ಸೋನಿಯಾ ಗಾಂಧಿಯ ತೇಜೋವಧೆ ಆರೋಪ: ಬಿಜೆಪಿ ಮುಖಂಡನ ವಿರುದ್ಧ ದೂರು ದಾಖಲು
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ತೇಜೋವಧೆ ಮಾಡಿದ ಆರೋಪದ ಮೇಲೆ ಬಿಜೆಪಿ ಐಟಿ ಸೆಲ್ ಮುಖಂಡ ಜಯಂತ್ ಶೆಟ್ಟಿ ಅವರ ವಿರುದ್ಧ ಕಾಂಗ್ರೆಸ್ ಮುಖಂಡ ಪ್ರಕಾಶ್ ಹಾಗೂ ಕಾರ್ಯಕರ್ತರು ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೆಂಗಳೂರು, ಮಾರ್ಚ್ 23: ರಾಜಕೀಯ ನಾಯಕರು ಪ್ರಚಾರದ ಭರಾಟೆಯಲ್ಲಿ ನಾಲಿಗೆ ಹರಿ ಬಿಡುತ್ತಾರೆ. ಇದರಿಂದ ಪೇಚಿಗೆ ಸಿಲುಕಿಕೊಳ್ಳುತ್ತಾರೆ. ಇದೀಗ ಕಾಂಗ್ರೆಸ್ (Congress) ನಾಯಕಿ ಸೋನಿಯಾ ಗಾಂಧಿಯವರ (Sonia Gandhi) ತೇಜೋವಧೆ ಮಾಡಿದ ಆರೋಪದ ಮೇಲೆ ಬಿಜೆಪಿ ಐಟಿ ಸೆಲ್ ಮುಖಂಡ ಜಯಂತ್ ಶೆಟ್ಟಿ ಅವರ ವಿರುದ್ಧ ಕಾಂಗ್ರೆಸ್ ಮುಖಂಡ ಪ್ರಕಾಶ್ ಹಾಗೂ ಕಾರ್ಯಕರ್ತರು ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಚೋದನಕಾರಿ ಹೇಳಿಕೆ ನೀಡಿದ್ದ ಜಯಕಾಂತ ಶೆಟ್ಟಿ
ಕಲಾಸಿಪಾಳ್ಯ ವಿನೋಬನಗರ ನಿವಾಸಿಯಾಗಿರುವ ಜಯಕಾಂತ ಶೆಟ್ಟಿ ಎಂಬುವರು, ಕಾಂಗ್ರೇಸ್ ಪಕ್ಷದ ಬಗ್ಗೆ ಅವಹೇಳನಕಾರಿಯಾಗಿ ಮಾತನಾದ್ದು, ಮತ್ತು ಮುಸಲ್ಮಾನರು ನಮ್ಮ ದೇಶದವರಲ್ಲ, ಸೋನಿಯಾ ಗಾಂಧಿಯವರಿಂದಲೇ ಶ್ರೀಲಂಕದಲ್ಲಿ ಎರಡು ಕೋಟಿ ಜನ ಮರಣ ಹೊಂದಿದ್ದಾರೆ ಎಂದು ಮಾತನಾಡಿದ್ದಾರೆ. ಹಿಂದೂ ಮುಸ್ಲಿಮರಲ್ಲಿ ಘರ್ಷಣೆ ಉಂಟು ಮಾಡಲು ಪ್ರಯತ್ನಿಸಿ ಕೋಮು ಗಲಭೆಗೆ ಪ್ರಚೋದನೆ ನೀಡಿದ್ದಲ್ಲದೆ, ಸೋನಿಯಾ ಗಾಂಧಿಯವರ ತೇಜೋವಧೆ ಮಾಡುವಂತಹ ಹೇಳಿಕೆ ನೀಡಿ ಮತ್ತು ಚುನಾವಣೆಯ ಲಾಭ ಪಡೆದುಕೊಳ್ಳುವ ಸಲುವಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ. ಹೀಗಾಗಿ ಜಯಕಾಂತ ಶೆಟ್ಟಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕಾಂಗ್ರೆಸ್ ಕಾರ್ಯಕರ್ತರು ದೂರು ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ