ಆರಂಭ ಆಗಿದ್ದೇ ಒಂತರ, ಕೊನೆಯಾಗಿದ್ದೇ ಇನ್ನೊಂದು ತರ; ಬಿಗ್ ಬಾಸ್ ಸ್ಪರ್ಧಿಗಳ ಪಾಡು ನೋಡಿ

Updated on: Feb 13, 2026 | 1:07 PM

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಸ್ಪರ್ಧಿಗಳ ಮಧ್ಯೆ ಸ್ಪರ್ಧೆ ಜೋರಾಗಿತ್ತು. ಕೊನೆಗೆ ಕಪ್ ಗಿಲ್ಲಿ ಪಾಲಾಯಿತು. ಈಗ, ದೊಡ್ಮನೆ ಹಬ್ಬ ಆಯೋಜಿಸಲಾಗಿದೆ. ಸ್ಪರ್ಧಿಗಳಿಗಾಗಿ ಫನ್ ಈವೆಂಟ್ ಇತ್ತು. ಈ ಈವೆಂಟ್ ಗಮನ ಸೆಳೆಯೋ ರೀತಿಯಲ್ಲಿ ಇದೆ. ಆ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ.

‘ಬಿಗ್ ಬಾಸ್’ ಈ ಸೀಸನ್ ಸ್ಪರ್ಧಿಗಳನ್ನು ಇಟ್ಟುಕೊಂಡು ‘ದೊಡ್ಮನೆ ಹಬ್ಬ’ ಆಯೋಜನೆ ಮಾಡಲಾಗಿದೆ. ಈ ಹಬ್ಬದಲ್ಲಿ ಸಾಕಷ್ಟು ಫನ್ ಇತ್ತು. ಕಿವಿಗೆ ಹೆಡ್ ಫೋನ್ ಮಾದರಿಯನ್ನು ಹಾಕಿ ಒಂದು ಲೈನ್ ಹೇಳಿಸಲಾಯಿತು. ಆರಂಭದಲ್ಲಿ ಹೇಳಿದ್ದು ಒಂದಾದರೆ, ಕೊನೆಯ ವ್ಯಕ್ತಿ ಬರೋವರೆಗೆ ಅದು ಇನ್ನೊಂದು ರೀತಿಯಲ್ಲಿ ತಿರುಗಿತು. ಈ ಫನ್ ವಿಡಿಯೋ ಸಾಕಷ್ಟು ಗಮನ ಸೆಳೆದಿದೆ. ಜನವರಿ 14 ಅಂದರೆ ಶನಿವಾರ ಸಂಜೆ 6ಕ್ಕೆ ಈ ಕಾರ್ಯಕ್ರಮ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More