Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಪೂರ್ವ ವಿಭಾಗದ ಡಿಸಿಪಿಯಾಗಿ ಕುಲದೀಪ್ ಕುಮಾರ್ ಜೈನ್ ವರ್ಗ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರು ಪೂರ್ವ ಸಂಚಾರ ವಿಭಾಗದ ಡಿಸಿಪಿಯಾಗಿದ್ದ ಕುಲದೀಪ್ ಕುಮಾರ್ ಜೈನ್ ಅವರನ್ನು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿಯಾಗಿ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರು ಪೂರ್ವ ವಿಭಾಗದ ಡಿಸಿಪಿಯಾಗಿ ಕುಲದೀಪ್ ಕುಮಾರ್ ಜೈನ್ ವರ್ಗ
ಕುಲದೀಪ್​ ಕುಮಾರ್​ ಜೈನ್​
Follow us
Shivaprasad
| Updated By: ವಿವೇಕ ಬಿರಾದಾರ

Updated on:Mar 20, 2024 | 1:31 PM

ಬೆಂಗಳೂರು, ಮಾರ್ಚ್​ 20: ಲೋಕಸಭಾ ಚುನಾವಣೆ (Lok Sbha Election) ಹೊಸ್ತಿಲಲ್ಲಿ ಬೆಂಗಳೂರು ಪೂರ್ವ ಸಂಚಾರ ವಿಭಾಗದ ಡಿಸಿಪಿಯಾಗಿದ್ದ ಕುಲದೀಪ್ ಕುಮಾರ್ ಜೈನ್ (Kuladeep Kumar Jain) ಅವರನ್ನು ಬೆಂಗಳೂರು ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರಾಗಿ (DCP) ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕುಲದೀಪ್ ಕುಮಾರ್ ಜೈನ್ ಅವರು ಈ ಹಿಂದೆ ಮಂಗಳೂರು ಪೊಲೀಸ್​ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ಡಿಸಿಪಿ ಕುಲದೀಪ್​ ಕುಮಾರ್​ ಜೈನ್​ ಅವರು ಮಂಗಳೂರು ಪೊಲೀಸ್​ ಆಯುಕ್ತರಾಗಿದ್ದ ವೇಳೆ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದ್ದರು. ಮಂಗಳೂರಿನಲ್ಲಿ ಡ್ರಗ್ ಜಾಲದ ವಿರುದ್ಧ ಸಮರ ಸಾರಿದ್ದರು.

ಮಂಗಳೂರು ಪೊಲೀಸ್​ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಕೇವಲ ಐದು ತಿಂಗಳಲ್ಲಿ ಮಂಗಳೂರನ್ನು ಡ್ರಗ್ಸ್ ಮುಕ್ತ ನಗರವನ್ನಾಗಿ ಮಾಡುವ ಗುರಿ ಹೊಂದಿದ್ದರು. ಹಾಗೆ ಮಟ್ಕಾ, ಜೂಜಿಗೆ ಕಡಿವಾಣ ಹಾಕಿದ್ದರು. ಮಟ್ಕಾ, ಜೂಜು ಅಡ್ಡೆಗಳ ಮೇಲೆ‌ ನಿರಂತರ ದಾಳಿ ನಡೆಸಿದ್ದರು. ಡ್ರಗ್ಸ್, ಮಟ್ಕಾ ಮಾಫಿಯಾದ ಹಿಂದೆ ಬಿದ್ದಿದ್ದರು. ಕುಲ್ ದೀಪ್ ಕುಮಾರ್ ಜೈನ್ ಅವರು ದಕ್ಷ ಅಧಿಕಾರಿ ಎಂದೇ ಗುರುತಿಸಿ ಕೊಂಡಿದ್ದರು.

ಇದನ್ನೂ ಓದಿ: ಐವರು IAS​ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರಿನ 102 ಕಡೆ ನಾಕಾಬಂದಿ

ಬೆಂಗಳೂರಿನ ಎಂಟು ವಿಭಾಗದಲ್ಲಿ 102 ಕಡೆ ಪೊಲೀಸರು ನಾಕಾಬಂದಿ ಹಾಕಿದ್ದಾರೆ. ಕೇಂದ್ರ ವಿಭಾಗದಲ್ಲಿ  16 ಕಡೆ, ಪೂರ್ವ ವಿಭಾಗದಲ್ಲಿ 10, ಉತ್ತರ ವಿಭಾಗದಲ್ಲಿ 27, ಈಶಾನ್ಯ ವಿಭಾಗದಲ್ಲಿ 12, ದಕ್ಷಿಣ ವಿಭಾಗದಲ್ಲಿ 8, ಆಗ್ನೇಯ ವಿಭಾಗದಲ್ಲಿ 10, ಪಶ್ಚಿಮ ವಿಭಾಗದಲ್ಲಿ 12, ವೈಟ್ ಫೀಲ್ಡ್ ವಿಭಾಗದಲ್ಲಿ 7 ಕಡೆ ನಾಕಾಬಂದಿ ಹಾಕಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:04 pm, Wed, 20 March 24