ಬಾಗಲಕೋಟೆ: ನಾಗರಹಾವಿನೊಂದಿಗೆ ಕಾಳಗಕ್ಕೆ ಇಳಿದ ಶ್ವಾನ ಸಾವು! ವಿಡಿಯೋ ಇಲ್ಲಿದೆ
ನಾಗರಹಾವು ಮತ್ತು ಪಮೇರಿಯನ್ ಶ್ವಾನದ ನಡುವೆ ಕಾಳಗ ನಡೆದು ಕೊನೆಯಲ್ಲಿ ಶ್ವಾನ ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ಸ್ಥಳಕ್ಕೆ ಉರಗರಕ್ಷಕ ಸ್ನೇಕ್ ರಾಜು ಭೇಟಿನೀಡಿ ನಾಗರಹಾವನ್ನು ಸೆರೆಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.
ಬಾಗಲಕೋಟೆ, ನ.26: ನಾಗರಹಾವು (Cobra) ಮತ್ತು ಪಮೇರಿಯನ್ ಶ್ವಾನದ ನಡುವೆ ಕಾಳಗ ನಡೆದು ಕೊನೆಯಲ್ಲಿ ಶ್ವಾನ ಸಾವನ್ನಪ್ಪಿದ ಘಟನೆ ಬಾಗಲಕೋಟೆ (Bagalkot) ಜಿಲ್ಲೆಯಲ್ಲಿ ನಡೆದಿದೆ. ನವನಗರದ 32ನೇ ಕ್ರಾಸದ್ನಲ್ಲಿ ಜಗಧೀಶ್ ಹಂಗರಗಿ ಎಂಬವರ ಮನೆಯಂಗಳಕ್ಕೆ ನಾಗರಹಾವು ಎಂಟ್ರಿ ಕೊಟ್ಟಿದೆ. ಆದರೆ, ಈ ಹಾವು ಮನೆಯೊಳಗೆ ಪ್ರವೇಶಿಸದಂತೆ ನೋಡಿಕೊಂಡ ಎಂಟು ವರ್ಷದ ಸಾಕು ನಾಯಿ ಹಾವಿನ ಜೊತೆ ಕಚ್ಚಾಡಿದೆ. ಈ ವೇಳೆ ಹಾವಿನ ಕಡಿತಕ್ಕೆ ಒಳಗಾಗಿ ನಾಯಿ ಸಾವನ್ನಪ್ಪಿದೆ. ಸ್ಥಳಕ್ಕೆ ಉರಗರಕ್ಷಕ ಸ್ನೇಕ್ ರಾಜು ಭೇಟಿನೀಡಿ ನಾಗರಹಾವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದು ಬಿಟ್ಟಿದ್ದಾರೆ.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Published on: Nov 26, 2023 10:04 AM