ಬಸವನಹಳ್ಳಿಯ ಚಾಂಪಿಯನ್ ಹೋರಿ ‘ಕನಸುಗಾರ’ನ ಹುಟ್ಟುಹಬ್ಬದಲ್ಲಿ ಭಾಗಿಯಾದ ಎಂಪಿ ರೇಣುಕಾಚಾರ್ಯ
ಬಸವನಹಳ್ಳಿಯ ತಮ್ಮ ಊರಿನ ಹೆಮ್ಮೆಯೆನಿಸಿರುವ ಹೋರಿಗೆ ಕನಸುಗಾರ ಅಂತ ಹೆಸರನ್ನೂ ಇಟ್ಟಿದ್ದಾರೆ. ಹೋರಿಯ ಬರ್ತ್ಡೇಯನ್ನು ಊರವರು ಬರೆದಿಟ್ಟಿರುವುದು ಶ್ಲಾಘನೀಯ. ಜನ ತಮ್ಮ ಸಾಕುನಾಯಿಯ ಹುಟ್ಟುಹಬ್ಬ ಆಚರಿಸುವುದನ್ನು ನಾವು ನೋಡುತ್ತಿರುತ್ತೇವೆ, ಅದರೆ ಹೋರಿಗಳದ್ದು ಅಪರೂಪ. ಮಾಜಿ ಸಚಿವ ಹೋರಿಗೆ ಕೇಕ್ ಕಟ್ ಮಾಡಿ ತಿನ್ನಿಸುತ್ತಾರೆ, ನಂತರ ತಾವೂ ತಿನ್ನುತ್ತಾರೆ.
ದಾವಣಗೆರೆ, ಮೇ 31: ಕಳೆದ ವಿಧಾನಸಭಾ ಚುನಾವಣೆಯಲ್ಲಿ (Assembly polls) ಸೋತರೂ ಎಂಪಿ ರೇಣುಕಾಚಾರ್ಯ ಕ್ಷೇತ್ರದಲ್ಲಿ ಔಟ್ಡೇಟೆಟ್ ಆಗಿಲ್ಲ, ಈಗಲೂ ಜನಪ್ರಿಯತೆ ಉಳಿಸಿಕೊಂಡಿದ್ದಾರೆ. ಇವತ್ತು, ಫಾರ್ ಎ ಚೇಂಜ್ ಅವರು ಉಚ್ಚಾಟಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ರನ್ನು ಬಯ್ಯದೆ, ತೆಗಳದೆ, ಲೇವಡಿ ಮಾಡದೆ ಹೊನ್ನಾಳಿ ಕ್ಷೇತ್ರದಲ್ಲಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಚಾಂಪಿಯನ್ ಅನಿಸಿಕೊಂಡಿರುವ ಬಸವನಹಳ್ಳಿಯ ಹೋರಿಯೊಂದರ ಹುಟ್ಟುಹಬ್ಬದಲ್ಲಿ ಪಾಲ್ಗೊಳ್ಳಲು ಆಗಮಿಸಿದರು. ಅವರು ಕಾರಲ್ಲಿ ಆಗಮಿಸಿದ ಕೂಡಲೇ ಚಿಕ್ಕಪುಟ್ಟ ಮಕ್ಕಳು ಓಡಿಬಂದು ರೇಣುಕಾಚಾರ್ಯರನ್ನು ಬರಮಾಡಿಕೊಳ್ಳುತ್ತಾರೆ.
ಇದನ್ನೂ ಓದಿ: ಯತ್ನಾಳ್ ಹಿಂದೂ ನಾಯಕನಾಗಿದ್ದರೆ ಟೋಪಿ ಧರಿಸಿ, ಕಬಾಬ್ ತಿನ್ನುತ್ತ ಇಫ್ತಿಯಾರ್ ಕೂಟ ಏರ್ಪಡಿಸುತ್ತಿರಲಿಲ್ಲ: ರೇಣುಕಾಚಾರ್ಯ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos

