ರಾಮನಗರ: ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಯುವತಿಯನ್ನ ಕೂರಿಸಿಕೊಂಡು ಯುವಕ ವ್ಹೀಲಿಂಗ್
ಬೈಕ್ ಹಿಂಬದಿ ಯುವತಿಯನ್ನ ಕೂರಿಸಿಕೊಂಡು ಬೆಂಗಳೂರು- ಮೈಸೂರು ಹೆದ್ದಾರಿ ಮೇಲೆ ಯುವಕ ವ್ಹೀಲಿಂಗ್ ಮಾಡಿದ್ದಾನೆ. ಹೆದ್ದಾರಿ ಮೇಲೆ ವೀಲಿಂಗ್ ಮಾಡಿದ ಯುವಕ-ಯುವತಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಾಮನಗರ ನ.26: ಬೈಕ್ ಹಿಂಬದಿ ಯುವತಿಯನ್ನ (Young Girl) ಕೂರಿಸಿಕೊಂಡು ಬೆಂಗಳೂರು- ಮೈಸೂರು ಹೆದ್ದಾರಿ (Bengaluru-Mysore Highway) ಮೇಲೆ ಯುವಕ ವ್ಹೀಲಿಂಗ್ ಮಾಡಿದ್ದಾನೆ. ಹೆದ್ದಾರಿ ಮೇಲೆ ವೀಲಿಂಗ್ ಮಾಡಿದ ಯುವಕ-ಯುವತಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದೆ. ಯುವಕನ ಹುಚ್ಚಾಟ ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಯುವಕ ರೀಲ್ಸ್ಗಾಗಿ ವೀಲ್ಹಿಂಗ್ ಮಾಡಿದ್ದಾನೆ. ಹೆದ್ದಾರಿಯಲ್ಲಿ ದ್ವಿಚಕ್ರ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಆದರೂ ಯುವಕ ಹೆದ್ದಾರಿ ಪ್ರವೇಶಿಸಿದ್ದಾನೆ. ಚಾಲನೆ ಸಂದರ್ಭದಲ್ಲಿ ಹೆಲ್ಮಟ್ ಕೂಡ ಹಾಕದ ಯುವಕ, ಬಿಡದಿಯ ಸೇತುವೆ ಬಳಿ ವೀಲ್ಹಿಂಗ್ ಮಾಡಿದ್ದಾನೆ.
Latest Videos