Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೋರಿ ಬೆದರಿಸುವುದನ್ನು ನೋಡಲು ವಿದ್ಯುತ್​ ಟಿಸಿ ಏರಿ ಕೂತರು: ಜನರ ಹುಚ್ಚಾಟದ ವಿಡಿಯೋ ನೋಡಿ

ಹೋರಿ ಬೆದರಿಸುವುದನ್ನು ನೋಡಲು ವಿದ್ಯುತ್​ ಟಿಸಿ ಏರಿ ಕೂತರು: ಜನರ ಹುಚ್ಚಾಟದ ವಿಡಿಯೋ ನೋಡಿ

ಅಶೋಕ ಯಡಳ್ಳಿ, ವಿಜಯಪುರ
| Updated By: ಗಂಗಾಧರ​ ಬ. ಸಾಬೋಜಿ

Updated on: Jun 28, 2024 | 8:35 PM

ಎತ್ತುಗಳು, ಹೋರಿಗಳನ್ನು ಬೆದರಿಸಿ ಓಡಿಸುವುದನ್ನು ನೋಡಲು ಜನರು ತಮ್ಮ ಜೀವವನ್ನೇ ಪಣಕ್ಕಿಟ್ಟು ಟಿಸಿ ಅಂದರೆ ವಿದ್ಯುತ್ ಪರಿವರ್ತ ಕಂಬಗಳ ಮೇಲೇರಿರುವ ದೃಶ್ಯ ನಿಜಕ್ಕೂ ಎಂಥವರನ್ನು ಒಂದು ಕ್ಷಣ ಬೆಚ್ಚಿಬೀಳಿಸುತ್ತದೆ. ಇಂಥಹದೊಂದು ಭಯಾನಕ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಗಿ ಗ್ರಾಮದಲ್ಲಿ ಇಂದು ನಡೆದಿದೆ. ಜನರ ದುಸ್ಸಾಹಸ ಎಂಥದ್ದು ನೀವೇ ನೋಡಿ.

ವಿಜಯಪುರ, ಜೂನ್​ 28: ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಗಿ ಗ್ರಾಮದಲ್ಲಿ ಇಂದು ಕಾರ ಹುಣ್ಣಿಮೆ (kara hunnime)  ಪ್ರಯುಕ್ತ ಎತ್ತು, ಹೋರಿ ಬೆದರಿಸುವ ಆಚರಣೆ ಮಾಡಲಾಗಿದೆ. ಈ ವೇಳೆ ಓರ್ವ ಯುವಕನಿಗೆ ಹೋರಿ ತಿವಿದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಘಟನೆ ಒಂದು ಕಡೆಯಾದರೆ, ಮತ್ತೊಂದು ಭಯಾನಕ ಘಟನೆ ಸಂಭವಿಸುವುದು ಸ್ವಲ್ಪದರಲ್ಲೇ ತಪ್ಪಿದೆ. ಎತ್ತುಗಳು, ಹೋರಿಗಳನ್ನು ಬೆದರಿಸಿ ಓಡಿಸುವುದನ್ನು ನೋಡಲು ಜನರು ತಮ್ಮ ಜೀವವನ್ನೇ ಪಣಕ್ಕಿಟ್ಟು ಟಿಸಿ ಅಂದರೆ ವಿದ್ಯುತ್ ಪರಿವರ್ತ ಕಂಬಗಳ (electric transformer) ಮೇಲೇರಿರುವ ದೃಶ್ಯ ನಿಜಕ್ಕೂ ಎಂಥವರನ್ನು ಒಂದು ಕ್ಷಣ ಬೆಚ್ಚಿಬೀಳಿಸುತ್ತದೆ. ಲೈಟ್ ಕಂಬಗಳ ಮೇಲಿನ ತಂತಿಗಳನ್ನು ಕೈಯ್ಯಲ್ಲಿ ಹಿಡಿದುಕೊಂಡು ಹತ್ತಾರು ಜನರು ನಿಂತಿರುವುದು ಆಘಾತಕಾರಿಯಾಗಿದೆ. ಹಬ್ಬದ ಪ್ರಯುಕ್ತ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿ ಎನ್ನಲಾಗಿದೆ. ಆದರೆ ಅಚಾನಕ್ ಆಗಿ ಒಂದು ವೇಳೆ ವಿದ್ಯುತ್​ ಪ್ರವಹಿಸಿದ್ದೇ ಆದರೆ ಹತ್ಯಾಕಾಂಡ ನಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಇನ್ನು ಈ ವೇಳೆ ಪೊಲೀಸರು ಕೂಡ ಅಲ್ಲೇ ಇದ್ದು ಯಾವುದೇ ಕ್ರಮಕೈಗೊಂಡಿಲ್ಲ ಎನ್ನಲಾಗುತ್ತಿದೆ. ಜನರ ಈ ದುಸ್ಸಾಹಸಕ್ಕೆ  ಜಿಲ್ಲಾಡಳಿತ ಹಾಗೂ ಪೊಲೀಸ್​ ಸರಿಯಾದ ಕ್ರಮಕೈಗೊಳ್ಳಬೇಕಿದೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.