‘ಸ್ಪೆಷಲ್ ರೋಲ್​ ಅಂತ ಕರ್ಕೊಂಡು ಹೋದ್ರು, ಚಡ್ಡಿಯಲ್ಲೆಲ್ಲ ನಿಲ್ಸಿದ್ರು’; ಧನಂಜಯ

Edited By:

Updated on: Apr 21, 2022 | 5:05 PM

‘ನೀರ್ ದೋಸೆ’ ಖ್ಯಾತಿಯ ವಿಜಯ್ ಪ್ರಸಾದ್ ಅವರು ‘ತೋತಾಪುರಿ’ಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದ ಬಗ್ಗೆ ಹಾಗೂ ಸಿನಿಮಾದಲ್ಲಿನ ಪಾತ್ರದ ಬಗ್ಗೆ ಧನಂಜಯ ಅವರು ಮಾತನಾಡಿದ್ದಾರೆ.

ನಟ ಧನಂಜಯ ಅವರು (Dhananjaya) ತಮ್ಮ ನಟನೆ ಏನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಸಿನಿಮಾದಿಂದ ಸಿನಿಮಾಗೆ ಭಿನ್ನ ಪಾತ್ರಗಳನ್ನು ಮಾಡುವ ಅವರು, ಎಲ್ಲರಿಂದಲೂ ಭೇಷ್ ಎನಿಸಿಕೊಂಡಿದ್ದಾರೆ. ‘ತೋತಾಪುರಿ’ ಸಿನಿಮಾದಲ್ಲಿ (Totapuri Movie) ಅವರು ಭಿನ್ನ ಪಾತ್ರ ಮಾಡಿದ್ದಾರೆ. ಇದು ಸ್ಪೆಷಲ್ ರೋಲ್. ಈ ಚಿತ್ರದ ಬಗ್ಗೆ ಸಿನಿಮಾ ತಂಡಕ್ಕೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ‘ನೀರ್ ದೋಸೆ’ (Neer Dose Movie) ಖ್ಯಾತಿಯ ವಿಜಯ್ ಪ್ರಸಾದ್ ಅವರು ‘ತೋತಾಪುರಿ’ಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದ ಬಗ್ಗೆ ಹಾಗೂ ಸಿನಿಮಾದಲ್ಲಿನ ಪಾತ್ರದ ಬಗ್ಗೆ ಧನಂಜಯ ಅವರು ಮಾತನಾಡಿದ್ದಾರೆ. ‘ಸ್ಪೆಷಲ್​ ರೋಲ್​ ಎಂದು ಕರೆದುಕೊಂಡು ಹೋದರು. ಅದೇನು ಸೇಡಿತ್ತೋ ಗೊತ್ತಿಲ್ಲ, ಚಡ್ಡಿಯಲ್ಲೆಲ್ಲ ನಿಲ್ಲಿಸಿದ್ದಾರೆ’ ಎಂದು ನಕ್ಕರು ಧನಂಜಯ.

ಇದನ್ನೂ ಓದಿ: ‘ನವರಸ ನಾಯಕ ಆಗಿದ್ರೆ ಮಾತ್ರ ಹೀಗೆ ನಟಿಸೋಕೆ ಸಾಧ್ಯ’; ಸುದೀಪ್​ ನಟನೆ ಬಗ್ಗೆ ಜಗ್ಗೇಶ್​ ಹೊಗಳಿಕೆ

KGF Chapter 2: ‘ಕೆಜಿಎಫ್ ಚಾಪ್ಟರ್ 2’ ಯಶಸ್ಸಿನ ಬಗ್ಗೆ ಡಾಲಿ ಧನಂಜಯ್ ಹೇಳಿದ್ದೇನು?

Follow Us
Web contact

TV9 Kannada

Read More