ವಿಜಯಪುರದಲ್ಲಿ ಕರಿ ಹರಿಯುವ ಪದ್ಧತಿ: ಯುವಕನ ಕರುಳು ಬಗೆದ ಹೋರಿ

ಕಾರ ಹುಣ್ಣಿಮೆ ಹಬ್ಬದ ಪ್ರಯುಕ್ತ ಎತ್ತು, ಹೋರಿಗಳನ್ನು ಬೆದರಿಸಿ ಓಡಿಸುವ ಪದ್ದತಿ ಮಾಡಲಾಗುತ್ತಿದೆ. ಈ ಪದ್ದತಿ ವೇಳೆ ಎತ್ತು ಅಥವಾ ಹೋರಿ ನೆರೆದಿದ್ದವರ ಮೇಲೆ ದಾಳಿ ಮಾಡುತ್ತವೆ. ಇಂತಹ ಸಂದರ್ಭದಲ್ಲಿ ಪ್ರಾಣಕಳೆದುಕೊಂಡ ಉದಾರಣೆಗಳಿವೆ. ಇದೀಗ ವಿಜಯಪುರದಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದೆ. ಓರ್ವ ಯುವಕ ಮೇಲೆ ಹೋರಿ ದಾಳಿ ಮಾಡಿದ್ದು, ಕರುಳು ಹೊರಗೆ ಬಂದಿರುವಂತಹ ಘಟನೆ ನಡೆದಿದೆ.

ವಿಜಯಪುರದಲ್ಲಿ ಕರಿ ಹರಿಯುವ ಪದ್ಧತಿ: ಯುವಕನ ಕರುಳು ಬಗೆದ ಹೋರಿ
ವಿಜಯಪುರದಲ್ಲಿ ಕರಿ ಹರಿಯುವ ಪದ್ದತಿ: ಯುವಕನ ಕರುಳು ಬಗೆದ ಹೋರಿ
Follow us
ಅಶೋಕ ಯಡಳ್ಳಿ, ವಿಜಯಪುರ
| Updated By: ಗಂಗಾಧರ​ ಬ. ಸಾಬೋಜಿ

Updated on:Jun 28, 2024 | 7:54 PM

ವಿಜಯಪುರ, ಜೂನ್​ 28: ಆಯುಷ್ಯ ಗಟ್ಟಿ ಇದ್ದರೆ ಬಂಡೆಗಲ್ಲು ತಲೆ ಬಿದ್ದರೆ ಜೀವ ಉಳಿಯುತ್ತದೆ ಎಂಬ ಮಾತಿದೆ. ಇಂತದ್ದೇ ಒಂದು ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಕಾರಹುಣ್ಣಿಮೆ (kara hunnime) ನಿಮಿತ್ಯ ನಡೆಯೋ ಎತ್ತು ಹೋರಿಗಳನ್ನು ಬೆದರಿಸಿ ಓಡಿಸುವ ಪದ್ದತಿಯ ರೋಮಾಂಚನಕಾರಿ ಆಚರಣೆ ವೀಕ್ಷಣೆಗೆ ಬಂದಿದ್ದ ವ್ಯಕ್ತಿಗೆ ಹೋರಿಯೊಂದು (bull) ತಿವಿದು ಎತ್ತಿ ಬಿಸಾಡಿದಿದೆ. ಪರಿಣಾಮ ವ್ಯಕ್ತಿಯ ಹೊಟ್ಟೆ ಹರಿದು ಕರುಳು ಹೊರಗೆ ಬಂದು ಬಿಟ್ಟಿದ್ದವು. ಕೂಡಲೇ ಆ ವ್ಯಕ್ತಿಯನ್ನು ನಗರದ ಬಿಎಲ್ಡಿಇ ಆಸ್ಪತ್ರೆಗೆ ದಾಖಲಿಸಿ ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು ಮರು ಜೀವ ನೀಡಿದ್ದಾರೆ.

ಯುವಕನನ್ನು ಎತ್ತಿ ಬಿಸಾಕಿದ ಹೋರಿ

ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಗಿ ಗ್ರಾಮದಲ್ಲಿ ಕಾರಹುಣ್ಣಿಮೆ ಬಳಿಕ 7 ನೇ ದಿನಕ್ಕೆ ಕರಿ ಹರಿಯೋ ಸಂಪ್ರದಾಯ ಮಾಡುತ್ತಾರೆ. ಇದೇ ವೇಳೆ ಹೋರಿಗಳನ್ನು ಬೆದರಿಸಿ ಓಡಿಸುವುದನ್ನು ನೋಡಲು ಜಿಲ್ಲೆಯ ನಿಡಗುಂದಿ ತಾಲೂಕಿನ ಮುದ್ದಾಪೂರ ಗ್ರಾಮದ ಪರಸಪ್ಪ ಬಿರಾದಾರ್ ಎಂಬ ಯುವಕ ಬಂದಿದ್ದಾನೆ. ರಸ್ತೆಯ ಪಕ್ಕದಲ್ಲಿ ಜನರ ಮಧ್ಯೆ ಕುಳಿತಿದ್ದ ಪರಸಪ್ಪನ ಮೇಲೆ ಹೋರಿ ಮೇಲೆರಗಿ ದಾಳಿ ಮಾಡಿದೆ. ಕೊಂಬಿನಲ್ಲಿ ಪರಸಪ್ಪ ಬಿರಾದಾರ್​ನನ್ನು ಎತ್ತಿ ಬಿಸಾಕಿದೆ. ಪರಿಣಾಮ ಗಾಳಿಯಲ್ಲಿ ಹಾರಿ ಬಿದ್ದ ಪರಸಪ್ಪನ ಹೊಟ್ಟೆ ಹರಿದು ಕರುಳೆಲ್ಲಾ ಹೊರಗೆ ಬಿದ್ದಿತ್ತು. ಕೂಡಲೇ ಆತನನ್ನು ವಿಜಯಪುರ ನಗರದ ಬಿಎಲ್ಡಿಇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕರುಳಿಗೆ ಹಾಗೂ ಇತರೆ ಭಾಗಕ್ಕೆ ತೀವ್ರ ಗಾಯವಾಗಿದ್ದು ಬಿಎಲ್ಡಿಇ ಆಸ್ಪತ್ರೆಯ ಡಾ. ಎಂಬಿ ಪಾಟೀಲ್ ಉರ್ಫ್ ಆನಂದ ಪಾಟೀಲ್ ನೇತೃತ್ವದಲ್ಲಿ ಶಸ್ತ್ರ ಚಿಕಿತ್ಸೆ ನಡೆಸಿದರು. ಸದ್ಯ ಪರಸಪ್ಪನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ವೈದ್ಯರು ತಿಳಿಸಿದ್ಧಾರೆ.

ಇದನ್ನೂ ಓದಿ: ವಿಜಯಪುರದಲ್ಲಿ ಬಡಿಗೆಯಿಂದ ಹೊಡೆದಾಡುವ ಪದ್ದತಿ: ರಕ್ತ ಬಂದ್ರೇನೆ ಜಾತ್ರೆಗೆ ತೆರೆ, ಏನಿದು ವಿಶಿಷ್ಟ ಆಚರಣೆ

ಗಾಯಗೊಂಡಿರು ಪರಸಪ್ಪ ಬಿರಾದಾರ್​ಗೆ ಬಿಎಲ್ಡಿಇ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ. ಇಂದು ಮಧ್ಯಾಹ್ನದವರೆಗೂ ವೆಂಟಿಲೇಟರ್ ನಲ್ಲಿದ್ದ ಪರಸಪ್ಪನಿಗೆ ಇದೀಗ ವೆಂಟಿಲೇಟರ್ ತೆಗೆಯಲಾಗಿದೆ. ಸಹಜವಾಗಿಯೇ ಸ್ವತಃ ಉಸಿರಾಡುತ್ತಿದ್ದಾರೆ. ಆತನ ರಕ್ತದೊತ್ತಡ ಹೃದಯ ಬಡಿತ ಸೇರಿದಂತೆ ಎಲ್ಲಾ ಅಂಗಾಂಗಳು ಸಹಜವಾಗಿ ಕಾರ್ಯ ನಿರ್ವಹಣೆ ಮಾಡುತ್ತಿವೆ ಎಂದು ವೈದ್ಯರು ಹೇಳಿದ್ದಾರೆ.

ಪರಸಪ್ಪನ ಜೊತೆಗೆ ಪತ್ನಿ ರೇಣುಕಾ ಜೊತೆಗೆ ಇದ್ದು ಉಪಚಾರ ಮಾಡುತ್ತಿದ್ದಾರೆ. ಕಾರಹುಣ್ಣಿಮೆ ಅಂಗವಾಗಿ ಎತ್ತುಗಳನ್ನು ಹೋರಿಗಳನ್ನು ಓಡಿಸುವುದನ್ನು ನೋಡಲು ನನ್ನ ಪತಿ ಕಾಖಂಡಕಿಗೆ ಹೋಗಿದ್ದರು. ಆಗ ಎತ್ತು ನನ್ನ ಗಂಡನ ಮೇಲೆ ದಾಳಿ ಮಾಡಿ ಅನಾಹುತ ಮಾಡಿದೆ. ಹೊಟ್ಟೆ ಹರಿದು ಕರುಗಳು ಹೊರಗಡೆ ಬಿದ್ದಿದ್ದವು. ಆಪರೇಷನ್ ಮಾಡಿದ್ದಾರೆ. ಅವರ ಆರೋಗ್ಯ ಸುಧಾರಣೆಯಾಗುತ್ತಿದೆ. ಇಂತಹ ಪದ್ದತಿ ಆಚರಣೆ ವೇಳೆ ಸೂಕ್ತ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ರೇಣುಕಾ ಹೇಳಿದ್ದಾರೆ.

ಇದನ್ನೂ ಓದಿ: ಮೂವರು ಮಕ್ಕಳ ಸಾವಿನ ಪ್ರಕರಣ; ಮಹಾನಗರ ಪಾಲಿಕೆ ಅಧಿಕಾರಿ, ಸಿಬ್ಬಂದಿಗಳ ಮೇಲೆ ದಾಖಲಾಯ್ತು ಎಫ್​ಐಆರ್

ಸಾರ್ವಜನಿಕರೂ ಸಹ ಕಾಖಂಡಕಿ ಕಾರಹುಣ್ಣಿಮೆ ಪದ್ದತಿಯಲ್ಲಿ ಪ್ರತಿ ವರ್ಷ ಇಂಥ ಅನಾಹುತಗಳು ನಡೆಯುತ್ತವೆ. ಕಾರುಹುಣ್ಣಿಮೆ ಪದ್ದತಿ ಮಾಡಲಿ. ಆದರೆ ಯಾವುದೇ ಅನಾಹುತವಾಗದಂತೆ ಎಚ್ಚರ ವಹಿಸಬೇಕು. ಜಿಲ್ಲಾಡಳಿತ ಪೊಲೀಸ್ ಇಲಾಖೆ ಸಹ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:50 pm, Fri, 28 June 24

ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ