ಮನೆಯಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡಬಾರದು, ಈ ಬಗ್ಗೆ ಆಧ್ಯಾತ್ಮದಲ್ಲೇನಿದೆ?
ಮನೆಯಲ್ಲಿ ಚಪ್ಪಲಿಯನ್ನು ಹಾಕಿಕೊಂಡು ಓಡಾಡುವ ಅಭ್ಯಾಸ ಸಾಮಾನ್ಯ. ಆದರೆ, ಹಿಂದೂ ಧರ್ಮದಲ್ಲಿ ಮನೆಯನ್ನು ದೇವಾಲಯವೆಂದು ಭಾವಿಸುವುದುಂಟು. ಹೀಗಾಗಿ ಚಪ್ಪಲಿ ಹಾಕಿಕೊಂಡು ಓಡಾಡಿದರೆ ಕೆಲವು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಗುರೂಜಿ ಈ ವಿಡಿಯೋದಲ್ಲಿ ವಿವರಿಸಿದ್ದಾರೆ.
ಮನೆಯೇ ಮಂತ್ರಾಲಯ, ಮನೆಯೇ ದೇವಾಲಯ ಎಂಬ ಮಾತನ್ನು ನೀವು ಕೇಳಿರುತ್ತೀರಿ. ಅದರಂತೆಯೇ ಮನೆಯಲ್ಲಿ ಅಥವಾ ಮನೆಯ ಹೊರಗೆ ಚಪ್ಪಲಿ, ಶೂಗಳು ತಲೆಕೆಳಗಾಗಿ ಬಿದ್ದಾಗ ಮನೆಯ ಹಿರಿಯರು ತಕ್ಷಣವೇ ಅದನ್ನು ಸರಿ ಮಾಡುವಂತೆ ಬೈಯುವುದನ್ನು ನಾವು ನೋಡಿರುತ್ತೇವೆ. ಚಪ್ಪಲಿ ಉಲ್ಟಾ ಬಿದ್ದಿದ್ದರೆ ಮನೆಯಲ್ಲಿ ಜಗಳ ಆಗುವ ಸಾಧ್ಯತೆ ಹೆಚ್ಚಿರುತ್ತೆ ಎಂಬ ನಂಬಿಕೆ. ಅದೇ ರೀತಿ ಮನೆಯೊಳಗೆ ಚಪ್ಪಲಿ ಧರಿಸಿ ಓಡಾಡಬಾರದು ಎನ್ನುತ್ತಾರೆ. ಏಕೆ ಎಂಬ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಈ ವಿಡಿಯೋದಲ್ಲಿ ವಿವರಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ
Latest Videos