ಬೇರೆ ಪಕ್ಷಗಳು ಕೆ ಆರ್ ಪಿಪಿ ಬಗ್ಗೆ ಮಾತಾಡೋದನ್ನು ಕೇರ್ ಮಾಡಲ್ಲ, ಅದೊಂದು ಪ್ರಬಲ ಪಕ್ಷವಾಗಿ ಬೆಳೆಯಲಿದೆ: ಜಿ ಜನಾರ್ಧನ ರೆಡ್ಡಿ
ಪಕ್ಷದ ಪ್ರಣಾಳಿಕೆ ಮತ್ತು ಅಭ್ಯರ್ಥಿಗಳ ಘೋಷಣೆ ಜನೆವರಿ 16 ರ ನಂತರ ಮಾಡುವುದಾಗಿ ಜನಾರ್ಧನ ರೆಡ್ಡಿ ಹೇಳಿದರು.
ಕೊಪ್ಪಳ: ರಾಜ್ಯದಲ್ಲಿ ಮಾತ್ರ ಅಲ್ಲ, ಇಡಿ ದೇಶದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಒಂದು ಪ್ರಮುಖ ಪಕ್ಷವಾಗಿ ಬೆಳೆಯುವ ವಿಶ್ವಾಸವನ್ನು ಗಾಲಿ ಜನಾರ್ಧನ ರೆಡ್ಡಿ (Gali Janardhan Reddy) ವ್ಯಕ್ತಪಡಿಸಿದರು. ಪಕ್ಷದ ಘೋಷಣೆ ನಂತರ ಮೊದಲ ಬಾರಿಗೆ ಕೊಪ್ಪಳಕ್ಕೆ (Koppal) ಆಗಮಿಸಿದ್ದ ರೆಡ್ಡಿ ಸುದ್ದಿಗಾರರೊಂದಿಗೆ ಮಾತಾಡುವಾಗ ಕೆಅರ್ ಪಿಪಿ ಬಗ್ಗೆ ಬೇರೆ ಬೇರೆ ಪಕ್ಷಗಳ ನಾಯಕರು ಏನು ಮಾತಾಡುತ್ತಾರೆ, ಯಾವ ಟೀಕೆಗಳು ಮಾಡುತ್ತಾರೆ ಅನ್ನೋದರ ಬಗ್ಗೆ ತಾನು ತಲೆ ಕೆಡಿಸಿಕೊಳ್ಳುವುದಿಲ್ಲ, ಆದರೆ ಜನರ ಮೇಲೆ ವಿಶ್ವಾಸವಿದೆ, ಅವರು ತನ್ನ ಕೈಬಿಡುವುದಿಲ್ಲ ಅಂತ ಚೆನ್ನಾಗಿ ಗೊತ್ತಿದೆ ಎಂದು ಹೇಳಿದರು. ಪಕ್ಷದ ಪ್ರಣಾಳಿಕೆ (manifesto) ಮತ್ತು ಅಭ್ಯರ್ಥಿಗಳ ಘೋಷಣೆ ಜನೆವರಿ 16 ರ ನಂತರ ಮಾಡುವುದಾಗಿ ಜನಾರ್ಧನ ರೆಡ್ಡಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ