‘ಎಲ್ಲರಿಗೂ ನೋವಿದೆ’; ದರ್ಶನ್ ಪ್ರಕರಣದಲ್ಲಿ ಸುಮಲತಾ, ರಾಕ್ಲೈನ್ ಮೌನ ಏಕೆ?
ದರ್ಶನ್ ಪ್ರಕರಣದಲ್ಲಿ ಅನೇಕರು ಮೌನ ತಾಳಿದ್ದಾರೆ. ಅವರನ್ನು ಮಗ ಎಂದೇ ಕರೆಯುತ್ತಿದ್ದ ಸುಮಲತಾ ಅಂಬರೀಷ್ ಈಗ ಮೌನ ತಾಳಿದ್ದಾರೆ. ರಾಕ್ಲೈನ್ ವೆಂಕಟೇಶ್ ಕೂಡ ಈ ಪ್ರಕರಣದ ಬಗ್ಗೆ ಮಾತನಾಡಿಲ್ಲ. ಈ ಮೌನ ಏಕೆ ಎಂಬ ಪ್ರಶ್ನೆಗೆ ನಿರ್ಮಾಪಕ ಸಾರಾ ಗೋವಿಂದು ಮಾತನಾಡಿದ್ದಾರೆ.
ದರ್ಶನ್ ಪ್ರಕರಣದಲ್ಲಿ ಅನೇಕರು ಮೌನ ತಾಳಿದ್ದಾರೆ. ದರ್ಶನ್ ಅವರನ್ನು ಮಗ ಎಂದೇ ಕರೆಯುತ್ತಿದ್ದ ಸುಮಲತಾ ಅಂಬರೀಷ್ ಅವರು ಮೌನ ತಾಳಿದ್ದಾರೆ. ರಾಕ್ಲೈನ್ ವೆಂಕಟೇಶ್ ಕೂಡ ಈ ಪ್ರಕರಣದ ಬಗ್ಗೆ ಮಾತನಾಡಿಲ್ಲ. ಈ ಮೌನ ಏಕೆ ಎಂಬ ಪ್ರಶ್ನೆಗೆ ನಿರ್ಮಾಪಕ ಸಾರಾ ಗೋವಿಂದು ಮಾತನಾಡಿದ್ದಾರೆ. ‘ಮೊದಲು ಮುಂದೆ ಬರಬೇಕಾಗಿದ್ದು ಕಲಾವಿದರ ಸಂಘ. ಎಲ್ಲರಿಗೂ ನೋವಿದೆ. ಆದರೆ, ಬಹಿರಂಗವಾಗಿ ಹೇಳಿಕೊಳ್ಳಲು ಮುಜುಗರ ಪಡುತ್ತಿದ್ದಾರೆ. ಇಡೀ ಚಿತ್ರರಂಗ ಸೇರಬೇಕು. ಎಲ್ಲರೂ ಒಟ್ಟಾಗಿ ಮುಂದೆ ಬರಬೇಕು. ರಾಕ್ಲೈನ್ ಬಂದಿದ್ದರೆ ಸಮಸ್ಯೆ ಬಗೆಹರಿಯುತ್ತಿತ್ತು’ ಎಂದಿದ್ದಾರೆ ಸಾರಾ ಗೋವಿಂದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos