ಮಂಡ್ಯ ಲೋಕಸಭಾ ಚುನಾವಣೆ: ಸುಮಲತಾಗೊಂದು ಕಿವಿಮಾತು ಹೇಳಿದ ಆಪ್ತ ಸಚ್ಚಿದಾನಂದ!
ಬಿಜೆಪಿ ಹೈಕಮಾಂಡ್ ಮಂಡ್ಯ ಲೋಕಸಭಾ ಕ್ಷೇತ್ರ ಮೈತ್ರಿ ಪಕ್ಷ ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟಿದೆ. ಪರಿಣಾಮ ಬಿಜೆಪಿ ಬೆಂಬಲಿತ ಮಂಡ್ಯದ ಸಂಸದೆ ಸುಮಲತಾ ಅಂಬರೀಶ್ ಅವರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಬೆಂಬಲಿಗರು ಪಕ್ಷೇತರವಾಗಿ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಈ ನಡುವೆ ಆಪ್ತರಾಗಿರುವ ಸಚ್ಚಿದಾನಂದ ಅವರು ಸುಮಲತಾ ಅವರಿಗೆ ಕಿವಿ ಮಾತು ಹೇಳಿದ್ದಾರೆ.
ಬೆಂಗಳೂರು, ಮಾ.25: ಬಿಜೆಪಿ ಹೈಕಮಾಂಡ್ ಮಂಡ್ಯ ಲೋಕಸಭಾ ಕ್ಷೇತ್ರ ಮೈತ್ರಿ ಪಕ್ಷ ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟಿದೆ. ಪರಿಣಾಮ ಬಿಜೆಪಿ ಬೆಂಬಲಿತ ಮಂಡ್ಯದ (Mandya) ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಬೆಂಬಲಿಗರು ಪಕ್ಷೇತರವಾಗಿ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಈ ನಡುವೆ ಆಪ್ತರಾಗಿರುವ ಸಚ್ಚಿದಾನಂದ ಅವರು ಸುಮಲತಾ ಅವರಿಗೆ ಕಿವಿ ಮಾತು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಚ್ಚಿದಾನಂದ, ಈ ಬಾರಿ ಮಂಡ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಗೆಲ್ಲುವುದು ಖಚಿತ. ಮೈತ್ರಿ ಅಭ್ಯರ್ಥಿ ಗೆಲ್ಲಿಸಲು BJP-JDS ಒಟ್ಟಿಗೆ ಕೆಲಸ ಮಾಡಲಿದೆ. ಜಿಲ್ಲೆಯಲ್ಲಿ ಅಂಬರೀಶ್ ಕುಟುಂಬಕ್ಕೆ ಉತ್ತಮ ಹೆಸರಿದೆ. ಸುಮಲತಾ ಜೊತೆ ನಮ್ಮ ರಾಷ್ಟ್ರೀಯ ನಾಯಕರು ಸಂಪರ್ಕದಲ್ಲಿದ್ದಾರೆ. ಸುಮಲತಾರಿಗೆ ಉತ್ತಮ ಭವಿಷ್ಯ ಇದೆ. ಆದರೆ ತಾಳ್ಮೆಯಿಂದ ಇರಬೇಕು ಎಂದರು.
ಇದನ್ನೂ ಓದಿ: ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡೇಮಾಡುತ್ತಾರೆ: ಹನಕೆರೆ ಶಶಿಕುಮಾರ್, ಸಂಸದೆ ಆಪ್ತ
ಪ್ರಧಾನಿ ಮೋದಿ ಬಗ್ಗೆ ಸುಮಲತಾ ಅವರು ಅಪಾರ ವಿಶ್ವಾಸ ಇಟ್ಟಿದ್ದಾರೆ. ನಾಳೆ ಮಂಡ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಭೆ ಕರೆದಿದ್ದಾರೆ. ಎಲ್ಲಾ ವಿಚಾರಗಳು ಚರ್ಚೆಗೆ ಬರಲಿವೆ ಎಂದರು. ಯಾರೇ ಅಭ್ಯರ್ಥಿ ಆದರೂ ಸುಮಲತಾ ಪ್ರಚಾರಕ್ಕೆ ಬರುತ್ತಾರಾ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಸುಮಲತಾ ಅವರ ಬಗ್ಗೆ ಮಾತಾಡುವಷ್ಟು ನಾನು ದೊಡ್ಡವನಲ್ಲ. ನಮಗೆ ಸುಮಲತಾ ಅವರು ವಿಧಾನಸಭೆ ಚುನಾವಣೆ ಸಂಧರ್ಭದಲ್ಲಿ ಬಂದು ಆಶಿರ್ವಾದ ಮಾಡಿದ್ದರು ಎಂದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು, ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಕೂಡ ಸಭೆ ಮಾಡಿದ್ದರು ಎಂದರು. ಸುಮಲತಾ ಬಿಜೆಪಿ ಪಕ್ಷಕ್ಕೆ ಸೇರಿಲ್ಲ ಎಂಬ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿಕೆ ವಿಚಾರವಾಗಿ ಮಾತನಾಡಿದ ಸಚ್ಚಿದಾನಂದ, ನಾನೊಬ್ಬ ಶ್ರೀರಂಗಪಟ್ಟಣದಲ್ಲಿ ಪರಾಜಿತ ಅಭ್ಯರ್ಥಿ. ನೂರಕ್ಕೆ ನೂರು ಬಾಹ್ಯ ಬೆಂಬಲ ನೀಡಿದರು. ಅಂಬರೀಶ್ ಅಣ್ಣ ಅಭಿಮಾನಿ ಆಗಿ ಸುಮಲತಾ ಅಕ್ಕನಿಗೆ ಭವಿಷ್ಯ ಇದೆ. ಅವರು ತಾಳ್ಮೆಯಿಂದ ಇರಬೇಕು ಎಂದರು.
ವರದಿ: ಈರಣ್ಣ ಬಸವ, ಟಿವಿ9 ಬೆಂಗಳೂರು
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ