ಬಿಗ್ ಬಾಸ್ ವಿನ್ನರ್ ಹನುಮಂತನ ಮದುವೆ ಮಾತುಕತೆ ಹೇಗೆ ನಡೆದಿದೆ? ಉತ್ತರ ನೀಡಿದ ತಾಯಿ
ಹನುಮಂತ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ ಟ್ರೋಫಿ ಗೆದ್ದು ಬಂದಿದ್ದಾರೆ. ಅವರ ಮದುವೆ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಮದುವೆ ಆಗಬೇಕು ಎಂದು ಹನುಮಂತ ಈಗಾಗಲೇ ಹೇಳಿದ್ದಾರೆ. ಹಾಗಾದರೆ ಹುಡುಗಿ ಹುಡುಕುವ ಪ್ರಯತ್ನ ನಡೆದಿದೆಯಾ ಎಂಬ ಪ್ರಶ್ನೆಗೆ ಅವರ ತಾಯಿ ಉತ್ತರ ನೀಡಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ ವಿನ್ನರ್ ಆದ ಹನುಮಂತ ಅವರ ಮದುವೆ ತಯಾರಿ ಬಗ್ಗೆ ತಾಯಿ ಮಾತನಾಡಿದ್ದಾರೆ. ‘ನಾವು ಹುಡುಗಿ ಹುಡುಕುವುದಕ್ಕೂ ಮೊದಲೇ ಅವನನ್ನೇ ಹುಡುಕಿಕೊಂಡು ಬರುತ್ತಾರೆ. ನಮಗೆ ಇಷ್ಟ ಆದರೆ ಅಕ್ಕಿ ಕಾಳು ಹಾಕಲು ರೆಡಿ ಇದ್ದೇವೆ. ಇನ್ನೂ ಎಲ್ಲಿಯೂ ಮಾತು ಕೊಟ್ಟಿಲ್ಲ. ಹಿರಿ ಮಗ, ಸೊಸೆ, ನನ್ನ ಗಂಡನ ಜೊತೆ ನಾವು ಕುಳಿತು ಮಾತನಾಡುತ್ತೇವೆ. ಎಲ್ಲರೂ ವಿಚಾರಿಸಿಕೊಂಡು ಮದುವೆ ಮಾಡುತ್ತೇವೆ’ ಎಂದು ಅವರು ಹೇಳಿದ್ದಾರೆ.
ವರದಿ: ಅಣ್ಣಪ್ಪ ಬಾರ್ಕಿ
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.