AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kalaburagi News: ಸರ್ಕಾರವೇನೋ ನಾನಾ ಅಧ್ಯಯನ ಪೀಠಗಳನ್ನು ಮಾಡಿದೆ, ಆದರೆ ಅದೆಲ್ಲಾ ಹಾಳು ಕೊಂಪೆಯಾಗಿದೆ! ಯಾಕೆ ಹೀಗೆ?

Gulbarga University study benches: ಒಬ್ಬನೇ ಒಬ್ಬ ವಿದ್ಯಾರ್ಥಿ ಗುಲ್ಬರ್ಗಾ ವಿಶ್ವವಿದ್ಯಾಲಯ ಆವರಣಕ್ಕೆ ಬಂದು ಅಂಬಿಗರ ಚೌಡಯ್ಯನವರ ಬಗ್ಗೆ ಅವರ ಬದುಕಿನ ತತ್ವಾದರ್ಶಗಳ ಬಗ್ಗೆ ಸಣ್ಣ ಅಧ್ಯಯನ ಕೂಡಾ ಮಾಡಿಲ್ಲ! ಅಲ್ಲದೇ ಕೂತೂಹಲಕ್ಕೂ ಯಾವೊಬ್ಬ ವಿದ್ಯಾರ್ಥಿಯೂ ಈ ಕಡೆ ತಿರುಗಿ ನೋಡಿಲ್ಲ. ಇದಕ್ಕೆ ಕಾರಣ ಅಧ್ಯಯನ ಪೀಠದಲ್ಲಿರೋ ಅಧಿಕಾರಿಗಳು. ಇಲ್ಲಿ ಯಾವುದೇ ಅಭಿವೃದ್ಧಿ ಕೆಲಸವಾಗ್ತಿಲ್ಲ, ಬದಲಾಗಿ ಅನುದಾನದಲ್ಲಿ ಗೋಲ್ಮಾಲ್​​ ಮಾಡ್ತಿದ್ದಾರೆ - ಎಂಎಲ್ ಸಿ ತಿಪ್ಪಣ್ಣಪ್ಪ ಕಮಕನೂರ ವಿಷಾದ

Kalaburagi News: ಸರ್ಕಾರವೇನೋ ನಾನಾ ಅಧ್ಯಯನ ಪೀಠಗಳನ್ನು ಮಾಡಿದೆ, ಆದರೆ ಅದೆಲ್ಲಾ ಹಾಳು ಕೊಂಪೆಯಾಗಿದೆ! ಯಾಕೆ ಹೀಗೆ?
ಸರ್ಕಾರವೇನೋ ನಾನಾ ಅಧ್ಯಯನ ಪೀಠಗಳನ್ನು ಮಾಡಿದೆ, ಆದರೆ ಅದೆಲ್ಲಾ ಹಾಳು ಕೊಂಪೆಯಾಗಿದೆ!
ದತ್ತಾತ್ರೇಯ ಪಾಟೀಲ್​
| Edited By: ಸಾಧು ಶ್ರೀನಾಥ್​|

Updated on:Mar 20, 2024 | 1:02 PM

Share

ರಾಜ್ಯ ಸರ್ಕಾರವೇನೋ ನಾನಾ ಸಾಧಕರು, ಶರಣ ಹೆಸರಿನ ಮೇಲೆ ಅಧ್ಯಯನ ಪೀಠಗಳೇನೋ ಮಾಡಿದೆ. ಶರಣ ವಚನ, ವೈಚಾರಿಕತೆಗಳನ್ನ ಅಧ್ಯಯನ ಮಾಡಲಿ ಎನ್ನೋ ಆಶಯವಿತ್ತು. ಆದ್ರೆ ಆಶಯಕ್ಕೆ ಎಳ್ಳು ನೀರು ಬಿಡಲಾಗಿದೆ‌. ಕಲಬುರಗಿ ಗುಲ್ಬರ್ಗಾ ವಿವಿಯಲ್ಲಿರೋ ಅಧ್ಯಯನ ಪೀಠಗಳು ಹಾಳು ಕೊಂಪೆಗಳಾಗ್ತಿವೆ.

ಹೌದು. ವಿಧಾನ ಪರಿಷತ್ ಸದಸ್ಯರು ಏಕಾಏಕಿ ಕಲಬುರಗಿಯ ಅಂಬಿಗರ ಚೌಡಯ್ಯ ಅಧ್ಯಯನ ಪೀಠಕ್ಕೆ ಭೇಟಿ ನೀಡಿದರು. ಆ ವೇಳೆ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಅಂದಹಾಗೇ ಗುಲ್ಬರ್ಗಾ ವಿಶ್ವವಿದ್ಯಾಲಯ ಆವರಣರದಲ್ಲಿ ತಲೆ ಎತ್ತಿ ನಿಂತಿರೋ ಈ ಅಧ್ಯಯನ ಪೀಠವೂ ಹಾಳು ಕೊಂಪೆಯಾಗಿ ಮಾರ್ಪಡುತ್ತಿದೆ. ಸಂಜೆಯಾದ್ರೆ ಸಾಕು ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಅಲ್ಲದೇ ಸಂಜೆಯಾದ್ರೆ ಬೀದಿ ನಾಯಿಗಳ ತಾಣವಾಗಿ ಬಿಡುತ್ತೆ. ಅಧ್ಯಯನ ಪೀಠವಾಗಿ ಸಾಕಷ್ಟು ವರ್ಷ ಕಳೆದರೂ, ಒಬ್ಬನೇ ಒಬ್ಬ ವಿದ್ಯಾರ್ಥಿ ಇಲ್ಲಿ ಬಂದು ಅಂಬಿಗರ ಚೌಡಯ್ಯನವರ ಬಗ್ಗೆ ಅವರ ಬದುಕಿನ ತತ್ವಾದರ್ಶಗಳ ಬಗ್ಗೆ ಸಣ್ಣ ಅಧ್ಯಯನ ಕೂಡಾ ಮಾಡಿಲ್ಲ!

ಅಲ್ಲದೇ ಕೂತೂಹಲಕ್ಕೂ ಯಾವೊಬ್ಬ ವಿದ್ಯಾರ್ಥಿಯೂ ಈ ಕಡೆ ತಿರುಗಿಯೂ ನೋಡಿಲ್ಲ. ಇದಕ್ಕೆ ಕಾರಣ ಅಧ್ಯಯನ ಪೀಠದಲ್ಲಿರೋ ಅಧಿಕಾರಿಗಳು. ಯಾಕೆಂದ್ರೆ ಅಧಿಕಾರಗಳು ಪೀಠಕ್ಕೆ ಬರೋ ಅನುದಾನವನ್ನ ಖರ್ಚು ಮಾಡೋಕೆ ಮಾತ್ರ ಸೀಮಿತವಾಗಿದ್ದಾರೆ. ಇಲ್ಲಿ ಯಾವುದೇ ಅಭಿವೃದ್ಧಿ ಕೆಲಸವಾಗ್ತಿಲ್ಲ, ಬದಲಾಗಿ ಅನುದಾನದಲ್ಲಿ ಗೋಲ್ಮಾಲ್​​ ಮಾಡ್ತಿದ್ದಾರೆ ಎಂದು ಎಂಎಲ್ ಸಿ ತಿಪ್ಪಣ್ಣಪ್ಪ ಕಮಕನೂರ ಅವರು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

Also Read: ರಾತ್ರಿ 12 ಗಂಟೆವರೆಗೂ ತೆರೆದಿರುತ್ತದೆ ಈ ಗ್ರಂಥಾಲಯ, ರಾಜ್ಯದಲ್ಲೇ ಮೊದಲ ಪ್ರಯತ್ನ – ಯಾವ ಜಿಲ್ಲೆಯಲ್ಲಿ?

ಇನ್ನು ಕೇವಲ ಅಂಬಿಗರ ಚೌಡಯ್ಯ ಪೀಠವಷ್ಟೆ ಅಲ್ಲದೇ, ವಿಶ್ವವಿದ್ಯಾಲಯ ಆವರಣದಲ್ಲಿರುವ ನಾಲ್ಕೈದು ಪೀಠಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವೇನೂ ಇಲ್ಲ. ಸರ್ಕಾರದಿಂದ ಬರೋ ಅನುದಾನ ಕೇವಲ ಆಯಾ ಶರಣರ ಜಯಂತಿಗಳಿಗೆ ಸೀಮಿತವಾಗಿದೆ. ಅಲ್ಲದೇ ಆಯಾ ಸಮುದಾಯದ ನಾಯಕರನ್ನ ಕೂಡಾ ಇಲ್ಲಿನ ಅಧಿಕಾರಿಗಳು ಹಾಗೂ ವಿವಿ ಅಧಿಕಾಗಳು ಆಹ್ವಾನವೇ ನೀಡುವದಿಲ್ಲವಂತೆ.

ಹೀಗಾಗಿಯೇ ಇದ್ರಿಂದ ಕೋಪಗೊಂಡ ಪರಿಷತ್ ಸದಸ್ಯರು ನೂರಾರು ಕೋಟಿ ಖರ್ಚು ಮಾಡಿ ಅನುದಾನ ಹಾಕಿಕೊಂಡು ಬಂದಿರುತ್ತೇವೆ. ಆದ್ರೆ ಈ ಅಧಿಕಾರಿಗಳು ಅನುದಾನವನ್ನ ಜೇಬಿಗಳಿಸೋದು ಬಿಟ್ರೆ ನಯಾ ಪೈಸೆ ಕೆಲಸ ಮಾಡಿಲ್ಲ ಎಂದು ಗರಂ ಆದ್ರು. ಅಲ್ಲದೇ ಇದೇ ಮೊದಲ ಬಾರಿ ಇಲ್ಲಿಗೆ ಭೇಟಿ ನೀಡಿದ್ದೇನೆ. ಹೀಗಾಗಿ ಯಾರ ಮೇಲೂ ಕ್ರಮ ಕೈಗೊಳ್ಳಲ್ಲ. ಆದರೆ ಇದೇ ಪರಿಸ್ಥಿತಿ ಮುಂದುವರೆದ್ರೆ ಖಂಡಿತ ಕ್ರಮ ಕೈಗೊಳ್ಳಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ರು.

ಇದನ್ನೂ ಓದಿ: ಪಕ್ಕದ ಮನೆ ದಂಪತಿಯ ಸರಸ ಸಲ್ಲಾಪದಿಂದ ಕಿರಿಕಿರಿ, ಪೊಲೀಸ್​ ಠಾಣೆಗೆ ದೂರು ನೀಡಿದ ಮಹಿಳೆ

ಒಟ್ನಲ್ಲಿ ಸರ್ಕಾರ ಶರಣರ ವಚನಗಳು, ಸಾಧಕರ ಸಾಧೆನೆಗಳನ್ನ ಪರಿಚಯಿಸೋಕೆ ಈ ಅಧ್ಯಯನ ಪೀಠಗಳನ್ನ ಮಾಡಿತ್ತು. ಆದ್ರೆ ಸದ್ಯ ಸರ್ಕಾರದ ಆಶಯಗಳೇ ತಿರುಗುಮರಗು ಆಗ್ತಿರೋದು ನಿಜಕ್ಕೂ ದುರಂತವೇ ಸರಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:51 pm, Wed, 20 March 24

Follow Us
ದತ್ತಾತ್ರೇಯ ಪಾಟೀಲ್​
ದತ್ತಾತ್ರೇಯ ಪಾಟೀಲ್​

ಮೂಲತಃ ಕಲಬುರಗಿ ಜಿಲ್ಲೆಯವರಾದ ದತ್ತಾತ್ರೇಯ ಪಾಟೀಲ್ ಸಧ್ಯ ಟಿರ್ವಿ ಕನ್ನಡ ವಾಹಿನಿಯ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 9 ವರ್ಷಗಳಿಂದ ಟಿರ್ವಿ ಸಂಸ್ಥೆಯಲ್ಲಿ ಕೆಲಸ‌ ಮಾಡುತ್ತಿದ್ದು ಜ,2015 ರಿಂದ 22 ರವೆಗೆ ಹುಬ್ಬಳ್ಳಿಯ ವರದಿಗಾರಾಗಿ, ಕಳೆದೊಂದು ವರ್ಷ ಕೊಪ್ಪಳ ಸಧ್ಯ ಮೂರು ತಿಂಗಳಿಮದ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದು, ಕೊರೊನಾ ಸಮಯದಲ್ಲಿ ವೈದ್ಯರ ಕಳ್ಳಾಟದ ಮಾಡಿದ ರಹಸ್ಯ ಕಾರ್ಯಚರಣೆ.ಆಪರೇಷನ್ ಕಮಲದ ಕುರಿತು ಸ್ಪೋಟಕ ಬಿಎಸ್ ವೈ ವಿಡಿಯೋ ದ ಎಕ್ಸಕ್ಲೂಸಿವ್ ವರದಿಯ ಜೊತೆಗೆ ರಾಜಕೀಯ ವರದಿಗಾರಿಕೆಯಲ್ಲಿಯೂ ಆಸಕ್ತಿ ಹೊಂದಿದ್ದು, ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದು,ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳ ಪ್ರವಾಸ,ಮತ್ತು ಟ್ರೆಕ್ಕಿಂಗ್ ಹವ್ಯಾಸ ರೂಢಿಸಿಕೊಂಡಿದ್ದಾರೆ.

Read More
‘ಆ ಹೊಗಳಿಕೆಯನ್ನು ಹೇಳೋಕೆ ಮುಜುಗರ ಆಗುತ್ತೆ’; ರಮಿಕಾಶ ಶಿವು
‘ಆ ಹೊಗಳಿಕೆಯನ್ನು ಹೇಳೋಕೆ ಮುಜುಗರ ಆಗುತ್ತೆ’; ರಮಿಕಾಶ ಶಿವು
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್