಂಬ್ಳೆ ಮಾತು
ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು ಇಂದು ಡಿಕೆಶಿ ಅವರನ್ನು ಭೇಟಿ ಮಾಡಿದ್ದಾರೆ. ಇದರ ಹಿಂದಿನ ಕಾರಣ ಏನು ಎಂಬುದನ್ನು ಅವರು ರಿವೀಲ್ ಮಾಡಿಲ್ಲ. ಈ ಮಧ್ಯೆ ಅವರು ಹೇಳಿದ ಒಂದು ಮಾರು ಚರ್ಚೆಗೆ ಕಾರಣ ಆಗಿದೆ .
ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು ಇಂದು (ಏಪ್ರಿಲ್ 18) ಡಿಸಿಎಂ ಡಿಕೆ ಶಿವಕುಮಾರ್ (Dk Shivakumar) ಅವರನ್ನು ಭೇಟಿ ಮಾಡಿದ್ದಾರೆ. ಆ ಬಳಿಕ ಅವರು ಮಾಧ್ಯಮಗಳಿಗೆ ಎದುರಾದರು. ಈ ವೇಳೆ ಅವರಿಗೆ ಆರ್ಸಿಬಿ ಬಗ್ಗೆ ಹಾಗೂ ಆರ್ಸಿಬಿ ಈ ಬಾರಿಯಾದರೂ ಕಪ್ ಎತ್ತುತ್ತಾ ಎನ್ನುವ ಪ್ರಶ್ನೆ ಎದುರಾಗಿದೆ. ಇದಕ್ಕೆ ಅವರು ಫನ್ ಆಗಿ ಉತ್ತರಿಸಿದ್ದಾರೆ. ‘ನಾವು ಈ ಸೀಸನ್ನಲ್ಲಿ ಇನ್ನೂ ಬೆಂಗಳೂರಲ್ಲಿ ಗೆದ್ದಿಲ್ಲ. ಕಪ್ ಎತ್ತುತ್ತೇವೆ ಎನ್ನಬೇಡಿ. ಹಾಗೆ ಹೇಳಿದಾಗಲೇ ನಾವು ಕಪ್ ಎತ್ತಿಲ್ಲ. ಐಪಿಎಲ್ ಚೆನ್ನಾಗಿ ನಡೆದುಕೊಂಡು ಬಂದಿದೆ’ ಎಂದಿದ್ದಾರೆ ಅವರು. ಆರ್ಸಿಬಿ vs ಪಂಜಾಬ್ ವಿರುದ್ಧ ಪಂದ್ಯ ನಡೆಯುತ್ತಿದೆ. ‘ನಾನು ಎರಡೂ ಟೀಂನಲ್ಲಿದ್ದೆ. ಸಮಸ್ಯೆ ಅದೇ’ ಎಂದು ಹೇಳಿದ್ದಾರೆ. ಹೀಗಾಗಿ, ಎರಡೂ ತಂಡಕ್ಕೆ ವಿಶ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Apr 18, 2025 12:59 PM
