ಬೆಂಗಳೂರಿನಲ್ಲಿ ಒಂದೇ ಕುಟುಂಬದ ಮೂವರು ಸಾವು ಪ್ರಕರಣ; ಡಿಸಿಪಿ ಹೇಳಿದ್ದಿಷ್ಟು

ಜೆಪಿ ನಗರ(JP Nagar) ಠಾಣಾ ವ್ಯಾಪ್ತಿಯಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಧಾರುಣ ಇಂದು (ಮಾ.20) ಬೆಳಗ್ಗೆ 7 ಗಂಟೆ ಸುಮಾರಿಗೆ ನಡೆದಿದೆ. ಈ ಕುರಿತು ಮಾತನಾಡಿದ ದಕ್ಷಿಣ ವಿಭಾಗ ಡಿಸಿಪಿ ಶಿವಪ್ರಕಾಶ್ ದೇವರಾಜ್, ‘ಘಟನೆ ಕುರಿತು ನಮಗೆ 8.30 ಕ್ಕೆ ಮೇಸೆಜ್ ಬರುತ್ತದೆ. ಪ್ರಾಥಮಿಕ ವಿಚಾರಣೆ ವೇಳೆ ಆತ್ಮಹತ್ಯೆಗೆ ಸಾಲ ಬಾದೆಯೇ ಕಾರಣ ಎಂದು ಗೊತ್ತಾಗುತ್ತಿದೆ ಎಂದರು.

ಬೆಂಗಳೂರಿನಲ್ಲಿ ಒಂದೇ ಕುಟುಂಬದ ಮೂವರು ಸಾವು ಪ್ರಕರಣ; ಡಿಸಿಪಿ ಹೇಳಿದ್ದಿಷ್ಟು
ಸಾಂದರ್ಭಿಕ ಚಿತ್ರ
Follow us
Shivaprasad
| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 20, 2024 | 5:05 PM

ಬೆಂಗಳೂರು, ಮಾ.20: ಜೆಪಿ ನಗರ(JP Nagar) ಠಾಣಾ ವ್ಯಾಪ್ತಿಯಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಧಾರುಣ ಇಂದು (ಮಾ.20) ಬೆಳಗ್ಗೆ 7 ಗಂಟೆ ಸುಮಾರಿಗೆ ನಡೆದಿದೆ. ಪತಿ ಜಯಾನಂದ್, ಪತ್ನಿ ಸುಕನ್ಯಾ ಮಕ್ಕಳಾದ ನಿಶ್ಚಿತ್, ನಿಕಿತ್ ಮೃತ ರ್ದುದೈವಿಗಳು. ಇನ್ನು ಮೂವರ ಶವಗಳ ಬಳಿ ವೈಯರ್ ಪತ್ತೆ ಹಿನ್ನೆಲೆ ಪೊಲೀಸರಿಗೆ ಹಲವು ಅನುಮಾನ ಮೂಡಿದೆ. ಇದು ಆತ್ಮಹತ್ಯೆನಾ ಅಥವಾ ಓರ್ವರಿಗೆ ಕರೆಂಟ್ ಆದಾಗ ಬಿಡಿಸುವುದಕ್ಕೆ ಹೋಗಿ ಈ ಘಟನೆ ನಡೆದಿದೆಯಾ ಎನ್ನುವ ಶಂಕೆ ವ್ಯಕ್ತವಾಗಿದೆ. ಸದ್ಯ ಘಟನಾ ಸ್ಥಳದಲ್ಲಿ ಜೆಪಿ ನಗರ ಪೊಲೀಸರು, ಎಫ್​ಎಸ್​ಎಲ್, ಸೋಕೋ ಟೀಂನಿಂದ ಪರಿಶೀಲನೆ ನಡೆಸಲಾಗುತ್ತಿದೆ.

ದಕ್ಷಿಣ ವಿಭಾಗ ಡಿಸಿಪಿ ಹೇಳಿದ್ದಿಷ್ಟು

ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ದಕ್ಷಿಣ ವಿಭಾಗ ಡಿಸಿಪಿ ಶಿವಪ್ರಕಾಶ್ ದೇವರಾಜ್, ‘ಬೆಂಗಳೂರಿನಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಪ್ರಕರಣ ಕುರಿತು ನಮಗೆ 8.30 ಕ್ಕೆ ಮೇಸೆಜ್ ಬರುತ್ತದೆ. ಪ್ರಾಥಮಿಕ ವಿಚಾರಣೆ ವೇಳೆ ಆತ್ಮಹತ್ಯೆಗೆ ಸಾಲ ಬಾದೆಯೇ ಕಾರಣ ಎಂದು ಗೊತ್ತಾಗುತ್ತಿದೆ. ಇದನ್ನು ಹೊರತುಪಡಿಸಿ ಯಾರಾದರೂ ಕಿರುಕುಳ ಕೊಟ್ಟಿದ್ದರೆ, ವಿಚಾರಣೆ ಮಾಡುತ್ತೇವೆ. ಸದ್ಯ ಕೋಣೆಯಲ್ಲಿ ಸುಟ್ಟಸ್ಥಿತಿಯಲ್ಲಿ ದೇಹಗಳು ಪತ್ತೆಯಾಗಿವೆ ಎಂದು ಹೇಳಿದರು.

ಇದನ್ನೂ ಓದಿ:ಹೊಳೆನರಸೀಪುರದಲ್ಲಿ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ; ಯುವಕ ಸಾವು

ಘಟನೆ ವಿವರ

ಇನ್ನು ಮನೆಯಲ್ಲಿ ನಾಲ್ಕು ಜನ ವಾಸವಿದ್ದರು. ಮೃತ ಜಯಾನಂದ್ ಪ್ಲಾಸ್ಟಿಕ್ ಬಾಕ್ಸ್ ಪ್ಯಾಕ್ಟರಿಯೊಂದನ್ನ ನಡೆಸುತ್ತಿದ್ದ. ಆದರೆ, ಇತ್ತೀಚೆಗೆ ಫ್ಯಾಕ್ಟರಿ ಲಾಸ್ ಆಗಿ ಕ್ಲೋಸ್ ಮಾಡಿದ್ದರು. ನಂತರ ಕುಟುಂಬ ಸಾಕಷ್ಟು ಸಾಲ‌ ಮಾಡಿಕೊಂಡಿತ್ತು. ಈ ಹಿನ್ನಲೆ ಪತ್ನಿ ಸುಕನ್ಯಾ ಅವರು ಮನೆಯಲ್ಲಿಯೇ ಮಕ್ಕಳಿಗೆ ಟ್ಯೂಷನ್ ಹೇಳುತ್ತಿದ್ದರು. ಆಕೆಯ ಗಂಡ ಬ್ಯುಸಿನೆಸ್ ಲಾಸ್ ಆಗಿ ಆನಾರೋಗ್ಯ ಹಿನ್ನೆಲೆ ಮನೆಯಲ್ಲಿದ್ದರು. ಈ ಮಧ್ಯೆ ಇಬ್ಬರು ಮಕ್ಕಳಲ್ಲಿ ಓರ್ವ ಮಗ ನಿಶ್ಚಿತ್ ವಿಕಲಚೇತನ ಆಗಿದ್ದ, ಈ ಹಿನ್ನಲೆ ಮನೆಯಿಂದಲೇ ವರ್ಕ್ ಫ್ರಮ್ಂ ಹೋಂ ಮಾಡಿ ದುಡಿತಿದ್ದ.

ಆದರೆ, ನಿಕಿತ್ ಕಳೆದ ನಾಲ್ಕೈದು ತಿಂಗಳಿಂದ ಕೆಲಸ ಬಿಟ್ಟು ಮನೆಯಲ್ಲಿದ್ದ. ಸಾಲ ಜಾಸ್ತಿಯಾಗಿರುವ ಹಿನ್ನೆಲೆ ಸಾಲಗಾರರು ಬಂದು ಕೇಳುತ್ತಿದ್ದರು. ನಿನ್ನೆ(ಮಾ.19) ಕೂಡ ಇಬ್ಬರು ಬಂದು ಸಾಲ ವಾಪಸ್ ಕೇಳಿದ್ದಾರೆ. ಇನ್ನು ಹದಿನೈದು ವರ್ಷಗಳಿಂದ ಇದೇ ಮನೆಯಲ್ಲಿ ಬಾಡಿಗೆಗೆ ಇದ್ದ ಕುಟುಂಬ, ಬ್ಯುಸಿನೆಸ್ ಲಾಸ್ ಆದ ಮೇಲೆ ಸಾಕಷ್ಟು ತೊಂದರೆಯಾಗಿತ್ತು. ಬಾಡಿಗೆ ಕಟ್ಟುವುದಕ್ಕೂ ಒದ್ದಾಡುತ್ತಿದ್ದರು. ನಿನ್ನೆ ಸಾಲಗಾರರು ಮನೆ ಬಳಿ ಬಂದಿರೋ ಹಿನ್ನೆಲೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ಸಿಕ್ಕಿದೆ. ಸದ್ಯ ಪೊಲೀಸರಿಂದ ಇಡೀ ಮ‌ನೆ ಪರಿಶೀಲನೆ ನಡೆಸಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ