ನಾಯಿ ಮೇಲೆ ಕಾರು ಹತ್ತಿಸಿದ ಪ್ರಕರಣ: ಮೃತ ಶ್ವಾನ ಲಾರಾ ಅಂತ್ಯಕ್ರಿಯೆಯಲ್ಲಿ ಕಣ್ಣೀರಿಟ್ಟ ನಟಿ ರಮ್ಯಾ
ಶ್ವಾನ ಲಾರಾಳ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ನಟಿ ರಮ್ಯಾ.

ನಾಯಿ ಮೇಲೆ ಕಾರು ಹತ್ತಿಸಿದ ಪ್ರಕರಣ: ಮೃತ ಶ್ವಾನ ಲಾರಾ ಅಂತ್ಯಕ್ರಿಯೆಯಲ್ಲಿ ಕಣ್ಣೀರಿಟ್ಟ ನಟಿ ರಮ್ಯಾ

Edited By:

Updated on: Feb 01, 2022 | 8:56 PM

ಲಾರಾ ನಾಯಿಯನ್ನ ಸಣ್ಣ ಮರಿಯಿಂದ ಸಲಹಿದ್ದರು. ಸೆಂಟ್‌ ಪೀಟರ್ಸ್ ಶಾಲಾ ಮಕ್ಕಳಿಂದ ಲಾರಾಗೆ ಅಂತಿಮ ನಮನ ಸಲ್ಲಿಸಲಾಗಿದೆ. ಹೂಗುಚ್ಛ ಅರ್ಪಿಸಿ ಶಾಲಾ‌ ಮಕ್ಕಳು ಅಂತಿಮ ನಮನ ಸಲ್ಲಿಸಿದ್ದಾರೆ.

YouTube video player

ಬೆಂಗಳೂರು: ಬೀದಿ ನಾಯಿ ಮೇಲೆ ಆಡಿ ಕಾರ್ ಹತ್ತಿಸಿ ಸಾಯಿಸಿದ ಪ್ರಕರಣದಲ್ಲಿ ನಾಯಿ ಲಾರಾ ಪ್ರಾಣಬಿಟ್ಟಿದೆ. ಘಟನೆ ಬಳಿಕ ನಾಪತ್ತೆಯಾಗಿದ್ದ ಶ್ವಾನ ನಿನ್ನೆ ಮೃತದೇಹವಾಗಿ ಪತ್ತೆಯಾಗಿದೆ. ಇಂದು (ಫೆಬ್ರವರಿ 1) ಆಂಬುಲೆನ್ಸ್ ಮೂಲಕ ಸುಮ್ಮನಹಳ್ಳಿ ಚಿತಾಗಾರಕ್ಕೆ ಶ್ವಾನ ಲಾರಾ ಮೃತದೇಹ ಸಾಗಿಸಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಹೆಬ್ಬಾಳ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಮೃತ ಶ್ವಾನ ಲಾರಾಗೆ ಪೋಸ್ಟ್ ಮಾಟಂ ಮಾಡಲಾಗಿತ್ತು. ಲಾರಾ ಅಂತ್ಯಕ್ರಿಯೆಗೆ ನಟಿ ದಿವ್ಯ ಸ್ಪಂದನ (ರಮ್ಯಾ) ಆಗಮಿಸಿದ್ದರು. ಅಂತ್ಯಕ್ರಿಯೆಯಲ್ಲಿ ಹಲವು ಪ್ರಾಣಿ ಪ್ರಿಯರು ಭಾಗಿ ಆಗಿದ್ದಾರೆ. ಸುಮ್ಮನಹಳ್ಳಿಯಲ್ಲಿರುವ ಬಿಬಿಎಂಪಿ ಪ್ರಾಣಿಗಳ ಚಿತಾಗಾರದಲ್ಲಿ ಲಾರಾ ಅಂತ್ಯಕ್ರಿಯೆ ಮಾಡಲಾಗಿದೆ.

ಲಾರಾ ಪಾರ್ಥಿವ ಶರೀರದ ಬಳಿ ಗಾಯತ್ರಿ ಎಂಬವರು ಕಣ್ಣೀರು ಇಟ್ಟಿದ್ದಾರೆ. ಗಾಯತ್ರಿ ಅವರು ಬೀದಿ ನಾಯಿಗಳಿಗೆ ಊಟ ಹಾಕಿ ಸಲಹುತ್ತಿದ್ದರು. ಲಾರಾ ನಾಯಿಯನ್ನ ಸಣ್ಣ ಮರಿಯಿಂದ ಸಲಹಿದ್ದರು. ಸೆಂಟ್‌ ಪೀಟರ್ಸ್ ಶಾಲಾ ಮಕ್ಕಳಿಂದ ಲಾರಾಗೆ ಅಂತಿಮ ನಮನ ಸಲ್ಲಿಸಲಾಗಿದೆ. ಹೂಗುಚ್ಛ ಅರ್ಪಿಸಿ ಶಾಲಾ‌ ಮಕ್ಕಳು ಅಂತಿಮ ನಮನ ಸಲ್ಲಿಸಿದ್ದಾರೆ.

YouTube video player

ಇದನ್ನೂ ಓದಿ: ಉದ್ದೇಶಪೂರ್ವಕವಾಗಿ ನಾಯಿ ಮೇಲೆ ಕಾರು ಹತ್ತಿಸಿದ್ದ ಪ್ರಕರಣ; ಆರೋಪಿ ಆದಿಕೇಶವ ಬಂಧನ

ಇದನ್ನೂ ಓದಿ: ದಿವಂಗತ ಉದ್ಯಮಿ ಆದಿಕೇಶವುಲು ನಾಯ್ಡು ಮೊಮ್ಮಗನ ದರ್ಪ; ಬೀದಿನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ

Loading...
Unable to load recommendations.
Follow Us
TV9 Web

TV9 Kannada

Read More