Bengaluru Water Crisis: 24 ಸಾವಿರ ಲೀಟರ್​ ಮತ್ತು ಮೇಲ್ಪಟ್ಟ ವಾಟರ್​ ಟ್ಯಾಂಕರ್​ಗಳಿಗೂ ದರ ನಿಗದಿ

Bengaluru Tanker Water Rate: ಬೆಂಗಳೂರಿನಲ್ಲಿ ಟ್ಯಾಂಕರ್​ ಮಾಫಿಯಾಕ್ಕೆ ಕಡಿವಾಣ ಹಾಕುಲು ಬೆಂಗಳೂರು ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ದಿಟ್ಟ ಹೆಜ್ಜೆಯನ್ನಟ್ಟಿದೆ. ಈ ಹಿಂದೆ 600 ರಿಂದ 1,200 ಲೀಟರ್​ ವಾಟರ್​ ಟ್ಯಾಂಕರ್​ಗಳಿಗೆ ಮಾತ್ರ ದರ ನಿಗದಿ ಮಾಡಿದ್ದ ಜಲಮಂಡಳಿ ಇದೀಗ 24 ಸಾವಿರ ಲೀಟರ್​ ಮತ್ತು ಮೇಲ್ಪಟ್ಟ ವಾಟರ್​ ಟ್ಯಾಂಕರ್​ಗಳಿಗೂ ದರ ನಿಗದಿ ಮಾಡಿದೆ.

Bengaluru Water Crisis: 24 ಸಾವಿರ ಲೀಟರ್​ ಮತ್ತು ಮೇಲ್ಪಟ್ಟ ವಾಟರ್​ ಟ್ಯಾಂಕರ್​ಗಳಿಗೂ ದರ ನಿಗದಿ
ವಾಟರ್​ ಟ್ಯಾಂಕರ್​
Follow us
TV9 Web
| Updated By: ವಿವೇಕ ಬಿರಾದಾರ

Updated on: Mar 23, 2024 | 9:36 PM

ಬೆಂಗಳೂರು, ಮಾರ್ಚ್​​ 23: ಬೆಂಗಳೂರು ಕುಡಿಯುವ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) 24 ಸಾವಿರ ಲೀಟರ್​ ಮತ್ತು ಮೇಲ್ಪಟ್ಟ ವಾಟರ್​ ಟ್ಯಾಂಕರ್​ಗಳಿಗೆ (Water Tanker) ದರ ನಿಗದಿ ಮಾಡಿ ಆದೇಶ ಹೊರಡಿಸಿದೆ. 24 ಸಾವಿರ ಲೀಟರ್​ ಮತ್ತು ಮೇಲ್ಪಟ್ಟ 200 ವಾಟರ್ ಟ್ಯಾಂಕರ್​​ಗಳನ್ನು ಮೂರು ತಿಂಗಳ ಅವಧಿಗೆ ಬಾಡಿಗೆಗೆ ಪಡೆದಿದೆ. ಸಾರ್ವಜನಿಕರು ಈ ವಾಟರ್​ ಟ್ಯಾಂಕರ್​ಗಳನ್ನು ಉಪಯೋಗಿಸಕೊಳ್ಳಬಹುದಾಗಿದೆ.

24 ಸಾವಿರ ಲೀಟರ್​ ಮತ್ತು ಮೇಲ್ಪಟ್ಟ ವಾಟರ್​ ಟ್ಯಾಂಕರ್​ಗಳ ದರ

  • 16 ಸಾವಿರ ಲೀಟರ್ ಟ್ಯಾಂಕರ್​ಗೆ 12,100 ರೂಪಾಯಿ
  • 23 ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕರ್​ಗೆ 15400 ರೂಪಾಯಿ
  • 30 ಸಾವಿರ ಲೀಟರ್ ಖಾಲಿ ಟ್ಯಾಂಕರ್​ಗೆ 17,900 ರೂಪಾಯಿ ನಿಗದಿ ಮಾಡಿದೆ.

600 ರಿಂದ 1,200 ಲೀಟರ್​ ವಾಟರ್​ ಟ್ಯಾಂಕರ್​ಗಳ ದರ

  • 6 ಸಾವಿರ ಲೀಟರ್ ಟ್ಯಾಂಕರ್​ಗೆ 600 ರೂ. ದರ ನಿಗದಿ. ಇದು 5 ಕಿಲೋ ಮೀಟರ್ ಒಳಗಡೆಗೆ ಮಾತ್ರ ಅನ್ವಯವಾಗಲಿದೆ.
  • 6 ಸಾವಿರ ಲೀಟರ್ ಟ್ಯಾಂಕರ್ ಗೆ 750 ರೂ. ದರ ನಿಗದಿ. ಇದು 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಅನ್ವಯವಾಗಲಿದೆ.
  • 8 ಸಾವಿರ ಲೀಟರ್ ಟ್ಯಾಂಕರ್​ಗೆ 700 ರೂ. ದರ ನಿಗದಿ‌‌ ಮಾಡಲಾಗಿದ್ದು, ಇದು 5 ಕಿಲೋ ಮೀಟರ್ ಒಳಗೆ ಅನ್ವಯವಾಗಲಿದೆ.
  • 8 ಸಾವಿರ ಲೀಟರ್​ಗೆ 850 ರೂ. ದರ ನಿಗದಿ ಮಾಡಲಾಗಿದ್ದು, 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಈ ದರ ಪಡೆಯಬಹುದಾಗಿದೆ.
  • 5 ಕಿಲೋ ಮೀಟರ್ ವ್ಯಾಪ್ತಿಗೆ 1,200 ಲೀಟರ್ ಟ್ಯಾಂಕರ್​​ಗೆ 1000 ರೂ. ದರ ನಿಗದಿ ಮಾಡಲಾಗಿದೆ.
  • 1200 ಲೀಟರ್ ಟ್ಯಾಂಕರ್​​​ಗೆ 1200 ರೂ. ದರ ಫಿಕ್ಸ್ ಮಾಡಲಾಗಿದ್ದು 10 ಕಿಲೋ ಮೀಟರ್ ವ್ಯಾಪ್ತಿಗೆ ಅನ್ವಯವಾಗಲಿದೆ.

ಇದನ್ನೂ ಓದಿ: ಹೋಳಿ ಹಬ್ಬಕ್ಕೆ ಕಾವೇರಿ ನೀರು ಬಳಸದಂತೆ ಸೂಚನೆ ನೀಡಿದ ಜಲಮಂಡಳಿ

ತಿಂಗಳ ಬಾಡಿಗೆ ಒಪ್ಪಿಕೊಳ್ಳುವವರಿಗೆ 5 ಕಿಲೋ ಮೀಟರ್​​​ಗೆ 510 ರೂ. ನಿಗದಿಪಡಲಾಗಿದೆ. 10 ಕಿಲೋ ಮೀಟರ್ ಹೋದರೆ 650 ರೂ. ದರ ಫಿಕ್ಸ್ ಮಾಡಲಾಗಿದೆ. ಜಲಮಂಡಳಿ ಈ ಹಿಂದೆ 600 ರಿಂದ 1,200 ಲೀಟರ್​ ವಾಟರ್​ ಟ್ಯಾಂಕರ್​ಗಳಿಗೂ ಮಾತ್ರ ದರ ನಿಗದಿ ಮಾಡಿತ್ತು. ಇದೀಗ 24 ಸಾವಿರ ಲೀಟರ್​ ಮತ್ತು ಮೇಲ್ಪಟ್ಟ ವಾಟರ್​ ಟ್ಯಾಂಕರ್​ಗಳಿಗೆ ದರ ನಿಗದಿ ಮಾಡಿದೆ. ಜಿಎಸ್​​ಟಿ ಸೇರಿಸಿ ಈ ದರ ನಿಗದಿ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಟ್ಯಾಂಕರ್​ ಮಾಫಿಯಾಕ್ಕೆ ಕಡಿವಾಣ

ಟ್ಯಾಂಕರ್​ ಮಾಫಿಯಾಕ್ಕೆ ಕಡಿವಾಣ ಹಾಕುವ ಸಂಬಂಧ ಇತ್ತೀಚೆಗಷ್ಟೇ ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಆ ಸಭೆಯಲ್ಲಿ, ನೀರಿನ ಟ್ಯಾಂಕರ್‌ಗಳ ಮಾಲೀಕರು ಮಾರ್ಚ್​ 7ರ ಗಡುವಿನ ಒಳಗೆ ನೋಂದಣಿ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿತ್ತು. ದರ ನಿಗದಿ ಸಂಬಂಧ ಈ ಸೂಚನೆ ನೀಡಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ