ಈ ಸಣ್ಣ ವಿಧಾನ ಅನುಸರಿಸಿ ದಿನಕ್ಕೆ 600 ಲೀಟರ್ ನೀರು ಉಳಿಸಿ: ಬೆಂಗಳೂರು ವೈದ್ಯೆಯ ಸಲಹೆ ಈಗ ವೈರಲ್

ಬೆಂಗಳೂರು ನೀರಿನ ಬಿಕ್ಕಟ್ಟು ತೀವ್ರಗೊಂಡಿರುವ ಮಧ್ಯೆ ನಗರದ ವೈದ್ಯೆಯೊಬ್ಬರು ನೀರು ಉಳಿಕೆಗೆ ನೀಡಿರುವ ಸಲಹೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಅಂದಹಾಗೆ, ಅವರು ನೀಡಿರುವ ಸಲಹೆ ಅತ್ಯಂತ ಸರಳವಾಗಿದ್ದು ಯಾರು ಬೇಕಾದರೂ ಅಳವಡಿಸಿಕೊಳ್ಳಬಹುದಾಗಿದೆ. ಹಾಗಾದರೆ ಆ ವೈದ್ಯೆ ನೀಡಿರುವ ಸಲಹೆ ಏನು? ಅವರ ಪ್ರಕಾರ ನೀರು ಉಳಿಕೆಗೆ ಏನು ಮಾಡಬೇಕು? ಇಲ್ಲಿದೆ ನೋಡಿ.

ಈ ಸಣ್ಣ ವಿಧಾನ ಅನುಸರಿಸಿ ದಿನಕ್ಕೆ 600 ಲೀಟರ್ ನೀರು ಉಳಿಸಿ: ಬೆಂಗಳೂರು ವೈದ್ಯೆಯ ಸಲಹೆ ಈಗ ವೈರಲ್
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on: Mar 20, 2024 | 10:48 AM

ಬೆಂಗಳೂರು, ಮಾರ್ಚ್​ 20: ಬೆಂಗಳೂರು ನಗರದಲ್ಲಿ ಈಗ ನೀರಿನ ಬಿಕ್ಕಟ್ಟು (Bengaluru Water Crisis) ತೀವ್ರಗೊಂಡಿದೆ. ಅನೇಕ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಕೂಡ ತತ್ವಾರ ಉಂಟಾಗಿದೆ. ಈ ಸಂದರ್ಭದಲ್ಲಿ ದೈನಂದಿನ ಚಟುವಟಿಕೆಗಳ ವೇಳೆ ನೀರು ಉಳಿಸಲು, ನೀರಿನ ಮಿತ ಬಳಕೆ ಮಾಡಲು (Water Saving Tips) ಏನೇನು ಕ್ರಮಗಳನ್ನು ಅನುಸರಿಸಬಹುದು ಎಂಬ ಬಗ್ಗೆ ಬೆಂಗಳೂರಿನ ವೈದ್ಯೆಯೊಬ್ಬರು ನೀಡಿದ ಸಲಹೆ ಈಗ ವೈರಲ್ ಆಗುತ್ತಿದೆ. ದಿನಚರಿಯಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡುವ ಮೂಲಕ ದಿನಕ್ಕೆ 600 ಲೀಟರ್ ನೀರನ್ನು ಹೇಗೆ ಉಳಿಸಬಹುದು ಎಂಬ ಬಗ್ಗೆ ವೈದ್ಯೆ ಡಾ. ದಿವ್ಯಾ ಶರ್ಮಾ ನೀಡಿದ್ದಾರೆ.

ಡಾ. ದಿವ್ಯಾ ಶರ್ಮಾ ಹೇಳುವ ಪ್ರಕಾರ, ಅವರು ಅನುಸರಿಸಿರುವ ಸಣ್ಣ ಪುಟ್ಟ ಕ್ರಮಗಳಿಂದ ಕುಟುಂಬದ ನೀರಿನ ಬಳಕೆ ದಿನಕ್ಕೆ ಸರಿಸುಮಾರು 600 ಲೀಟರ್​​ಗಳಷ್ಟು ಕಡಿಮೆಯಾಗಿದೆ.

ವೈದ್ಯೆ ನೀಡಿರುವ ನಾಲ್ಕು ಸಲಹೆಗಳು

ಈಗ ಎದುರಿಸುತ್ತಿರುವ ನೀರಿನ ಬಿಕ್ಕಟ್ಟನ್ನು ಎದುರಿಸಲು ಅವರು ನಾಲ್ಕು ಸುಲಭವಾದ ಸಲಹೆಗಳನ್ನು ಹಂಚಿಕೊಂಡಿದ್ದಾರೆ. ಮೊದಲನೆಯದ್ದಾಗಿ ಶವರ್‌ ಬಾತ್​​ನಿಂದ ಬಕೆಟ್ ನೀರಿನಲ್ಲಿ ಸ್ನಾನ ಮಾಡುವ ಕ್ರಮಕ್ಕೆ ಬದಲಾಗುವುದು. ಎರಡನೇಯದ್ದಾಗಿ ನಲ್ಲಿಗಳಿಗೆ ಏರಿಯೇಟರ್‌ಗಳನ್ನು ಅಳವಡಿಸುವುದು. ಜತೆಗೆ ಆರ್​ಒ ತ್ಯಾಜ್ಯ ನೀರನ್ನು ಸಂಗ್ರಹಿಸುವುದು ಮತ್ತು ಕಾರ್ ವಾಶ್ ಅನ್ನು ಸಂಪೂರ್ಣವಾಗಿ ನಿಲ್ಲಿಸುವುದು ಅವರು ನೀಡಿರುವ ಸಲಹೆಗಳಾಗಿವೆ.

ಮನೆಯಲ್ಲಿ ನೀರಿನ ಸಂರಕ್ಷಣೆಗಾಗಿ ಇವು ಸಣ್ಣ ಕ್ರಮಗಳಷ್ಟೇ. ಈ ಹಿಂದೆಯೂ ನಾವು ನೀರಿನ ಬಳಕೆಯನ್ನು ಅತ್ಯಂತ ವಿವೇಕಯುತವಾಗಿ ಮಾಡುತ್ತಿದ್ದರೂ, ಸುಧಾರಣೆಗೆ ಯಾವಾಗಲೂ ಅವಕಾಶವಿದೆ. ನಮ್ಮ ಮನೆಯ ಅನುಭವವನ್ನು ಹಂಚಿಕೊಳ್ಳುತ್ತಿದ್ದೇವೆ ಎಂದು ದಿವ್ಯಾ ಶರ್ಮಾ ಸಾಮಾಜಿಕ ಮಾಧ್ಯಮ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.

ಸ್ನಾನಕ್ಕೆ ಬೇಡ ಶವರ್, ಉಳಿಯುತ್ತೆ ನೀರು!

ಸ್ನಾನಕ್ಕೆ ಶವರ್ ಬಳಕೆ ಮಾಡುವುದಿಲ್ಲ. ಚರ್ಮರೋಗ ವೈದ್ಯೆಯಾಗಿ ನಾನು ಯಾವಾಗಲೂ ಬಕೆಟ್ ಸ್ನಾನವನ್ನು ಪ್ರೋತ್ಸಾಹಿಸುತ್ತೇನೆ. ಶವರ್ ನಿಮಿಷಕ್ಕೆ 13 ಲೀಟರ್ ಬಳಸುತ್ತದೆ ಆದರೆ ಒಂದು ಬಕೆಟ್​ಗೆ ಒಟ್ಟು 20 ಲೀಟರ್ ಸಾಕಾಗುತ್ತದೆ. 5 ನಿಮಿಷಗಳ ಶವರ್ ಮತ್ತು ಬಕೆಟ್ ಸ್ನಾನ ಹೋಲಿಕೆ ಮಾಡಿದರೆ ಬಕೆಟ್​ ಸ್ನಾನದ ಮೂಲಕ ಪ್ರತಿ ವ್ಯಕ್ತಿ 45 ಲೀಟರ್ ಉಳಿಸಬಹುದು. ಇದರಿಂದ ಅಂದಾಜು 180 ಲೀಟರ್ ಉಳಿತಾಯ ಮಾಡಬಹುದು ಎಂದು ಅವರು ಹೇಳಿದ್ದಾರೆ.

ನಲ್ಲಿಗಳಿಗೆ ಏರಿಯೇಟರ್‌

ನಾವು ಎಲ್ಲಾ ನಲ್ಲಿಗಳಿಗೆ ಏರಿಯೇಟರ್‌ಗಳನ್ನು ಅಳವಡಿಸಿದ್ದೇವೆ. 30 ನಿಮಿಷದ ಡಿಶ್‌ವಾಶಿಂಗ್ ಸೆಷನ್​ಗೆ ಈಗ 90 ಲೀಟರ್ ಸಾಕಾಗುತ್ತದೆ. ಈ ಹಿಂದ 450 ಲೀಟರ್‌ ನೀರು ಬೇಕಾಗುತ್ತಿತ್ತು. ಇದು ದಿನವಿಡೀ ಸಣ್ಣ ಪಾತ್ರೆಗಳಿಗಾಗಿ ಬಳಕೆಯಾಗುತ್ತಿರುವ ನೀರಿನ ಪ್ರಮಾಣವಾಗಿದೆ. ಇದರಿಂದ ಸರಿಸುಮಾರು 360 ಲೀಟರ್ ಉಳಿತಾಯವಾಗುತ್ತಿದೆ. ಆರ್​ಒದಿಂದ ಎಲ್ಲಾ ತ್ಯಾಜ್ಯನೀರನ್ನು ಕಂಟೇನರ್‌ನಲ್ಲಿ ಸಂಗ್ರಹಿಸಲಾಗುತ್ತಿದೆ ಮತ್ತು ಈ ನೀರನ್ನು ಮಾಪಿಂಗ್ ಮತ್ತು ಉದ್ಯಾನ ಬಳಕೆಗೆ ಬಳಸಲಾಗುತ್ತದೆ. ಇದರಿಂದ ಅಂದಾಜು 30 ಲೀಟರ್ ಉಳಿತಾಯವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ನೀರು ಪೋಲು ತಡೆಗೆ ಜಲಮಂಡಳಿ ಪ್ಲ್ಯಾನ್: ನಲ್ಲಿಗಳಿಗೆ ಏರಿಯೇಟರ್ ಅಳವಡಿಕೆ ಕಡ್ಡಾಯ, ಮಾರ್ಚ್​ 31ರ ಗಡುವು

ಕಾರ್ ವಾಶ್ ನಿಲ್ಲಿಸಲಾಗಿದೆ. ಪ್ರತಿದಿನ ಧೂಳು ತೆಗೆಯುವುದು ಮತ್ತು ಪರ್ಯಾಯ ದಿನ ಒದ್ದೆ ಬಟ್ಟೆಯಿಂದ ಸ್ವಚ್ಛಗೊಳಿಸುವ ಮೂಲಕ ಕಾರು ಇನ್ನೂ ಹೊಳೆಯುವಂತೆ ಮಾಡಬಹುದು! ಸಿಂಗಲ್ ಪುಶ್ ಫ್ಲಶ್ ಬಳಕೆಯಿಂದ ಪೈಪ್ ಸೋರಿಕೆಯನ್ನು ತಡೆಯಬಹುದಾಗಿದೆ. ಇದರಿಂದ ಅಂದಾಜು 30 ಲೀಟರ್ ಉಳಿತಾಯ ಮಾಡಬಹುದು. ಈ ಎಲ್ಲ ಸಣ್ಣ ಉಪಕ್ರಮಗಳು ನಮ್ಮ ಮನೆಯಲ್ಲಿ ದಿನಕ್ಕೆ 600 ಲೀಟರ್ ಉಳಿಸಲು ಸಹಾಯ ಮಾಡುತ್ತದೆ. ಇದರಿಂದ ನಮ್ಮ ಜೀವನಶೈಲಿಯ ಮೇಲೆ ಹೆಚ್ಚೇನೂ ಪರಿಣಾಮವಾಗಿಲ್ಲ ಎಂದು ಅವರು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್