ಹಾವೇರಿ: ಸ್ವಂತ ಹಣದಲ್ಲಿ ಬೋರ್​ವೆಲ್​ ಕೊರಸಿ ನದಿಗೆ ನೀರು ಬಿಟ್ಟ ರೈತ: ಬರಗಾಲದ ಭಗೀರಥ ಎಂದ ಗ್ರಾಮಸ್ಥರು

ಹಾವೇರಿ ತಾಲೂಕಿನ ಸಂಗೂರು ಗ್ರಾಮದ ರೈತ ಭುವನೇಶ್ವರ ಶಿಡ್ಲಾಪು ವರದಾ ನದಿಗೆ ತನ್ನ ಸ್ವಂತ ದುಡ್ಡಿನಲ್ಲಿ ಬೋರ್ ವೇಲ್ ಕೊರಸಿ ನದಿಗೆ ನೀರು ಬಿಟ್ಟಿದ್ದಾನೆ‌. ಕಳೆದ ಹದಿನೈದು ದಿನದಿಂದ ನಿತ್ಯ ನೀರು ಬಿಡುತ್ತಿರುವುದರಿಂದ ಗ್ರಾಮದ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತಕ್ಕ ಮಟ್ಟಿಗೆ ಕಡಿಮೆಯಾಗಿದೆ ಅಂತ್ತಿದ್ದಾರೆ ಸಂಗೂರು ಗ್ರಾಮದ ರೈತರು. 

ಹಾವೇರಿ: ಸ್ವಂತ ಹಣದಲ್ಲಿ ಬೋರ್​ವೆಲ್​ ಕೊರಸಿ ನದಿಗೆ ನೀರು ಬಿಟ್ಟ ರೈತ: ಬರಗಾಲದ ಭಗೀರಥ ಎಂದ ಗ್ರಾಮಸ್ಥರು
ಭುವನೇಶ್ವರ ಶಿಡ್ಲಾಪುರ, ವರದಾ ನದಿಗೆ ನೀರು ಬಿಟ್ಟ ರೈತ
Follow us
ಗಂಗಾಧರ​ ಬ. ಸಾಬೋಜಿ
|

Updated on:Mar 25, 2024 | 5:12 PM

ಹಾವೇರಿ, ಮಾರ್ಚ್​​ 25: ಈ ಬಾರಿ ರಾಜ್ಯದಲ್ಲಿ ಆವರಿಸಿರುವ ಭೀಕರ ಬರಗಾಲ (drought) ಕ್ಕೆ ರಾಜ್ಯದಲ್ಲಿ ಜಲಕ್ಷಾಮ ಎದುರಾಗಿದೆ. ಇದಕ್ಕೆ ಹಾವೇರಿ ಜಿಲ್ಲೆ ಏನು ಹೊರತಾಗಿಲ್ಲ. ಇಲ್ಲಿ ಹರಿಯುವ ತುಂಗಭದ್ರಾ, ವರದಾ, ಧರ್ಮಾ, ಕುಮಧ್ವತಿ ನಾಲ್ಕು ನದಿಗಳ ಒಡಲು ಖಾಲಿ ಖಾಲಿ ಆಗಿವೆ. ಜನರು ನೀರಿಗಾಗಿ ಹಪಹಪಿಸುತ್ತಿದ್ದಾರೆ. ಇದನ್ನು ಅರಿತ ಜಿಲ್ಲೆಯ ಹಾವೇರಿ ತಾಲೂಕಿನ ಸಂಗೂರು ಗ್ರಾಮದ ರೈತ ಭುವನೇಶ್ವರ ಶಿಡ್ಲಾಪು ವರದಾ ನದಿಗೆ ತನ್ನ ಸ್ವಂತ ದುಡ್ಡಿನಲ್ಲಿ ಬೋರ್ ವೇಲ್ ಕೊರಸಿ ನದಿಗೆ ನೀರು ಬಿಟ್ಟಿದ್ದಾನೆ‌. ಕಳೆದ ಹದಿನೈದು ದಿನದಿಂದ ನಿತ್ಯ ನೀರು ಬಿಡುತ್ತಿರುವುದರಿಂದ ಗ್ರಾಮದ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತಕ್ಕ ಮಟ್ಟಿಗೆ ಕಡಿಮೆಯಾಗಿದೆ ಅಂತ್ತಿದ್ದಾರೆ ಸಂಗೂರು ಗ್ರಾಮದ ರೈತರು.

ಸಂಗೂರು ಗ್ರಾಮದ ರೈತ ಮುಖಂಡ ಭುವನೇಶ್ವರ ಶಿಡ್ಲಾಪುರ ವರದಾ ನದಿಯ ಪಕ್ಕದಲ್ಲೇ ಇರುವ ತನ್ನ 20 ಎಕರೆ ಜಮೀನಿಗೆ ಎರಡು ಪಂಪ್ ಸೇಟ್ ಮೂಲಕ ನೀರು ಅವಲಂಬಿಸಿದ್ದ ಪಂಪ್ ಸೇಟ್ ನಂಬಿ ಅಡಿಕೆ, ತೆಂಗು, ಭತ್ತ, ಗೋವಿನ ಜೋಳ ಸೇರಿದಂತೆ ವಿವಿಧ ಬೆಳೆ ಬೆಳೆದಿದ್ದ. ವರದಾ ನದಿ ನೀರು ಬತ್ತಿದ ಹಿನ್ನಲೆ ಬೆಳೆ ಒಣಗಲಾರಂಭಿಸಿದ್ದು ಹೀಗಾಗಿ ಎರಡು ಲಕ್ಷ ರೂ. ಹಣ ಖರ್ಚು ಮಾಡಿ ಹದಿನೈದು ದಿನದ ಹಿಂದೆ ಬೋರ್ ವೇಲ್ ಕೊರೆಸಿದ್ದರು.

ಇದನ್ನೂ ಓದಿ: ಬೆಂಗಳೂರಲ್ಲಿ ನೀರು ಪೋಲು ಮಾಡಿದವರಿಗೆ ದಂಡ ವಿಧಿಸಿದ ಜಲಮಂಡಳಿ: 1 ಲಕ್ಷಕ್ಕೂ ಹೆಚ್ಚು ವಸೂಲಿ

ದೇವರ ದಯದಿಂದ ಐದು ಇಂಚು ನೀರು ಬಿದ್ದಿತ್ತು, ಆದರೆ ಗ್ರಾಮದಲ್ಲಿ ಎದುರಾಗಿರುವ ನೀರಿನ ಬವಣೆ ಅರೆತುಕೊಂಡ ಭುವನೇಶ್ವರ ತನ್ನ ಬೆಳೆ ಒಣಗಿದರು ಪರವಾಗಿಲ್ಲಾ ಎಂದು ಯಾವುದೇ ಫಲಾಪೇಕ್ಷ ಬಯಸದೆ ರೈತರ ಜಾನುವಾರುಗಳಿಗೆ ಮತ್ತು ವನ್ಯಜೀವಿಗಳಿಗೆ ಅನುಕೂಲವಾಗಲಿ ಎಂದು ಬೋರ್ ನೀರು ಎತ್ತಿದ್ದಾಗಿನಿಂದಲು ವರದಾ ನದಿಗೆ ನೀರು ಬಿಟ್ಟಿದ್ದಾರೆ.

ಇದನ್ನೂ ಓದಿ: Bengaluru Water Crisis: 24 ಸಾವಿರ ಲೀಟರ್​ ಮತ್ತು ಮೇಲ್ಪಟ್ಟ ವಾಟರ್​ ಟ್ಯಾಂಕರ್​ಗಳಿಗೂ ದರ ನಿಗದಿ

ಈ ರೈತನ ಕಾರ್ಯಕ್ಕೆ ಸಂಗೂರು ಗ್ರಾಮದ ಜನರು ಮೆಚ್ಚಿಗೆ ವ್ಯಕ್ತಪಡಿಸುತ್ತಿದ್ದಾರೆ. ಬರಗಾಲದಲ್ಲಿ ನೀರಿನ ಬವಣೆ ಹೆಚ್ಚಾಗಿದೆ. ಇದನ್ನು ಅರಿತುಕೊಂಡು ಉಳಿದ ರೈತರು ತಮಗಾದ ಅಳಿಲು ಸೇವೆ ಮಾಡಲಿ ಎನ್ನುವುದು ಭುವನೇಶ್ವರ ಮನದಾಳದ ಮಾತು. ಜೊತೆಗೆ ಸರ್ಕಾರ ರೈತರ ನೇರವಿಗೆ ಬರಬೇಕು ಎಂದು ಒತ್ತಾಯ ಮಾಡಲಾಗಿದೆ.

ವರದಿ: ಅಣ್ಣಪ್ಪ ಬಾರ್ಕಿ 

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:11 pm, Mon, 25 March 24

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ