‘ನಾನು ದರ್ಶನ್​ ಅವರ ಸಂಬಂಧಿ’: ಭೇಟಿ ಮಾಡಲು ಪರಪ್ಪನ ಅಗ್ರಹಾರಕ್ಕೆ ಬಂದ ಯುವತಿ

ಪ್ರತಿ ದಿನ ಅನೇಕರು ಬಂದು ಪರಪ್ಪನ ಅಗ್ರಹಾರದ ಹೊರಗೆ ದರ್ಶನ್​ಗಾಗಿ ಕಾಯುತ್ತಿದ್ದಾರೆ. ಇಂದು (ಜೂ.28) ಓರ್ವ ಯುವತಿ ಬಂದು ‘ನಾನು ದರ್ಶನ್​ ಅವರ ರಿಲೇಟಿವ್​’ ಎಂದು ಹೇಳಿದ್ದಾರೆ. ಹಾಕಿದ್ದರೂ ಕೂಡ ಅವರಿಗೆ ಭೇಟಿ ಮಾಡುವ ಅವಕಾಶ ಸಿಕ್ಕಿಲ್ಲ. ತಮ್ಮ ಹೆಸರು ಏನು ಎಂಬುದನ್ನು ಆ ಯುವತಿ ತಿಳಿಸಿಲ್ಲ. ಆ ಸಂದರ್ಭದ ವಿಡಿಯೋ ಇಲ್ಲಿದೆ..

‘ನಾನು ದರ್ಶನ್​ ಅವರ ಸಂಬಂಧಿ’: ಭೇಟಿ ಮಾಡಲು ಪರಪ್ಪನ ಅಗ್ರಹಾರಕ್ಕೆ ಬಂದ ಯುವತಿ
| Updated By: ಮದನ್​ ಕುಮಾರ್​

Updated on: Jun 28, 2024 | 10:51 PM

ಕೊಲೆ ಆರೋಪ ಹೊತ್ತಿರುವ ದರ್ಶನ್​ (Darshan) ಅವರು ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಅವರನ್ನು ನೋಡಲು ಪ್ರತಿದಿನ ಅನೇಕರು ಜೈಲಿಗೆ ಬರುತ್ತಿದ್ದಾರೆ. ಆದರೆ ಎಲ್ಲರಿಗೂ ಅವಕಾಶ ನೀಡಲಾಗುತ್ತಿಲ್ಲ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಈಗಾಗಲೇ ಭೇಟಿ ಮಾಡಿದ್ದಾರೆ. ಎರಡು ದಿನಗಳ ಹಿಂದೆ ನಟ ವಿನೋದ್​ ಪ್ರಭಾಕರ್​ ಕೂಡ ಭೇಟಿ ಮಾಡಿದ್ದರು. ಅನೇಕ ಅಭಿಮಾನಿಗಳು (Darshan Fans) ಪರಪ್ಪನ ಅಗ್ರಹಾರದ ಹೊರಗೆ ನಿಂತು ದರ್ಶನ್​ಗಾಗಿ ಕಾದಿದ್ದಾರೆ. ಇಂದು (ಜೂನ್​ 28) ಕೂಡ ಅನೇಕರು ಬಂದಿದ್ದಾರೆ. ಓರ್ವ ಯುವತಿ ಕೂಡ ಬಂದು ‘ನಾನು ದರ್ಶನ್​ ಅವರ ಸಂಬಂಧಿ. ಆದರೂ ಕೂಡ ಅವರನ್ನು ನೋಡಲು ಜೈಲು ಸಿಬ್ಬಂದಿ ನನಗೆ ಅವಕಾಶ ನೀಡಿಲ್ಲ’ ಎಂದಿದ್ದಾರೆ. ಆದರೆ ಅವರು ತಮ್ಮ ಹೆಸರನ್ನು ಹೇಳಿಲ್ಲ. ‘ನಿಮ್ಮ ಹೆಸರೇನು’ ಎಂದು ಕೇಳಿದ್ದಕ್ಕೆ ‘ಅದೆಲ್ಲ ಸುಮ್ಮನೆ ಯಾಕೆ ಬಿಡಿ’ ಎಂದು ಮುಂದೆ ಸಾಗಿದ್ದಾರೆ. ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಆಗಿರುವ ದರ್ಶನ್​ ಸ್ನೇಹಿತೆ ಪವಿತ್ರಾ ಗೌಡ (Pavithra Gowda) ಕೂಡ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us