AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಧಾನಿ ಮಗ್ಗುಲಲ್ಲಿ ಬೆಳೆ ಬೆಳೆಯುತ್ತಿದ್ದರೂ 600 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ಕೆಐಎಡಿಬಿ! ರೈತರ ಆಕ್ರೋಶ

KIADB Land Acquisition: ರೈತರ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವುದಕ್ಕೆ ಪ್ರಾಥಮಿಕ ಹಂತದ ನೋಟಿಫಿಕೇಶನ್ ಮಾಡಲು ಕೆಐಎಡಿಬಿ ಸಿದ್ದತೆ ನಡೆಸುತ್ತಿದೆ. ಒಟ್ಟಾರೆ 6 ಹಳ್ಳಿಗಳ ಪೈಕಿ 600 ಎಕರೆ ಭೂಮಿಯನ್ನ ಕೆಐಎಡಿಬಿ ಪ್ರಿಲ್ಮಿನರಿ ನೋಟಿಫಿಕೇಶನ್ ಮಾಡಿದೆ. ಆದರೆ ಕೆಐಎಡಿಬಿ ಗುರುತಿಸಿರುವ ಭೂಮಿಯ ಪೈಕಿ 90 ರಷ್ಟು ಭಾಗದಲ್ಲಿ ಈಗಲೂ ರೈತರು ಬೆಳೆಗಳನ್ನ ಬೆಳೆಯುತ್ತಿದ್ದಾರೆ.

ರಾಮ್​, ಮೈಸೂರು
| Updated By: ಸಾಧು ಶ್ರೀನಾಥ್​|

Updated on:Mar 25, 2024 | 4:38 PM

Share

ರೈತರ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವುದಕ್ಕೆ ಪ್ರಾಥಮಿಕ ಹಂತದ ನೋಟಿಫಿಕೇಶನ್ ಮಾಡಲು ಕೆಐಎಡಿಬಿ (Karnataka Industrial Areas Development Board -KIADB) ಸಿದ್ದತೆ ನಡೆಸುತ್ತಿದೆ. ಇದರ ವಿರುದ್ದ ರೈತರು (Farmers) ಪ್ರತಿಭಟನೆ (Protest) ನಡೆಸಿ ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಸರ್ಜಾಪುರ ಸಮೀಪದ ಹಂದೇನಹಳ್ಳಿ ಗ್ರಾಮ ಪಂಚಾಯತಿಯ ಸುತ್ತಮುತ್ತಲಿನ ಎಸ್.ಮೇಡಹಳ್ಳಿ, ಅಡಿಗಾರಕಲ್ಲಹಳ್ಳಿ, ಸೊಳ್ಳೆಪುರ, ಬಿಕ್ಕನಹಳ್ಳಿ, ಹಂದೇನಹಳ್ಳಿ ಸೇರಿದಂತೆ ಒಟ್ಟಾರೆ 6 ಹಳ್ಳಿಗಳ ಪೈಕಿ 600 ಎಕರೆ ಭೂಮಿಯನ್ನ ಕೆಐಎಡಿಬಿ ಲೋಕಾಸಭೆ ಚುನಾವಣೆ ಘೋಷಣೆ ದಿನವೇ ಪ್ರಿಲ್ಮಿನರಿ ನೋಟಿಫಿಕೇಶನ್ ಮಾಡಿದೆ.

Also Read: ಆನೇಕಲ್ ರೈತರ ಜಮೀನುಗಳ ಮೇಲೆ ಕೆಐಎಡಿಬಿ ಕಣ್ಣು: ಭೂ ಸ್ವಾಧೀನಕ್ಕೆ ಮುಂದಾದ ಅಧಿಕಾರಿಗಳ ವಿರುದ್ಧ ಆಕ್ರೋಶ

ವಂಶ ಪಾರಂಪರ್ಯವಾಗಿ ಈ ಭಾಗದ ರೈತರು ಕೃಷಿಯನ್ನೇ ಜೀವನಾಧಾರವಾಗಿ ಬದುಕು ಕಂಡು ಕೊಂಡಿದ್ದಾರೆ. ಕೆಐಎಡಿಬಿ ಗುರುತಿಸಿರುವ ಭೂಮಿಯ ಪೈಕಿ 90 ರಷ್ಟು ಭಾಗದಲ್ಲಿ ಈಗಲೂ ಹೂ, ಹಣ್ಣು, ರೇಷ್ಮೆ, ತರಕಾರಿ ಬೆಳೆಗಳನ್ನ ರೈತರು ಬೆಳೆಯುತ್ತಿದ್ದಾರೆ. ಫಲವತ್ತಾದ ರೈತರ ಭೂಮಿಗಳನ್ನು ಅವೈಜ್ಞಾನಿಕವಾಗಿ ಬರಡು ಭೂಮಿ ಎಂದು ಉಲ್ಲೇಖ ಮಾಡಿ ರೈತರ ಅಭಿಪ್ರಾಯವನ್ನೂ ಕೇಳದೆ ಅಕ್ರಮವಾಗಿ ನೋಟಿಫಿಕೇಶನ್ ಮಾಡಲಾಗುತ್ತಿದೆ.

ಇದನ್ನೂ ಓದಿ: ಟಿವಿ9 ವರದಿ ಇಂಪ್ಯಾಕ್ಟ್: ಒತ್ತುವರಿಯಾಗಿದ್ದ ಕೋಟ್ಯಂತರ ರೂ. ಮೌಲ್ಯದ ಸರ್ಕಾರಿ ಜಮೀನು ತೆರವು

ಯಾವುದೇ ಕಾರಣಕ್ಕೂ ಜಮೀನು ಭೂಸ್ವಾದೀನಕ್ಕೆ ಅವಕಾಶ ನೀಡುವುದಿಲ್ಲ. ರೈತರ ಜಮೀನಿನ ಭೂಸ್ವಾಧೀನ ಪ್ರಕ್ರಿಯೆಯನ್ನ ರದ್ದುಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಕೆಐಎಡಿಬಿ ವಿರುದ್ದ ರೈತರು ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 4:37 pm, Mon, 25 March 24