ಇತ್ತ ಮೊಬೈಲ್​ನಲ್ಲಿ ರೀಲ್ಸ್ ನೋಡುತ್ತಾ ಕುಳಿತ ವೈದ್ಯ, ಅತ್ತ ಮಹಿಳೆ ಹೃದಯಾಘಾತದಿಂದ ಸಾವು

ಇತ್ತ ಮೊಬೈಲ್​ನಲ್ಲಿ ರೀಲ್ಸ್ ನೋಡುತ್ತಾ ಕುಳಿತ ವೈದ್ಯ, ಅತ್ತ ಮಹಿಳೆ ಹೃದಯಾಘಾತದಿಂದ ಸಾವು

ನಯನಾ ರಾಜೀವ್
|

Updated on: Jan 29, 2025 | 3:04 PM

ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಅತ್ತ ವೈದ್ಯರು ಮೊಬೈಲ್​ನಲ್ಲಿ ರೀಲ್ಸ್​ ನೋಡುತ್ತಾ ಕುಳಿತಿದ್ದರು, ಇತ್ತ ಮಹಿಳಾ ರೋಗಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ವೈದ್ಯರು ಚಿಕಿತ್ಸೆ ನೀಡುವ ಬದಲು ಮೊಬೈಲ್​ ನೋಡುತ್ತಿದ್ದುದು ಆಕ್ರೋಶಕ್ಕೆ ಕಾರಣವಾಗಿದೆ. ದೂರು ಸ್ವೀಕರಿಸಿದ ಸಿಎಂಒ ತನಿಖೆಗೆ ಆದೇಶಿಸಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಾವಳಿ ಕೂಡ ಹೊರಬಿದ್ದಿದೆ.

ಮೈನ್‌ಪುರಿಯ ಮಹಾರಾಜ ತೇಜ್ ಸಿಂಗ್ ಜಿಲ್ಲಾ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. ವೈದ್ಯರ ಹೆಸರನ್ನು ಆದರ್ಶ್ ಸೆಂಗರ್ ಎಂದು ಹೇಳಲಾಗಿದೆ. ಅವರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ವೈದ್ಯರು ಚಿಕಿತ್ಸೆ ನೀಡದ ಹಿನ್ನೆಲೆಯಲ್ಲಿ ಮಹಿಳೆಯ ಪುತ್ರ ವೈದ್ಯರೊಂದಿಗೆ ಗಲಾಟೆ ನಡೆಸಿದ್ದಾರೆ. ಈ ವೇಳೆ ವೈದ್ಯರು ರೋಗಿಯ ಮಗನಿಗೆ ಕಪಾಳಮೋಕ್ಷ ಮಾಡಿದ್ದಾರೆ.

ಇಲ್ಲಿನ ನಿವಾಸಿ ಗುರುಶರಣ್ ಸಿಂಗ್ ಅವರ ತಾಯಿ ಪ್ರವೇಶ್ ಕುಮಾರಿ ಅವರಿಗೆ ಹೃದಯದಲ್ಲಿ ಏಕಾಏಕಿ ನೋವು ಕಾಣಿಸಿಕೊಂಡಿತ್ತು. ಇಲ್ಲಿನ ತುರ್ತು ಚಿಕಿತ್ಸಾ ವಿಭಾಗದಲ್ಲಿರುವ ವೈದ್ಯರಿಗೆ ಮಹಿಳೆಯನ್ನು ನೋಡುವಂತೆ ಹಲವು ಬಾರಿ ಮನವಿ ಮಾಡಲಾಗಿತ್ತು. ಈ ವೇಳೆ ಕರ್ತವ್ಯ ನಿರತ ವೈದ್ಯ ಡಾ.ಆದರ್ಶ ಸೆಂಗರ್ ತಮ್ಮ ಕುರ್ಚಿಯ ಮೇಲೆ ಕುಳಿತು ರೀಲ್‌ಗಳನ್ನು ವೀಕ್ಷಿಸುತ್ತಿದ್ದರು ಎಂದು ಕುಟುಂಬದವರು ಆರೋಪಿಸಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ