ದರ್ಶನ್​ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು

ಕೊಲೆ ಆರೋಪದಲ್ಲಿ ದರ್ಶನ್​ ಜೈಲು ವಾಸು ಅನುಭವಿಸುತ್ತಿದ್ದಾರೆ. ದರ್ಶನ್​ ಅವರ ಅಭಿಮಾನಿಗಳ ಬಗ್ಗೆ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು​ ಅವರು ಮಾತನಾಡಿದ್ದಾರೆ. ‘ನಾವು ನಿಮ್ಮ ಒಳ್ಳೆಯದಕ್ಕೆ ಹೇಳುತ್ತಿದ್ದೇವೆ. ಅದನ್ನು ಅರ್ಥ ಮಾಡಿಕೊಳ್ಳಿ. ದರ್ಶನ್​ಗೆ ಇನ್ನೂ ಭವಿಷ್ಯ ಇದೆ. ಅದಕ್ಕೆ ಕಲ್ಲು ಹಾಕಬೇಡಿ. ನೀವು ಹಾದಿ ತಪ್ಪಿದರೆ ಇನ್ನೂ ಅಧೋಗತಿಗೆ ಹೋಗುತ್ತದೆ. ಅಭಿಮಾನ ಇರಬೇಕು. ಆದರೆ ಹುಚ್ಚು ಅಭಿಮಾನ ಇರಬಾರದು’ ಎಂದು ಸಾ.ರಾ. ಗೋವಿಂದು ಹೇಳಿದ್ದಾರೆ.

ದರ್ಶನ್​ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು
| Updated By: ಮದನ್​ ಕುಮಾರ್​

Updated on: Jun 28, 2024 | 9:11 PM

ನಟ ದರ್ಶನ್​ (Darshan) ಅವರ ಜೊತೆ ಸ್ಯಾಂಡಲ್​ವುಡ್​ನ ಅನೇಕ ನಿರ್ಮಾಪಕರು ಒಡನಾಟ ಹೊಂದಿದ್ದಾರೆ. ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು ಕೂಡ ದರ್ಶನ್​ ಜೊತೆ ಸಿನಿಮಾ ಮಾಡಿದ್ದರು. ಈಗ ದರ್ಶನ್​ ಅವರು ಕೊಲೆ ಆರೋಪದಲ್ಲಿ ಜೈಲಿಗೆ ಹೋಗುವಂತಾಗಿದೆ. ಈ ಹಿನ್ನೆಲೆಯಲ್ಲಿ ಸಾ.ರಾ. ಗೋವಿಂದು (Sa Ra Govindu) ಅವರು ಮಾತನಾಡಿದ್ದಾರೆ. ‘ಅಭಿಮಾನಿಗಳನ್ನು ಹತೋಟಿಯಲ್ಲಿ ಇಡೋಕೆ ದರ್ಶನ್​ಗೆ ಆಗಲಿಲ್ಲ. ರೇಣುಕಾ ಸ್ವಾಮಿ ಮಾಡಿದ ಕೃತ್ಯವನ್ನು ನಾವು ಯಾರೂ ಸರಿ ಅಂತ ಹೇಳುತ್ತಿಲ್ಲ. ಡಾ. ರಾಜ್​ಕುಮಾರ್​ ಅವರಿಗೆ ಕೋಟ್ಯಂತರ ಫ್ಯಾನ್ಸ್ ಇದ್ದರು. ಆದರೆ ಒಬ್ಬರೂ ಸಹ ಈ ರೀತಿ ಮಾಡಿಲ್ಲ. ಅಶ್ವಿನಿ ಪುನೀತ್​ ರಾಜ್​ಕುಮಾರ್​ ಬಗ್ಗೆ ಕೆಟ್ಟದಾಗಿ ಪೋಸ್ಟ್​ ಮಾಡಿದಾಗ ತಮ್ಮ ಅಭಿಮಾನಿಗಳಿಗೆ ದರ್ಶನ್​ ಎಚ್ಚರಿಕೆ ನೀಡಬಹುದಿತ್ತು. ಅಭಿಮಾನಿಗಳು (Darshan Fans) ಮಾಡುವ ತಪ್ಪು ದರ್ಶನ್​ ತಲೆಗೆ ಬರುತ್ತದೆ. 80 ವರ್ಷದಿಂದ ಚಿತ್ರರಂಗ ಇದೆ. ರಾಜ್​ಕುಮಾರ್​, ವಿಷ್ಣುವರ್ಧನ್​ ನಿಧನರಾದ ನಂತರವೂ ಚಿತ್ರರಂಗ ಉಳಿದಿದೆ. ದರ್ಶನ್​ ಇಲ್ಲದಿದ್ದರೂ ಚಿತ್ರರಂಗ ಇರುತ್ತದೆ’ ಎಂದು ಸಾರಾ ಗೋವಿಂದು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us