ಭೀಕರ ಬರಗಾಲಕ್ಕೆ ಬತ್ತಿದ 500 ಎಕರೆ ಜಂಬಗಿ ಕೆರೆ; ಕುಡಿಯುವ ನೀರಿಗೂ ಪರದಾಟ

ಕಳೆದ ಒಂದು ವರ್ಷದ ಭೀಕರ ಬರ ಹಾಗೂ ಪ್ರಖರ ಬೇಸಿಗೆ ಬಳಿಕ ಮಳೆಗಾಲ ಆರಂಭವಾಗಿದೆ. ರಾಜ್ಯದ ಕೆಲ ಜಿಲ್ಲೆಗಳಲ್ಲಿ ವರುಣ ಪ್ರತ್ಯಕ್ಷನಾಗಿದ್ಧಾನೆ. ಇತ್ತ ವಿಜಯಪುರ ಜಿಲ್ಲೆಯಲ್ಲಿ ಭೀಕರ ಬರ ಹಾಗೂ ಬೇಸಿಗೆಯಿಂದ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಮಳೆಗಾಲದಲ್ಲಿ ಅಲ್ಪಸ್ವಲ್ಪ ಮಳೆಯಾದರೂ ಜಲ ಮೂಲಗಳಿಗೆ ನೀರು ಬಂದಿಲ್ಲ. ಈ ನಿಟ್ಟಿನಲ್ಲಿ ವಿಜಯಪುರ ತಾಲೂಕಿನ ಜಂಬಗಿ ಗ್ರಾಮದ ನೂರಾರು ಎಕರೆ ಕೆರೆ ನೀರಿಲ್ಲದೇ ಒಣಗಿ ಹೋಗಿದೆ. ಇದರಿಂದ ಜನ-ಜಾನುವಾರುಗಳು ನೀರಿಗಾಗಿ ಹಾತೊರೆಯುತ್ತಿದ್ದಾರೆ. 

ಭೀಕರ ಬರಗಾಲಕ್ಕೆ ಬತ್ತಿದ 500 ಎಕರೆ ಜಂಬಗಿ ಕೆರೆ; ಕುಡಿಯುವ ನೀರಿಗೂ ಪರದಾಟ
ಭೀಕರ ಬರಗಾಲಕ್ಕೆ ಬತ್ತಿದ 500 ಎಕರೆ ಜಂಬಗಿ ಕೆರೆ
Follow us
ಅಶೋಕ ಯಡಳ್ಳಿ, ವಿಜಯಪುರ
| Updated By: ಕಿರಣ್ ಹನುಮಂತ್​ ಮಾದಾರ್

Updated on:May 26, 2024 | 4:51 PM

ವಿಜಯಪುರ, ಮೇ.26: ಜಿಲ್ಲೆಯಲ್ಲಿ ಅನೇಕ ಕೆರೆಗಳು ಹಾಗೂ ಜಲ ಮೂಲಗಳು ಬತ್ತಿ ಹೋಗಿವೆ. ಸದ್ಯ ಮಳೆಗಾಲ (Rainy season) ಆರಂಭವಾಗಿದ್ದರೂ ಕೆರೆಗಳಿಗೆ ನೀರು ಭರ್ತಿಯಾಗುವಷ್ಟು ಮಳೆಯಾಗಿಲ್ಲ. ಒಂದೆರೆಡು ಬಾರಿ ಮಳೆಯಾಗಿದ್ದರೂ ಮತ್ತೇ ಮಳೆ ಮಾಯವಾಗಿ ವಾರವೇ ಆಗಿದೆ. ವಿಜಯಪುರ(Vijayapura)ತಾಲೂಕಿನ ಜಂಬಗಿ(Jambagi)ಗ್ರಾಮದಲ್ಲಿ 500 ಎಕರೆ ವಿಸ್ತಾರದಲ್ಲಿರುವ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿರುವ ಕೆರೆ, ನೀರಿಲ್ಲದೇ ಖಾಲಿ ಖಾಲಿಯಾಗಿದೆ. ಜಂಬಗಿ, ಆಹೇರಿ, ಶಿರಕನಹಳ್ಳಿ, ಅಂಕಲಗಿ, ಹೊನ್ನಳ್ಳಿ ಹಾಗೂ ಇತರೆ ಗ್ರಾಮಗಳ ಜನ-ಜಾನುವಾರುಗಳ ಹಾಗೂ ಪ್ರಾಣಿ-ಪಕ್ಷಿಗಳಿಗೆ ನೀರಿನ ಮೂಲವಾಗಿತ್ತು.

500 ಎಕರೆ ಪ್ರದೇಶದಲ್ಲಿರುವ ಕೆರೆಯಿಂದ ಸುತ್ತಮುತ್ತಲೂ ಏಳೆಂಟು ಕಿಲೋ ಮೀಟರ್ ಪ್ರದೇಶದಲ್ಲಿರುವ ರೈತರ ಜಮೀನುಗಳಲ್ಲಿದ್ದ ಬಾವಿ, ಕೊಳವೆ ಬಾವಿಗಳಿಗೆ ಅಂತರ್ಜಲ ನೀಡುವ ತಾಣವಾಗಿತ್ತು. ಆದರೆ, ಈಗ ಜಂಬಗಿ ಕೆರೆ ಸಂಪೂರ್ಣ ಬತ್ತಿ ಹೋಗಿ ಬಿರುಕು ಬಿಟ್ಟಿವೆ. ಜಿಲ್ಲೆಯಲ್ಲಿ ಬಾರೀ ಮಳೆಯಾದಾಗ ಮಾತ್ರ ಈ ಕೆರೆ ಕೆಲ ವರ್ಷ ಮಾತ್ರ ಭರ್ತಿಯಾಗಿರುವ ಉದಾಹರಣೆ ಇದೆ. ಇನ್ನುಳಿದಂತೆ ಬಹುತೇಕ ವರ್ಷಗಳಲ್ಲಿ ಜಂಬಗಿ ಕೆರೆ ಖಾಲಿಯಾಗಿಯೇ ಇರುತ್ತದೆ ಎಂದು ರೈತರು ನೋವನ್ನು ಹೊರ ಹಾಕಿದ್ದಾರೆ.

ಇದನ್ನೂ ಓದಿ:ಕಳಪೆ ಟೊಮೇಟೊ ಸಸಿ ಮಾರಾಟ! ಬರಗಾಲದ ನಡುವೆ ಬೆಳೆದಿದ್ದ ಬೆಳೆ ಸಂಪೂರ್ಣ ಹಾಳು

ಜಂಬಗಿ ಕೆರೆಗಿದೆ 43 ವರ್ಷಗಳ ಇತಿಹಾಸ

ಇನ್ನು ಜಂಬಗಿ ಕೆರೆಗೆ 43 ವರ್ಷಗಳ ಇತಿಹಾಸವಿದೆ. 1981 ರಲ್ಲಿ ಆಗಿನ ಸರ್ಕಾರದಲ್ಲಿ ಹೆಚ್​.ಡಿ ದೇವೇಗೌಡ ಅವರು ಜಲ ಸಂಪನ್ಮೂಲ ಸಚಿವರಾಗಿದ್ದರು. ಜಂಬಗಿ ಆಹೇರಿ ಗ್ರಾಮದ ರೈತರ ಮನವೋಲಿಸಿ ಇಲ್ಲಿ 500 ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಂಡು ಕೆರೆಯನ್ನು ನಿರ್ಮಾಣ ಮಾಡಿದ್ದರು. ಜಂಬಗಿ ಕೆರೆಯಲ್ಲಿ ನೀರು ನಿಂತರೆ ಸುತ್ತಮುತ್ತಲ ಗ್ರಾಮಗಳ ಜನರಿಗೆ ಅನಕೂಲವಾಗುತ್ತದೆ ಎಂಬುದನ್ನು ಅಂದು ದೇವೇಗೌಡರು ಮನಗಂಡಿದ್ದರು. ರೈತರೂ ಸಹ ಎಲ್ಲರಿಗೂ ಅನುಕೂಲವಾಗುತ್ತದೆ, ನಮ್ಮೂರಿಗೆ ಕೆರೆಯಾಗಿ ನೀರು ನಿಂತರೆ ಅನಕೂಲವೆಂದೇ ಕನಸು ಕಂಡಿದ್ದರು. ಆದರೆ, ಕೆರೆಯೆನೋ ನಿರ್ಮಾಣವಾಯಿತು. ಕೆರೆಯಲ್ಲಿ ನೀರು ನಿಂತಿದ್ದು ಮಾತ್ರ ಅಪರೂಪ.

ನೀರು ಬಿಡಬೇಕೆಂದು ಜನರ ಒತ್ತಾಯ

ಪ್ರವಾಹದ ರೀತಿಯಲ್ಲಿ ಮಳೆಯಾದಾಗ ಮಾತ್ರ ಕೆರೆಯಲ್ಲಿ ನೀರು ಭರ್ತಿಯಾಗಿದ್ದು ಬಿಟ್ಟರೆ ಬಹುತೇಕ ವರ್ಷಗಳಲ್ಲಿ ಕೆರೆ ಭರ್ತಿಯಾಗಿಲ್ಲ. ಇತ್ತೀಚೆಗೆ ಕೆರೆಗಳಿಗೆ ನೀರು ತುಂಬಿಸೋ ಯೋಜನೆಯಲ್ಲಿ ಈ ಭಾಗದ ಜನರು, ರೈತರು ಹೋರಾಟ ಮಾಡಿದಾಗ ಜಂಬಗಿ ಕೆರೆಗೆ ನೀರು ಬಂದಿದೆ. ಇಲ್ಲವಾದರೆ ನೀರಿಲ್ಲದೇ ಕೆರೆ ಭಣಗುಟ್ಟಿದೆ. ಸದ್ಯ ಜಂಬಗಿ ಕೆರೆ ಸಂಪೂರ್ಣ ಬತ್ತಿ ಹೋಗಿದ್ದು, ನಮ್ಮೂರ ಕೆರೆಗೆ ನೀರು ಹರಿಸಬೇಕೆಂದು ರೈತರು, ಜನರು ಒತ್ತಾಯ ಮಾಡಿದ್ದಾರೆ. ಜಿಲ್ಲೆಯ ಪ್ರಮುಖ 101 ಕೆರೆಗಳಿಗೆ ನೀರು ತುಂಬಿಸೋ ಕೆಲಸ ನಡೆದಿದೆ. ಈ ಯೋಜನೆಯ ಪಟ್ಟಿಯಲ್ಲಿ ಜಂಬಗಿ ಕೆರೆಯೂ ಇದೆ. ಪಟ್ಟಿಯಲ್ಲಿ ಹೆಸರಿದ್ದರೂ ನಮ್ಮೂರ ಕೆರೆಗೆ ನೀರು ಹರಿದಿಲ್ಲ. ನಾವೆಲ್ಲ ಪಡಬಾರದ ಕಷ್ಟ ಪಡುತ್ತಿದ್ದೇವೆ, ನಮ್ಮೂರ ಕೆರೆಗೆ ನೀರು ಬಿಡಬೇಕೆಂದು ಜನರು ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ:ಹಾವೇರಿ: ಸ್ವಂತ ಹಣದಲ್ಲಿ ಬೋರ್​ವೆಲ್​ ಕೊರಸಿ ನದಿಗೆ ನೀರು ಬಿಟ್ಟ ರೈತ: ಬರಗಾಲದ ಭಗೀರಥ ಎಂದ ಗ್ರಾಮಸ್ಥರು

ಜಂಬಗಿ ಕೆರೆಗೆ ನೀರು ಭರಿಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್, ಜಿಲ್ಲಾಡಳಿತ ಹಾಗೂ ಕೆಬಿಜೆಎನ್ಎಲ್ ಆಧಿಕಾರಿಗಳು ಗಮನ ಹರಿಸಬೇಕಿದೆ. ಕೆರೆಗಳಿಗೆ ನೀರು ತುಂಬಿಸೋ ಯೋಜನೆಗಳ ಪಟ್ಟಿಯಲ್ಲಿರುವ ಜಂಬಗಿ ಕೆರೆಗೆ ಅಧಿಕಾರಿಗಳು ಇನ್ನೂ ನೀರು ಬಿಟ್ಟಿಲ್ಲ. ಇನ್ನಾದರೂ ಬರಿದಾಗಿ ಬತ್ತಿ ಹೋಗಿರೋ ಜಂಬಗಿ ಕೆರೆಗೆ ನೀರು ಹರಿಸಬೇಕೆಂದು ಜಂಬಗಿ ಹಾಗೂ ಸುತ್ತಮುತ್ತಲ ಗ್ರಾಮಗಳ ಜನರು, ರೈತರು ಮನವಿ ಮಾಡಿದ್ದಾರೆ. ರೈತರ ಮನವಿಗೆ ಸಂಬಂಧಿಸಿದವರು ಗಮನ ಹರಿಸುತ್ತಾರೋ ಇಲ್ಲವೋ ಎಂಬುದನ್ನು ಕಾಯ್ದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:48 pm, Sun, 26 May 24

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ