Karnataka Budget Session: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗುವವರು ಮುಂದೆ ಸಭಾಧ್ಯಕ್ಷನ ಪೀಠದ ಮೇಲೆ ಕುಳಿತರೂ ಸೋಜಿಗವಿಲ್ಲ: ಬಸನಗೌಡ ಯತ್ನಾಳ್

|

Updated on: Feb 29, 2024 | 1:46 PM

Karnataka Budget Session: ರಾಜ್ಯದ 99 ಪರ್ಸೆಂಟ್ ಭಾಗ ಮಾಧ್ಯಮಗಳು ನಿಷ್ಪಕ್ಷಪಾತವಾಗಿ, ಪ್ರಜಾಪ್ರಭುತ್ವ ವ್ಯವಸ್ಥೆಯ 4ನೇ ಸ್ತಂಭವಾಗಿ ತಮ್ಮ ಜವಾಬ್ದಾರಿ ನಿಭಾಯಿಸುತ್ತಿವೆ, ಹಾಗಿರುವಾಗ ವಿಡಿಯೋವನ್ನು ಎಫ್ ಎಸ್ ಎಲ್ ಗೆ ಕಳಿಸುವ ಅವಶ್ಯಕತೆ ಯಾಕೆ ಉದ್ಭವಿಸುತ್ತದೆ ಎಂದ ಪ್ರಶ್ನಿಸಿದ ಯತ್ನಾಳ್ ಅಸಲಿಗೆ ಸರ್ಕಾರವೇ ಒಂದು ಕೃತಕ ವಿಡಿಯೋ ತಯಾರಿಸಿ ಎಫ್ ಎಸ್ ಎಲ್ ತನಿಖೆಗೆ ಕಳಿಸಿದೆ ಎಂದರು.

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರವನ್ನು ವಜಾ ಮಾಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ಹೋಗುವಾಗ ಟಿವಿ9 ವರದಿಗಾರನೊಂದಿಗೆ ಮಾತಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal), ಸಿದ್ದರಾಮಯ್ಯ ಸರ್ಕಾರ ಕರ್ನಾಟಕವನ್ನು ಪಾಕಿಸ್ತಾನದ ಪ್ರಯೋಗಶಾಲೆಯಾಗಿ ಪರಿವರ್ತಿಸಿದೆ ಎಂದು ಹೇಳಿದರು. ಪಾಕಿಸ್ತಾನದ ಪರ ವಿಧಾನ ಸೌಧದಲ್ಲಿ (Vidhana Soudha) ಘೋಷಣೆ ಕೂಗಿ ಎರಡು ದಿನಗಳಾದರರೂ ಸರ್ಕಾರ ಇದುವರೆಗೆ ಒಬ್ಬನನ್ನೂ ಬಂಧಿಸಿಲ್ಲ, ಕೂಗಿದವರನ್ನು ಕರೆದು ವಿಚಾರಣೆ ನಡೆಸಿ ಕಳಿಸಿದ್ದೇವೆ ಎಂದು ಗೃಹ ಸಚಿವ (home minister) ಸದನದಲ್ಲಿ ಹೇಳುತ್ತಾರೆ. ಅದರರ್ಥ ಅವರ ಬಾಯಿಂದ ತಮಗೆ ಅನುಕೂಲವಾಗುವ ರೀತಿಯಲ್ಲಿ ಹೇಳಿಕೆ ನೀಡಿಸಿದ್ದಾರೆ, ರಾಜ್ಯದ 99 ಪರ್ಸೆಂಟ್ ಭಾಗ ಮಾಧ್ಯಮಗಳು ನಿಷ್ಪಕ್ಷಪಾತವಾಗಿ, ಪ್ರಜಾಪ್ರಭುತ್ವ ವ್ಯವಸ್ಥೆಯ 4ನೇ ಸ್ತಂಭವಾಗಿ ತಮ್ಮ ಜವಾಬ್ದಾರಿ ನಿಭಾಯಿಸುತ್ತಿವೆ, ಹಾಗಿರುವಾಗ ವಿಡಿಯೋವನ್ನು ಎಫ್ ಎಸ್ ಎಲ್ ಗೆ ಕಳಿಸುವ ಅವಶ್ಯಕತೆ ಯಾಕೆ ಉದ್ಭವಿಸುತ್ತದೆ ಎಂದು ಯತ್ನಾಳ್ ಪ್ರಶ್ನಿಸಿದರು. ಅಸಲಿಗೆ ಸರ್ಕಾರವೇ ಒಂದು ಕೃತಕ ವಿಡಿಯೋ ತಯಾರಿಸಿ ಎಫ್ ಎಸ್ ಎಲ್ ತನಿಖೆಗೆ ಕಳಿಸಿದೆ ಎಂದು ಹೇಳಿದ ಅವರು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನೀಡಿರುವ ಸಲುಗೆಯಿಂದ ಪಾಕಿಸ್ತಾನ್ ಪರ ಕೂಗುವವರು ಮುಂದೊಂದು ದಿನ ವಿಧಾನಸಭಾಧ್ಯಕ್ಷನ ಪೀಠದ ಮೇಲೆ ಆಸೀನರಾದರೂ ಆಶ್ಚರ್ಯವಿಲ್ಲ ಎಂದರು.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Karnataka Budget Session: ಬಿಜೆಪಿ ಯಾವತ್ತೂ ಮುಂಬಾಗಿಲಿಂದ ಅಧಿಕಾರಕ್ಕೆ ಬಂದಿಲ್ಲ, ಆಪರೇಶನ್ ಕಮಲ ಆರಂಭಿಸಿದ್ದು ಯಡಿಯೂರಪ್ಪ: ಸಿದ್ದರಾಮಯ್ಯ