ಕದನವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ ಟ್ರಂಪ್ಗೆ ಇಸ್ರೇಲ್ ಸಂಸತ್ನಲ್ಲಿ ಎದ್ದು ನಿಂತು ಚಪ್ಪಾಳೆ
ಹಮಾಸ್ನಿಂದ ಬಿಡುಗಡೆಯಾದ ಒತ್ತೆಯಾಳುಗಳು ಮನೆಗೆ ಮರಳುತ್ತಿದ್ದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಇಸ್ರೇಲ್ ಸಂಸತ್ತಿನಲ್ಲಿ ಎದ್ದು ನಿಂತು ಚಪ್ಪಾಳೆ ತಟ್ಟಲಾಯಿತು. ಅಕ್ಟೋಬರ್ 7, 2023ರಂದು, ಹಮಾಸ್ ಉಗ್ರಗಾಮಿಗಳು ಇಸ್ರೇಲ್ ಮೇಲೆ ದಾಳಿ ಮಾಡಿ 251 ಜನರನ್ನು ಅಪಹರಿಸಿ ಗಾಜಾಗೆ ಕರೆದೊಯ್ದರು. ಕಳೆದ ಎರಡು ವರ್ಷಗಳಲ್ಲಿ, ಕೆಲವು ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ.
ನವದೆಹಲಿ, ಅಕ್ಟೋಬರ್ 13: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಮಧ್ಯಸ್ಥಿಕೆಯ ನಂತರ ಇಸ್ರೇಲ್ನ ಎಲ್ಲ 20 ಒತ್ತೆಯಾಳುಗಳನ್ನು ಹಮಾಸ್ ಇಂದು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಇಸ್ರೇಲ್ ಸಂಸತ್ತಿನಲ್ಲಿ (ನೆಸ್ಸೆಟ್) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಗಮಿಸುತ್ತಿದ್ದಂತೆ ಎದ್ದು ನಿಂತು ಚಪ್ಪಾಳೆ ತಟ್ಟಲಾಯಿತು, ಅಲ್ಲಿ ಅವರನ್ನು ಶಾಸಕರು ದೀರ್ಘ ಚಪ್ಪಾಳೆ ಮತ್ತು ಆತ್ಮೀಯ ಮೆಚ್ಚುಗೆಯೊಂದಿಗೆ ಸ್ವಾಗತಿಸಿದರು.
ಅಕ್ಟೋಬರ್ 7, 2023ರಂದು, ಹಮಾಸ್ ಉಗ್ರಗಾಮಿಗಳು ಇಸ್ರೇಲ್ ಮೇಲೆ ದಾಳಿ ಮಾಡಿ 251 ಜನರನ್ನು ಅಪಹರಿಸಿ ಗಾಜಾಗೆ ಕರೆದೊಯ್ದರು. ಕಳೆದ ಎರಡು ವರ್ಷಗಳಲ್ಲಿ, ಕೆಲವು ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ. ಇನ್ನೂ ಅನೇಕರು ಅಲ್ಲೇ ದುರಂತವಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡರು. ಇದೀಗ 2 ವರ್ಷಗಳ ನಂತರ, ಉಳಿದ 20 ಜೀವಂತ ಒತ್ತೆಯಾಳುಗಳು ಮನೆಗೆ ಮರಳಲಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ