ಹೈಕಮಾಂಡ್​ನಿಂದ ಸ್ಪಷ್ಟತೆ ಇಲ್ಲದಿರೋದು ಸಿದ್ದರಾಮಯ್ಯ ಕಾರ್ಯವೈಖರಿ ಮೇಲೆ ಪ್ರಭಾವ ಬೀರಿದೆ: ಜಗದೀಶ್ ಶೆಟ್ಟರ್, ಸಂಸದ

ಹೈಕಮಾಂಡ್​ನಿಂದ ಸ್ಪಷ್ಟತೆ ಇಲ್ಲದಿರೋದು ಸಿದ್ದರಾಮಯ್ಯ ಕಾರ್ಯವೈಖರಿ ಮೇಲೆ ಪ್ರಭಾವ ಬೀರಿದೆ: ಜಗದೀಶ್ ಶೆಟ್ಟರ್, ಸಂಸದ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 28, 2024 | 8:48 PM

ಗ್ಯಾರಂಟಿ ಯೋಜನೆಗಳು ತಮ್ಮ ಕೈ ಹಿಡಿಯುತ್ತವೆ ಎಂದು ಸಿದ್ದರಾಮಯ್ಯ ಮತ್ತು ಶಿವಕುಮಾರ್ ಭಾವಿಸಿದ್ದರು. ಅದರೆ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಉಲ್ಟಾ ಹೊಡೆಯಿತು. ಈಗ ಕಾಂಗ್ರೆಸ್ ಶಾಸಕರೇ ಗ್ಯಾರಂಟಿ ಯೋಜನೆಗಳನ್ನು ರದ್ದುಮಾಡಿ ಹಣವನ್ನು ಸ್ಥಗಿತಗೊಂಡಿರುವ ಅಭಿವೃಧ್ಧಿ ಕಾರ್ಯಗಳಿಗೆ ನೀಡಿ ಅನ್ನುತ್ತಿದ್ದಾರೆ ಎಂದು ಜಗದೀಶ್ ಶೆಟ್ಟರ್ ಹೇಳಿದರು

ಹುಬ್ಬಳ್ಳಿ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಂಸದ ಜಗದೀಶ್ ಶೆಟ್ಟರ್ ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲು ಆಪರೇಶನ್ ಕಮಲದ ಅವಶ್ಯಕೆಯಿಲ್ಲ, ಕಾಂಗ್ರೆಸ್ ಮಂತ್ರಿ ಮತ್ತು ಶಾಸಕರ ಒಳಜಗಳ, ಬೇಗುದಿಯಿಂದ ಸರ್ಕಾರ ತಾನಾಗೇ ಪತನಗೊಳ್ಳಿದೆ ಎಂದು ಹೇಳಿದರು. ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಏನನ್ನೂ ಹೇಳುತ್ತಿಲ್ಲ, ಸಿದ್ದರಾಮಯ್ಯ 5-ವರ್ಷ ಅವಧಿಗೆ ಮುಖ್ಯಮಂತ್ರಿಯೇ ಇಲ್ಲವೇ ಎರಡೂವರೆ ವರ್ಷಗಳ ನಂತರ ಸ್ಥಾನ ಬಿಟ್ಟುಕೊಡಲಿದ್ದಾರೆಯೇ ಅನ್ನೋದನ್ನು ಸ್ಪಷ್ಟಪಡಿಸಬೇಕು, ಕಾಂಗ್ರೆಸ್ ವರಿಷ್ಠರಿಂದ ಯಾವುದೇ ಸಿಗ್ನಲ್ ಅಥವಾ ಸ್ಪಷ್ಟತೆ ಇಲ್ಲದ ಕಾರಣ ಅದು ಸಿದ್ದರಾಮಯ್ಯನವರ ಕಾರ್ಯವೈಖರಿ ಮೇಲೆ ಪ್ರಭಾವ ಬೀರಿದೆ ಮತ್ತು ಆಡಳಿತ ವ್ಯವಸ್ಥೆ ಹದಗೆಟ್ಟುಹೋಗಿದೆ ಎಂದು ಶೆಟ್ಟರ್ ಹೇಳಿದರು. ಮೂರು ಡಿಸಿಎಂ, 5 ಡಿಸಿಎಂಗ ಬೇಕೆಂಬ ಡಿಬೇಟ್ ಸರ್ಕಾರ ರಚನೆಯಾದಾಗಿನಿಂದ ನಡೆಯುತ್ತಿದೆ. ಹೆಚ್ಚುವರಿ ಡಿಸಿಎಂ ಬೇಕೆನ್ನುವವರು ಮಾಧ್ಯಮಗಳ ಮುಂದೆ ಯಾಕೆ ಹೇಳುತ್ತಾರೆ? ದೆಹಲಿಗೆ ಹೋಗಿ ಹೈಕಮಾಂಡ್ ಮುಂದೆ ತಮ್ಮ ಬೇಡಿಕೆ ಇಡಲಿ ಎಂದು ಶೆಟ್ಟರ್ ಹೇಳಿದರು.
.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕಾಂಗ್ರೆಸ್​ನಲ್ಲಿ ಇಂದಿರಾ ಬಿಟ್ಟರೆ ಯಾರೂ ಗಂಡಸರಿಲ್ಲ ಅನ್ನೋ ಮಾತಿತ್ತು: ಸಿಎಂ ಕೋಲೆ ಬಸವ ಹೇಳಿಕೆಗೆ ಜಗದೀಶ್ ಶೆಟ್ಟರ್ ತಿರುಗೇಟು