ಇಸ್ಲಾಂ ಧರ್ಮಕ್ಕೆ ಕಳಂಕ ತರಬೇಡಿ; ದೆಹಲಿ ಸ್ಫೋಟದ ಬಳಿಕ ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಮನವಿ

Updated on: Nov 13, 2025 | 5:47 PM

ದೆಹಲಿ ಸ್ಫೋಟಗಳ ತನಿಖೆ ಭರದಿಂದ ಸಾಗುತ್ತಿದೆ. NIA ಮತ್ತು ದೆಹಲಿ ಪೊಲೀಸರು ಈಗಾಗಲೇ ಹಲವಾರು ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪಾಕಿಸ್ತಾನ ಮೂಲದ ಜೆಇಎಂ ಮಾಡ್ಯೂಲ್ ಸಂಪರ್ಕದ ಸೂಚನೆಗಳು ಹೊರಹೊಮ್ಮುತ್ತಿವೆ. ಈ ಪರಿಸ್ಥಿತಿಯಲ್ಲಿ ಡಾ. ಇಲ್ಯಾಸಿ ಅವರ ಹೇಳಿಕೆ ಬಹಳ ಮುಖ್ಯವಾಗಿದೆ. ಏಕೆಂದರೆ ಅವರು ಮುಸ್ಲಿಂ ಸಮಾಜದ ಪ್ರತಿನಿಧಿಯಾಗಿ ಮಾತನಾಡುತ್ತಿದ್ದಾರೆ. ಭಯೋತ್ಪಾದನೆಯ ವಿರುದ್ಧ ಸ್ಪಷ್ಟವಾಗಿ ಧ್ವನಿ ಎತ್ತಿದ್ದಾರೆ.

ನವದೆಹಲಿ, ನವೆಂಬರ್ 13: ರಾಜಧಾನಿ ದೆಹಲಿಯ ಲಾಲ್ ಕೆಲ್ಲಾ ಬಳಿ ನಡೆದ ಕಾರು ಸ್ಫೋಟದ (Delhi Car Blast) ಮುಖ್ಯ ಆರೋಪಿಗಳು ಇಸ್ಲಾಂ ಧರ್ಮಕ್ಕೆ ಸೇರಿದವರಾಗಿದ್ದಾರೆ. ಇದಾದ ನಂತರ ಆಲ್ ಇಂಡಿಯಾ ಇಮಾಮ್ ಆರ್ಗನೈಸೇಶನ್‌ನ ಮುಖ್ಯ ಇಮಾಮ್ ಡಾ. ಒಮರ್ ಅಹ್ಮದ್ ಇಲ್ಯಾಸಿ ಈ ಘಟನೆಯನ್ನು ಖಂಡಿಸಿದ್ದಾರೆ. “ನಾನು ಈ ಘಟನೆಯನ್ನು ಬಲವಾಗಿ ಖಂಡಿಸುತ್ತೇನೆ. ಇದು ಅತ್ಯಂತ ದುರದೃಷ್ಟಕರ. ಇದು ಮುಗ್ಧ ಜನರ ಜೀವಗಳನ್ನು ಬಲಿತೆಗೆದುಕೊಂಡ ಮಾನವೀಯತೆಯ ಹತ್ಯಾಕಾಂಡವಾಗಿದೆ. ಈ ಘಟನೆಯ ತನಿಖೆಯಲ್ಲಿ ಮುಸ್ಲಿಂ ಸಮುದಾಯದ ಯುವಕರ ಹೆಸರುಗಳು ಕೇಳಿಬರುತ್ತಿವೆ. ಇದು ಅತ್ಯಂತ ಕಳವಳಕಾರಿ ವಿಷಯ. ಪ್ರತಿಯೊಂದು ಸಮಾಜದಲ್ಲೂ ಕೆಲವು ಕೆಟ್ಟ ಜನರಿರುತ್ತಾರೆ. ಆದರೆ ಅವರ ಸಂಖ್ಯೆ ಒಳ್ಳೆಯ ಜನರ ಸಂಖ್ಯೆಗಿಂತ ಹೆಚ್ಚಾಗಿರುವುದಿಲ್ಲ. ನಮ್ಮೊಳಗೆ ಏನು ನಡೆಯುತ್ತಿದೆ, ಕೆಲವರು ಏಕೆ ದಾರಿ ತಪ್ಪುತ್ತಿದ್ದಾರೆ ಎಂದು ನಾವು ಯೋಚಿಸಬೇಕು” ಎಂದು ಡಾ. ಇಲ್ಯಾಸಿ ಹೇಳಿದ್ದಾರೆ.

ಈ ಸ್ಫೋಟವು ಕೇವಲ ಭಯೋತ್ಪಾದಕ ದಾಳಿಯಲ್ಲ, ಬದಲಾಗಿ ಧಾರ್ಮಿಕ ಪ್ರತಿಬಿಂಬವನ್ನು ನಾಶಮಾಡುವ ಆಳವಾದ ಪಿತೂರಿ ಎಂಬುದು ಸ್ಪಷ್ಟವಾಗಿದೆ. ಇಸ್ಲಾಂ ಶಾಂತಿಯ ಧರ್ಮ. ಇಸ್ಲಾಂ ಎಂದಿಗೂ ಕೊಲ್ಲುವುದನ್ನು ಕಲಿಸುವುದಿಲ್ಲ. ಇದನ್ನು ಮಾಡುತ್ತಿರುವವರು ಇಸ್ಲಾಂ ಅನ್ನು ನಾಶಪಡಿಸುತ್ತಿದ್ದಾರೆ. ಕಳಂಕ ತರುತ್ತಿದ್ದಾರೆ. ಇಂದು ಇಸ್ಲಾಂ ಅನ್ನು ಭಯೋತ್ಪಾದನೆಯನ್ನು ಹರಡಲು ಬಳಸಲಾಗುತ್ತಿದೆ ಮತ್ತು ಜನರನ್ನು ದಾರಿ ತಪ್ಪಿಸಲಾಗುತ್ತಿದೆ. ಇದು ಅತ್ಯಂತ ಕಳಂಕಕಾರಿ. ದಯವಿಟ್ಟು ಇಸ್ಲಾಂ ಧರ್ಮಕ್ಕೆ ಕಳಂಕ ತರಬೇಡಿ ಎಂದು ಇಲ್ಯಾಸಿ ಮನವಿ ಮಾಡಿದ್ದಾರೆ.
ದೆಹಲಿ ಸ್ಫೋಟಗಳ ತನಿಖೆ ಭರದಿಂದ ಸಾಗುತ್ತಿದೆ. NIA ಮತ್ತು ದೆಹಲಿ ಪೊಲೀಸರು ಈಗಾಗಲೇ ಹಲವಾರು ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪಾಕಿಸ್ತಾನ ಮೂಲದ ಜೆಇಎಂ ಮಾಡ್ಯೂಲ್ ಸಂಪರ್ಕದ ಸೂಚನೆಗಳು ಹೊರಹೊಮ್ಮುತ್ತಿವೆ. ಈ ಪರಿಸ್ಥಿತಿಯಲ್ಲಿ ಡಾ. ಇಲ್ಯಾಸಿ ಅವರ ಹೇಳಿಕೆ ಬಹಳ ಮುಖ್ಯವಾಗಿದೆ. ಏಕೆಂದರೆ ಅವರು ಮುಸ್ಲಿಂ ಸಮಾಜದ ಪ್ರತಿನಿಧಿಯಾಗಿ ಮಾತನಾಡುತ್ತಿದ್ದಾರೆ. ಭಯೋತ್ಪಾದನೆಯ ವಿರುದ್ಧ ಸ್ಪಷ್ಟವಾಗಿ ಧ್ವನಿ ಎತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Nov 13, 2025 05:04 PM