ವಿಜಯಪುರದಲ್ಲಿ ಬಡಿಗೆಯಿಂದ ಹೊಡೆದಾಡುವ ಪದ್ದತಿ: ರಕ್ತ ಬಂದ್ರೇನೆ ಜಾತ್ರೆಗೆ ತೆರೆ, ಏನಿದು ವಿಶಿಷ್ಟ ಆಚರಣೆ
ವಿಜಯಪುರ ತಾಲೂಕಿನ ಕನ್ನೂರು ಗ್ರಾಮದಲ್ಲಿಂದು ಜಾತ್ರೆಯ ಸಡಗರ ಸಂಭ್ರಮ ಮನೆ ಮಾಡಿದೆ. ಕನ್ನೂರಿನ ರೇವಣಸಿದ್ದೇಶ್ವರ ಜಾತ್ರೆಗೆ ಸುತ್ತಮುತ್ತಲಿನ ಗ್ರಾಮಗಳ ಜನರು ಭಾಗಿಯಾಗಿದ್ದರು. ಗ್ರಾಮದ ಶ್ರೀ ರೇವಣಸಿದ್ದೇಶ್ವರ ಜಾತ್ರೆಗೆ ಸುಮಾರು ನಾನ್ನೂರು ವರ್ಷಗಳ ಇತಿಹಾಸವಿದೆ. ಎಲ್ಲ ಜಾತ್ರೆಗಳಂತೆ ಇಲ್ಲಿ ರಥೋತ್ಸವ ಪಲ್ಲಕ್ಕಿ ಉತ್ಸವಗಳಂತ ಪದ್ದತಿ ನಡೆಯಲ್ಲಾ. ಬದಲಾಗಿ ಇಲ್ಲಿ ಬಡಿಗೆಗಳಿಂದ ಪರಸ್ಪರ ಬಡಿದಾಡೋ ಪದ್ದತಿಗಳು ನಡೆದುಕೊಂಡು ಬರುತ್ತಿದೆ.
ವಿಜಯಪುರ, ಜೂನ್ 02: ಅದು ಹಲವಾರು ಶತಮಾನಗಳಿಂದ ನಡೆದುಕೊಂಡು ಸಾಂಪ್ರದಾಯಿಕ ಜಾತ್ರೆ. ಪುರಾತನ ಐತಿಹ್ಯವನ್ನು ಹೊಂದಿರುವ ರೇವಣಸಿದ್ದೇಶ್ವರ ಜಾತ್ರೆಗೆ (Sri Revanasiddeshwara Jathre) ಸಾವಿರಾರು ಜನರು ಸಾಕ್ಷಿಯಾಗದ್ದರು. ಮದುವೆಯಾಗಿ ಹೋಗಿದ್ದವರು ಜಾತ್ರೆಗೆಂದೇ ತವರಿಗೆ ಆಗಮಿಸಿದ್ದರು. ಜಾತ್ರೆಯ ಸಂಭ್ರಮ ಕಣ್ತುಂಬಿಕೊಳ್ಳಲು ಮನೆಗಳ ಮೇಲ್ಚಾವಣಿ ಕಟ್ಟೆಗಳ ಮೇಲೆ ಜನರು ನೆರೆದಿದ್ದರು. ವಿಜಯಪುರ ತಾಲೂಕಿನ ಕನ್ನೂರು ಗ್ರಾಮದ ಈ ಜಾತ್ರೆ ಪ್ರತಿವರ್ಷದಂತೆ ಈ ವರ್ಷವೂ ನಡೆಯಿತು. ಈ ಜಾತ್ರೆಯ ವೈಶಿಷ್ಟತೆ ಬಗ್ಗೆ ತಿಳಿಯಿರಿ.
ಏನಿದು ಬಡಿಗೆ ಜಾತ್ರೆ
ವಿಜಯಪುರ ತಾಲೂಕಿನ ಕನ್ನೂರು ಗ್ರಾಮದಲ್ಲಿಂದು ಜಾತ್ರೆಯ ಸಡಗರ ಸಂಭ್ರಮ ಮನೆ ಮಾಡಿದೆ. ಕನ್ನೂರಿನ ರೇವಣಸಿದ್ದೇಶ್ವರ ಜಾತ್ರೆಗೆ ಸುತ್ತಮುತ್ತಲಿನ ಗ್ರಾಮಗಳ ಜನರು ಭಾಗಿಯಾಗಿದ್ದರು. ಗ್ರಾಮದ ಶ್ರೀ ರೇವಣಸಿದ್ದೇಶ್ವರ ಜಾತ್ರೆಗೆ ಸುಮಾರು ನಾನ್ನೂರು ವರ್ಷಗಳ ಇತಿಹಾಸವಿದೆ. ಎಲ್ಲ ಜಾತ್ರೆಗಳಂತೆ ಇಲ್ಲಿ ರಥೋತ್ಸವ ಪಲ್ಲಕ್ಕಿ ಉತ್ಸವಗಳಂತ ಪದ್ದತಿ ನಡೆಯಲ್ಲಾ. ಬದಲಾಗಿ ಇಲ್ಲಿ ಬಡಿಗೆಗಳಿಂದ ಪರಸ್ಪರ ಬಡಿದಾಡೋ ಪದ್ದತಿಗಳು ನಡೆದುಕೊಂಡು ಬರುತ್ತಿದೆ.
ಇದನ್ನೂ ಓದಿ: ಭೀಕರ ಬರಗಾಲಕ್ಕೆ ಬತ್ತಿದ 500 ಎಕರೆ ಜಂಬಗಿ ಕೆರೆ; ಕುಡಿಯುವ ನೀರಿಗೂ ಪರದಾಟ
ಜಾತ್ರೆಯ ನಿಮಿತ್ಯ ಇಂದು ಪೂಜೆ ಪುನಸ್ಕಾರ ಅಭಿಷೇಕ ಸೇರಿದಂತೆ ಇತರೆ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಬಳಿಕ ಜಾತ್ರೆಗೆ ಚಾಲನೆ ನೀಡಲಾಯಿತು. ರೇವಣ ಸಿದ್ದೇಶ್ವರ ದೇವರ ಮೂರ್ತಿಯ ಮುಖವಾಡವನ್ನು ಒಂದು ಕೋಮಿನವರು ಹಾಗೂ ಹರಕೆ ಹೊತ್ತವರು ಧರಿಸುತ್ತಾರೆ. ಆಗ ರೇವಣಸಿದ್ದೇಶ್ವರ ಮುಖವಾಡ ಧರಿಸಿದವರ ಎದುರು ಮತ್ತೊಂದು ಸಮಾಜದ ಯುವಕರು ಬಡಿಗೆಗಳನ್ನು ಹಿಡಿದು ಕೆಣಕುತ್ತಾರೆ. ರೇವಣಸಿದ್ದೇಶ್ವರ ಮುಖವಾಡ ಹಾಕಿದವರು ಹುಣಸೆ ಮರದ ಹಸಿ ಕಟ್ಟಿಗೆಯಿಂದ ಎದುರಾಳಿಗಳನ್ನು ಹೊಡೆಯಲು ಆರಂಭಿಸುತ್ತಾರೆ. ಆಗ ಬಡಿಗೆಗಳನ್ನು ಹಿಡಿದುಕೊಂಡಿದ್ದ ಯುವಕರು ಬಡಿಗೆಗಳನ್ನು ಅಡ್ಡ ಹಿಡಿದು ಹೊಡೆತದಿಂದ ತಪ್ಪಿಸಿಕೊಳ್ಳುತ್ತಾರೆ. ಈ ರೀತಿ ಜಾತ್ರೆಯ ಸಂಭ್ರಮ ನಡೆಯುತ್ತದೆ.
ಜಾತ್ರೆಯಲ್ಲಿ ಹೀಗೆ ದೇವರ ಮುಖವಾಡ ಹಾಕಿದವರು ಹಾಗೂ ಬಡಿಗೆಗಳೊಂದಿಗೆ ದೇವರ ಕೆಣಕುವ ಮತ್ತೊಂದು ಕೋಮಿನ ತಂಡವರ ನಡುವೆ ಹೋರಾಟ ನಡೆಯುತ್ತದೆ. ಬಡಿಗೆಗಳನ್ನು ಹಿಡಿದುಕೊಂಡ ಹಿಂದುಳಿದ ಸಮುದಾಯದ ಯುವಕರಿಗೆ ಹೊಡೆದು ದೇವರ ಮುಖವನ್ನು ಹಾಕಿದವರು ಹೊಡೆದು ರಕ್ತವನ್ನು ಬರಿಸಬೇಕು. ಆಗ ಜಾತ್ರೆಗೆ ತೆರೆ ಬೀಳುತ್ತದೆ. ರಕ್ತ ಬಿದ್ದ ಬಳಿಕ ಎಲ್ಲರೂ ಗ್ರಾಮದ ಹಳ್ಳದತ್ತ ಬರುತ್ತಾರೆ. ಅಲ್ಲಿ ಕೆಲ ಸಂಪ್ರದಾಯಗಳ ಬಳಿಕ ಜಾತ್ರೆಗೆ ವಿರಾಮ ನೀಡಲಾಗುತ್ತದೆ. ಇದೆಲ್ಲ ಸಂಪ್ರದಾಯಕ್ಕೆ ಹಿಂದಿನ ಐತಿಹ್ಯವಿದೆ.
ಇದನ್ನೂ ಓದಿ: ಲಿಂಬೆ ನಾಡು ಎಂದೇ ಹೆಸರುವಾಸಿಯಾದ ವಿಜಯಪುರದಲ್ಲಿ ನಿಂಬೆಹಣ್ಣಿನ ಕರುಣಾಜನಕ ಕಥೆ!
ಈ ಹಿಂದೆ ಇದೇ ಕನ್ನೂರು ಗ್ರಾಮದಲ್ಲಿ ನಂದಗೊಂಡಗೌಡ ಎಂಬುವವರಿದ್ದರು. ಅವರಿಗೆ ಮಕ್ಕಳಾಗಲಿಲ್ಲಾ ಎಂಬ ಕಾರಣಕ್ಕೆ ನಂದಗೊಂಡಗೌಡ ಅವರು 2ನೇ ಮದುವೆಯನ್ನು ಮಾಡಿಕೊಳ್ಳುತ್ತಾರೆ. ಎರಡನೇ ಪತ್ನಿಗೆ 7 ಮಕ್ಕಳು ಹುಟ್ಟುತ್ತಾರೆ. ಇಷ್ಟರ ಮಧ್ಯ ಮೊದಲನೇಯ ಹೆಂಡತಿಗೆ ರೇವಣಸಿದ್ದ ಎಂಬ ಮಗುವಿನ ಜನನವಾಗುತ್ತದೆ. ಇದು ಎರಡನೇ ಪತ್ನಿಗೆ ಅಸೂಹೆ ಹುಟ್ಟಿಸುತ್ತದೆ. ಮೊದಲ ಪತ್ನಿಯ ಮಗು ರೇವಣಸಿದ್ದ ಜಾನುವಾರುಗಳನ್ನು ಮೇಯಿಸಲು ಹೋದಾಗ ಹಿಂದುಳಿದ ಕೋಮಿನ ಜನರು ಎರಡನೇ ಪತ್ನಿಯ ನಿರ್ದೇಶನದಂತೆ ಹೊಡೆದು ಜಮೀನಿನಲ್ಲಿ ಬಿಸಾಕಿರುತ್ತಾರೆ. ಆಗ ಸಂಜೆಯಾದರೂ ರೇವಣಸಿದ್ದ ಮನೆಗೆ ವಾಪಸ್ ಬಾರದ ಕಾರಣ ಅವರ ತಾಯಿ ಹಾಗೂ ಗ್ರಾಮದ ಇತರರು ಹುಡುಕಾಡುತ್ತಾರೆ.
ಮೂರು ವರ್ಷಕ್ಕೊಮ್ಮೆ ಗ್ರಾಮದಲ್ಲಿ ಜಾತ್ರೆ
ಜಮೀನಿನಲ್ಲಿ ತೀವ್ರ ಗಾಯಗೊಂಡು ಬಿದ್ದಿದ್ದ ರೇವಣಸಿದ್ದ ನಾನು ಮೂರು ವರ್ಷಕ್ಕೊಮ್ಮೆ ಹುಟ್ಟಿ ಬರುತ್ತೇನೆ. ಕಾರಣ ಮೂರು ವರ್ಷಕ್ಕೊಮ್ಮೆ ಗ್ರಾಮದಲ್ಲಿ ಜಾತ್ರೆ ಮಾಡಬೇಕು ಎಂದು ಹೇಳಿ ಪ್ರಾಣ ಬಿಡುತ್ತಾನೆ. ಅಂದಿನಿಂದ ಇಂದಿನವರೆಗೂ ಇಲ್ಲಿ ರೇವಣಸಿದ್ದೇಶ್ವರ ಜಾತ್ರೆಯನ್ನು ಮಾಡಿಕೊಂಡು ಬರಲಾಗುತ್ತಿದೆ.
ಬಡಿಗೆಗಳ ಬಡಿದಾಟದ ಸಂದರ್ಭದಲ್ಲಿ ಭಂಡಾರವನ್ನು ಎರಚಿ ಹರ್ಷೋದ್ಗಾರ ಮಾಡಲಾಗುತ್ತದೆ. ಬಡಿಗೆಗಳ ಹೊಡೆದಾಡುವ ಸನ್ನಿವೇಶವೇ ನೆರೆದ ಜನರು ಭಕ್ತಿಪರವಶವಾಗುವಂತೆ ಮಾಡುತ್ತದೆ. ಗ್ರಾಮದ ಜನರು ಅಷ್ಟೇಯಲ್ಲಾ ವಿಜಯಪುರ ನಗರ ಹಾಗೂ ಇತರೆ ಗ್ರಾಮಗಳ ಜನರು ಹಾಗೂ ನೆರೆಯ ಮಹಾರಾಷ್ಟ್ರದ ಜನರೂ ಸಹ ರೇವಣಸಿದ್ದೇಶ್ವರ ಜಾತ್ರೆಗೆ ಸಾಕ್ಷಿಯಾಗುತ್ತಾರೆ. ನೂರಾರು ವರ್ಷಗಳಿಂದ ಆಚರಿಸಿಕೊಂಡು ಬಂದಿರೋ ಕನ್ನೂರಿನ ಜಾತ್ರೆ ಬಡಿಗೆ ಜಾತ್ರೆಯೆಂದೇ ಪ್ರಸಿದ್ದಿಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.