ಬಿಗ್ ಬಾಸ್ ಮನೆಯ ಜಗಳ ಪ್ರೀ-ಪ್ಲ್ಯಾನ್? ಸತ್ಯ ಬಾಯಿ ಬಿಟ್ಟ ಡಾಗ್ ಸತೀಶ್
ಈವರೆಗೂ ಜಂಟಿಗಳು ಹಾಗೂ ಒಂಟಿಗಳು ಎಂಬ ಥೀಮ್ನಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋ ನಡೆಯುತ್ತಿತ್ತು. ಈಗ ಆ ಥೀಮ್ ಅಂತ್ಯ ಆಗುತ್ತಿದೆ. ಎಲ್ಲರೂ ಒಂಟಿಗಳಾಗಿ ಆಟ ಮುಂದುವರಿಸಲಿದ್ದಾರೆ. ಈ ಕುರಿತು ಮಾತಾಡುವಾಗ ಡಾಗ್ ಸತೀಶ್ ಹಾಗೂ ಚಂದ್ರಪ್ರಭ ನಡುವೆ ಜಗಳ ಆಗಿದೆ.
ಇಷ್ಟು ದಿನಗಳ ಕಾಲ ಜಂಟಿಗಳು ಮತ್ತು ಒಂಟಿಗಳು ಎಂಬ ಥೀಮ್ನಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada 12) ರಿಯಾಲಿಟಿ ಶೋ ನಡೆಯುತ್ತಿತ್ತು. ಈಗ ಥೀಮ್ ಬದಲಾಗುತ್ತಿದೆ. ಎಲ್ಲರೂ ಒಂಟಿಗಳಾಗಿ ಆಟ ಮುಂದುವರಿಸಲಿದ್ದಾರೆ. ಈ ಬಗ್ಗೆ ಮಾತನಾಡುವಾಗ ಡಾಗ್ ಸತೀಶ್ ಮತ್ತು ಚಂದ್ರಪ್ರಭ (Chandraprabha) ನಡುವೆ ಜಗಳ ಆಗಿದೆ. ಅದಕ್ಕೂ ಮುನ್ನ ಬಿಗ್ ಬಾಸ್ ಮನೆಯಲ್ಲಿ ತಾವು ಮಾಡಿದ ಜಗಳ ಪ್ರೀ ಪ್ಯಾನ್ಡ್ ಎಂದು ಸತೀಶ್ (Dog Satish) ಹೇಳಿದರು. ಆದರೆ ಆ ಮಾತನ್ನು ಚಂದ್ರಪ್ರಭ ಒಪ್ಪುತ್ತಿಲ್ಲ. ಹೊಸ ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
