AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೋಳಿ ಹಬ್ಬಕ್ಕೆ ಕಾವೇರಿ ನೀರು ಬಳಸದಂತೆ ಸೂಚನೆ ನೀಡಿದ ಜಲಮಂಡಳಿ

ಬೆಂಗಳೂರು ನಗರದಲ್ಲಿ ಮಳೆಯ ಅಭಾವದಿಂದಾಗಿ ಅಂತರ್ಜಲ ಮಟ್ಟ ಕುಸಿದಿರುವುದರಿಂದ ಸಾಕಷ್ಟು ಕೊಳವೆ ಬಾವಿಗಳು ಬತ್ತಿ ಹೋಗಿದೆ. ಈ ಸಂಬಂಧ, ಹೋಳಿ ಹಬ್ಬದಲ್ಲಿ ರೈನ್ ಡ್ಯಾನ್ಸ್​ಗೆ ಕಾವೇರಿ ನೀರು ಹಾಗೂ ಬೋರ್ ವೆಲ್ ನೀರು ಬಳಸದಂತೆ ಬೆಂಗಳೂರು ಜಲಮಂಡಳಿ ಖಡಕ್ ​ ಸೂಚನೆ ನೀಡಿದೆ.

ಹೋಳಿ ಹಬ್ಬಕ್ಕೆ ಕಾವೇರಿ ನೀರು ಬಳಸದಂತೆ ಸೂಚನೆ ನೀಡಿದ ಜಲಮಂಡಳಿ
ಹೋಳಿ ಹಬ್ಬಕ್ಕೆ ಕಾವೇರಿ ನೀರು ಬಳಸದಂತೆ ಸೂಚನೆ ನೀಡಿದ ಜಲಮಂಡಳಿ
Poornima Agali Nagaraj
| Updated By: ಕಿರಣ್ ಹನುಮಂತ್​ ಮಾದಾರ್|

Updated on: Mar 20, 2024 | 6:04 PM

Share

ಬೆಂಗಳೂರು, ಮಾ.20: ಇದೇ ಮಾರ್ಚ್ 25 ರಂದು ನಡೆಯುವ ಹೋಳಿ‌ ಹಬ್ಬ(Holi Habba)ಕ್ಕೆ ಸಜ್ಜಾಗಿದ್ದ ಹೋಟೆಲ್ ಹಾಗೂ ರೆಸಾರ್ಟ್​ಗಳಿಗೆ ಜಲಮಂಡಳಿ ಶಾಕ್‌ ನೀಡಿದ್ದು, ಹೋಳಿ ಹಬ್ಬದಲ್ಲಿ ರೈನ್ ಡ್ಯಾನ್ಸ್​ಗೆ ಕಾವೇರಿ ನೀರು ಹಾಗೂ ಬೋರ್ ವೆಲ್ ನೀರು ಬಳಸದಂತೆ ಖಡಕ್​ ಸೂಚನೆ ನೀಡಿದೆ. ಈಗಾಗಲೇ ಬೆಂಗಳೂರಿನಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದ್ದು, ಈ ಹಿನ್ನಲೆ ಎಚ್ಚೆತ್ತ ಬೆಂಗಳೂರು ಜಲಮಂಡಳಿ, ನೀರು ಬಳಸದಂತೆ ಆದೇಶಿಸಿದೆ.

ಬೆಂಗಳೂರು ನಗರದಲ್ಲಿ ಮಳೆಯ ಅಭಾವದಿಂದಾಗಿ ಅಂತರ್ಜಲ ಮಟ್ಟ ಕುಸಿದಿರುವುದರಿಂದ ಸಾಕಷ್ಟು ಕೊಳವೆ ಬಾವಿಗಳು ಬತ್ತಿ ಹೋಗಿದೆ. ಈ ಸಂಬಂಧ, ಉಲ್ಬಣವಾಗಿರುವ ಸಮಸ್ಯೆಗಳನ್ನು ಮಂಡಳಿಯೂ ಸಮರ್ಪಕವಾಗಿ ನಿರ್ವಹಿಸಲು ಎಲ್ಲರ ಸಹಕಾರ ಬಹಳ ಮಹತ್ವದಾಗಿರುತ್ತದೆ. ಈ ಹಿನ್ನಲೆಯಲ್ಲಿ ಹೋಳಿ ಹಬ್ಬವು ಸಾಂಸ್ಕೃತಿವಾದ ಆಚರಣೆಯ ಹಬ್ಬ. ಇದನ್ನ ತಮ್ಮ ಮನೆಗಳಲ್ಲಿ, ವಾಸಸ್ಥಳಗಳಲ್ಲಿ ಆಚರಿಸುವುದಕ್ಕೆ ಯಾವುದೇ ಅಭ್ಯಂತರ ಇಲ್ಲ.

ಇದನ್ನೂ ಓದಿ:ಬೆಂಗಳೂರು ಹೊರ ವಲಯದ ನೀರಿನ ಅಭಾವ ತಪ್ಪಿಸಲು ಜಲಮಂಡಳಿಯಿಂದ ಹೊಸ ಪ್ಲ್ಯಾನ್​​

ಜೊತೆಗೆ ಸಾಂಸ್ಕೃತಿವಾಗಿ ಆಚರಣೆ ಮಾಡುವುದಕ್ಕೆ ಯಾವುದೇ ನಿಷೇಧ ಹೇರುವುದಿಲ್ಲ. ಆದರೆ, ಈ ಸಂದರ್ಭದಲ್ಲಿ ಮನೋರಂಜನೆಯಾಗಿ ವಾಣಿಜ್ಯ ಉದ್ದೇಶದಿಂದ ರೈನ್ ಡ್ಯಾನ್ಸ್, ಪೂಲ್ ಡ್ಯಾನ್ಸ್ ಆಯೋಜಿಸುವುದು ಸಮಂಜಸವಾಗಿರುವುದಿಲ್ಲ. ಮನೋರಂಜನೆಗಾಗಿ ವಾಣಿಜ್ಯ ಉದ್ದೇಶದಿಂದ ಆಯೋಜಿಸುವಂತಹ ರೈನ್ ಡ್ಯಾನ್ಸ್, ಪೂಲ್ ಡ್ಯಾನ್ಸ್‌ಗಳಿಗೆ ಸಾರ್ವಜನಿಕ ಹಿತದೃಷ್ಠಿಯಿಂದ ಕಾವೇರಿ ನೀರು ಹಾಗೂ ಬೋರ್ ವೆಲ್ ನೀರು ಬಳಸದಂತೆ  ಸೂಚನೆ ನೀಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ