ಯಾದಗಿರಿ: ನೀರು ಹರಿಯುತ್ತಿರುವ ಸೇತುವೆ ಮೇಲೆ ಮಕ್ಕಳು ಮತ್ತು ಮಕ್ಕಳಾಟ ಮಾಡುವ ವಯಸ್ಕರು
ಯಾದಗಿರಿ ಜಿಲ್ಲೆಯಲ್ಲಿ ಕಳೆದ ಎರಡು ಮೂರು ದಿನಗಳಿಂದ ವ್ಯಾಪಕ ಮತ್ತು ಜೋರಾಗಿ ಮಳೆಯಾಗುತ್ತಿದೆ. ಜಿಲ್ಲೆಯ ಮೂಲಕ ಹರಿದು ಹೋಗುವ ಭೀಮಾನದಿಯಲ್ಲಿ ನೀರಿನ ಪ್ರಮಾಣ ಜಾಸ್ತಿಯಾಗಿದೆ. ವಿಡಿಯೋದಲ್ಲಿ ಕಾಣುವ ರಸ್ತೆ ಕಕ್ಕೇರಾ, ಹುಣಸಗಿ ಮತ್ತು ಸುರಪುರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿರುವುದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಇನ್ನೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಯಾದಗಿರಿ, ಮೇ 31: ಜನಕ್ಕೆ ಏನು ಹೇಳಿದರೂ, ಬೊಬ್ಬೆ ಹೊಡೆದರೂ ಬುದ್ಧಿ ಬರಲ್ಲ ಮಾರಾಯ್ರೇ. ಇದು ಜಿಲ್ಲೆಯ ಸುರಪುರ ತಾಲೂಕಿನ ಏದಲಭಾವಿಗೆ ಹೋಗುವ ರಸ್ತೆಗೆ ನಿರ್ಮಿಸಲಾಗಿರುವ ಒಂದ ಚಿಕ್ಕ ಸೇತುವೆ. ಆದರೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸೇತುವೆ ಮುಳುಗಿ (bridge submerged) ಅದರ ಮೇಲೆ ನೀರು ಹರಿಯುತ್ತಿದೆ. ಅದು ಸರಿ, ಅದರೆ ಜನ ನೀರು ಹರಿಯುತ್ತಿರುವ ಸೇತುವೆ ಮೇಲೆ ನಿಂತು ಹರಟೆ ಹೊಡೆಯುತ್ತಿದ್ದಾರೆ. ಅವರಲ್ಲಿ ಚಿಕ್ಕ ವಯಸ್ಸಿನ ಇಬ್ಬರು ಮಕ್ಕಳೂ ಸೇರಿದ್ದಾರೆ, ಇಬ್ಬರಲ್ಲಿ ಒಂದು ಹೆಣ್ಣು ಮಗು ಬೇರೆ. ಸೇತುವೆ ಮೇಲೆ ನಿಂತಿರುವವರಲ್ಲಿ ಅವರ ತಂದೆ ತಾಯಿ, ಸಂಬಂಧಿಕರು ಇದ್ದಾರೋ ಇಲ್ಲವೋ ಗೊತ್ತಿಲ್ಲ. ನೀರಿನ ರಭಸ ಜೋರಾಗೇನೂ ಇಲ್ಲ ಅದರೆ ಸೇತುವೆ ಮೇಲೆ ಹರಿಯುವ ನೀರಿನಿಂದ ಅಪಾಯ ತಪ್ಪಿದ್ದಲ್ಲ.
ಇದನ್ನೂ ಓದಿ: Karnataka Rains: ಕರ್ನಾಟಕದಲ್ಲಿ ಜೂನ್ 2ರವರೆಗೂ ಭಾರಿ ಮಳೆ, 5 ಜಿಲ್ಲೆಗಳಿಗೆ ರೆಡ್ ಅಲರ್ಟ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

