AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೊನಾಲ್ಡ್ ಟ್ರಂಪ್ ಮತ್ತದೇ ರಾಗ: 200% ತೆರಿಗೆ ಬೆದರಿಕೆ ಹಾಕಿ ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದೇನೆಂದ ಅಮೆರಿಕ ಅಧ್ಯಕ್ಷ

ಭಾರತ ಮತ್ತು ಪಾಕಿಸ್ತಾನ ಯುದ್ಧ ತಾನೇ ತಡೆದಿದ್ದೇನೆಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳುತ್ತಲೇ ಬಂದಿದ್ದಾರೆ. ಶೇಕಡಾ 200 ರಷ್ಟು ಸುಂಕ ಬೆದರಿಕೆ ನೀಡಿದ್ದೆನೆಂದೂ ಹೇಳಿದ್ದಾರೆ. ಭಾರತ ಇದನ್ನು ನಿರಾಕರಿಸಿ, ಆಪರೇಷನ್ ಸಿಂಧೂರಿನ ನಂತರ ಮಿಲಿಟರಿ ಮಟ್ಟದ ಮಾತುಕತೆಗಳಿಂದಲೇ ಯುದ್ಧ ವಿರಾಮ ಸಾಧ್ಯವಾಯಿತು ಎಂದು ಸ್ಪಷ್ಟಪಡಿಸಿದೆ.

ಡೊನಾಲ್ಡ್ ಟ್ರಂಪ್ ಮತ್ತದೇ ರಾಗ: 200% ತೆರಿಗೆ ಬೆದರಿಕೆ ಹಾಕಿ ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದೇನೆಂದ ಅಮೆರಿಕ ಅಧ್ಯಕ್ಷ
200% ತೆರಿಗೆ ಬೆದರಿಕೆ ಹಾಕಿ ಭಾರತ-ಪಾಕ್ ಯುದ್ಧ ನಿಲ್ಲಿದ್ದೇನೆಂದ ಅಮೆರಿಕ ಅಧ್ಯಕ್ಷ
ಭಾವನಾ ಹೆಗಡೆ
|

Updated on: Oct 13, 2025 | 10:36 AM

Share

 ವಾಷಿಂಗ್ಟನ್, ಅಕ್ಟೋಬರ್ 13:  ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್  (Donald Trump) ಈ ಹಿಂದೆಯೂ ಹಲವು ಬಾರಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧವನ್ನು ತಾನೇ ನಿಲ್ಲಿಸಿದ್ದೇನೆಂದು ಹೇಳಿದ್ದರು. ಅವರ ಈ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ನಿರಾಕರಿಸಿದ್ದರೂ ಟ್ರಂಪ್ ತನ್ನ ಹೇಳಿಕೆಯನ್ನು ಬದಲಿಸಿರಲಿಲ್ಲ. ಈಗ ಮತ್ತೆ ಇದರ ಕುರಿತು ಹೇಳಿಕೆ ನೀಡಿರುವ ಅವರು,ಹೆಚ್ಚಿನ ತೆರಿಗೆ ವಿಧಿಸುತ್ತೇನೆಂದು ಬೆದರಿಸುವ ಮೂಲಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧವನ್ನು ನಾನೇ ನಿಲ್ಲಿಸಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.

ಟ್ರಂಪ್ ಹೇಳಿದ್ದೇನು?

“ನಾನು ಕೆಲವು ಯುದ್ಧಗಳನ್ನು ಸುಂಕಗಳ ಆಧಾರದ ಮೇಲೆಯೇ ಇತ್ಯರ್ಥಪಡಿಸಿದ್ದೇನೆ. ಉದಾಹರಣೆಗೆ, ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದ ಸಮಯದಲ್ಲಿ ನಿಮ್ಮ ಬಳಿ ಪರಮಾಣು ಶಸ್ತ್ರಾಸ್ತ್ರಗಳಿದ್ದು, ನೀವು ಯುದ್ಧ ಮಾಡಲು ಬಯಸಿದರೆ ನಾನು ನಿಮ್ಮಿಬ್ಬರ ಮೇಲೂ ಶೇ. 100, ಶೇ. 150 ಮತ್ತು ಶೇ. 200 ರಷ್ಟು ಸುಂಕಗಳನ್ನು ವಿಧಿಸುತ್ತೇನೆ ಎಂದು ಬೆದರಿಸುವ ಮೂಲಕ ನಾನು ಯುದ್ಧ ನಿಲ್ಲಿಸುವಲ್ಲಿ ಕಾರಣವಾಗಿದ್ದೇನೆ” ಎಂದು  ಟ್ರಂಪ್ ಈಜಿಪ್ಟ್‌ನಲ್ಲಿ ನಡೆಯಲಿರುವ ಶಾಂತಿ ಶೃಂಗಸಭೆಯಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಇಸ್ರೇಲ್ ಮತ್ತು ಹಮಾಸ್ ನಡುವಿನ ಒತ್ತೆಯಾಳು-ಕೈದಿ  ವಿಚಾರವಾಗಿ ಇಸ್ರೇಲ್​ಗೆ ಹೋಗುವಾಗ ಮುನ್ನ ವರದಿಗಾರರೊಂದಿಗೆ ಮಾತನಾಡಿದ ಅವರು,”ನಾನು 8 ಜಾಗತಿಕ ಸಂಘರ್ಷಗಳನ್ನು ಕೊನೆಗೊಳಿಸಿದ್ದೇನೆ. ಇದು ಬೇರೆ ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ. ಈ ವರ್ಷ ನಡೆದ ಭಾರತ ಪಾಕಿಸ್ತಾನ ನಡುವಿನ ಸಂಘರ್ಷದಲ್ಲಿ ಸುಂಕದ ಬೆದರಿಕೆ ಇಟ್ಟು ಒಪ್ಪಂದ ಮಾಡಿಸಿದ್ದೇನೆ” ಎಂದು ಹೇಳಿಕೊಂಡಿದ್ದಾರೆ. ಆದರೆ ಭಾರತ ಮಾತ್ರ ಆಪರೇಷನ್ ಸಿಂಧೂರ್ ಅಥವಾ ಪಾಕಿಸ್ತಾನದೊಂದಿಗಿನ ಕದನದಲ್ಲಿ ಟ್ರಂಪ್ ಎಂದಿಗೂ ಮಧ್ಯಪ್ರವೇಶ ಮಾಡಿಲ್ಲ ಎಂದಿದೆ.

ಸುಂಕದ ಬೆದರಿಕೆಯೊಡ್ಡಿ ಕದನ ನಿಲುಗಡೆ

“ಆಪರೇಷನ್ ಸಿಂಧೂರ್ ನಂತರ ಮೇ 2025 ರಲ್ಲಿ ಕದನ ವಿರಾಮ ಘೋಷಿಸಿದಾಗಿನಿಂದ, ಟ್ರಂಪ್ ಪದೇ ಪದೇ ಮಿಲಿಟರಿ ಸಂಘರ್ಷ ನಿಲ್ಲಿಸುವಲ್ಲಿ ತಾನು ಮಹತ್ವದ ಪಾತ್ರ ವಹಿಸಿದ್ದೇನೆ, ಇದಕ್ಕೆ ತನ್ನ ಸುಂಕ ವ್ಯವಸ್ಥೆಯೇ ಕಾರಣ” ಎಂದು ಹೇಳಿಕೊಂಡಿದ್ದಾರೆ. ಹೀಗಿರುವಾಗ ಎರಡೂ ಕಡೆಯ ಮಿಲಿಟರಿ ನಾಯಕತ್ವದ ನಡುವಿನ ನೇರ ಮಾತುಕತೆಗಳ ಮೂಲಕ ಕದನ ವಿರಾಮದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಭಾರತ ಹೇಳಿದೆ.

ನಾನು ಈಗಾಗಲೇ ಹಲವು ಕದನಗಳನ್ನು ಕೊನೆಗೊಳಿಸಿದ್ದು, ಗಾಜಾ ನಾನು ಕೊನೆಗೊಳಿಸಿರುವ 8 ನೇ ಕದನವಾಗಿದೆ ಎಂದು ಪದೇ ಪದೇ ಹೇಳುತ್ತಾ ಬಂದಿರುವ ಟ್ರಂಪ್,ತಾನು ಯುದ್ಧ ನಿಲ್ಲಿಸುವಲ್ಲಿ ನಿಪುಣನಾಗಿದ್ದೇನೆ. ಮುಂದೆ ಕಾಬೂಲ್ ಮತ್ತು ಇಸ್ಲಾಮಾಬಾದ್ ನಡುವಿನ ಉದ್ವಿಗ್ನತೆಯ ಕುರಿತಾಗಿಯೂ ಯೋಚಿಸುತ್ತೇನೆ ಎಂದರು.

ನೊಬೆಲ್ ಪ್ರಶಸ್ತಿ ಕುರಿತು ಟ್ರಂಪ್

“ಮುಂದಿನ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿ ನಾಮನಿರ್ದೇಶನಗಳಿಗಾಗಿ ಅವರು ತಮ್ಮನ್ನು ಸಕ್ರಿಯವಾಗಿ ಪ್ರಚಾರ ಮಾಡಿಕೊಂಡಿರುವ ಟ್ರಂಪ್,ನಾನು ಸಂಘರ್ಷಗಳನ್ನು ಬಗೆಹರಿಸುವಲ್ಲಿ ಸಾಕಷ್ಟು ಯಶಸ್ಸು ಕಂಡಿದ್ದೇನೆ”  ಎಂದಿದ್ದಾರೆ.

“30 ರಿಂದ 40 ವರ್ಷಗಳನ ಸುದೀರ್ಘ ಅವಧಿಯವರೆಗೆ ನಡೆದಿದ್ದ ಯುದ್ಧಗಳನ್ನು ನಾನು ನಿಲ್ಲಿಸಿದ್ದೇನೆ. ಈ ಯುದ್ಧಗಳಲ್ಲಿ ಕೋಟಿಗಟ್ಟಲೆ ಜನರು ತಮ್ಮ ಪ್ರಾಣ ಕಳೆದುಕೊಳ್ಳಬೇಕಿತ್ತು. ಆದರೆ ನನ್ನಿಂದಾಗಿ ಅಷ್ಟೂ ಜನರ ಪ್ರಾಣ ಉಳಿದಿದೆ ” ಎಂದು ಹೇಳಿದ್ದಾರೆ.

ತಮ್ಮ ನೊಬೆಲ್ ಪ್ರಶಸ್ತಿ ಪುರಸ್ಕೃತರನ್ನು ಉದ್ದೇಶಿಸಿ ಮಾತನಾಡಿದ ಅವರು, ” ನ್ಯಾಯವಾಗಿ ಹೇಳಬೇಕೆಂದರೆ 2024ರ ಆಯ್ಕೆಗಳನ್ನು ಪರಿಗಣಿಸಲಾಗಿದೆ. ಆದರೆ 2025ರಲ್ಲಿಯೂ ಸಾಕಷ್ಟು ವಿಷಯಗಳು ನಡೆದಿವೆ. ನೀವು ವಿನಾಯಿತಿ ನೀಡಬಹುದು ಎಂದು ಹೇಳುವವರೂ ಇದ್ದಾರೆ. ನಾನು ಎನೇ ಮಾಡಿದ್ದರೂ ನೋಬೆಲ್​ಗಾಗಿ ಅಲ್ಲ, ಜನರ ಜೀವ ಉಳಿಸುವ ಸಲುವಾಗಿ ನಾನು ಈ ಎಲ್ಲಾ ಕೆಲಸಗಳನ್ನು ಮಾಡಿದ್ದೇನೆ.” ಎಂದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Bhavana Hegde
Bhavana Hegde

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ