ದೂದ್ ಗಂಗಾ ನದಿಯಲ್ಲಿ ಪ್ರವಾಹದ ಸಾಧ್ಯತೆ, ಆತಂಕದಲ್ಲಿ ನದಿಪಾತ್ರದ ಗ್ರಾಮಸ್ಥರು
ಗ್ರಾಮಸ್ಥರು ಹೇಳುವ ಹಾಗೆ ಈಗಾಗಲೇ ಸಾವಿರಾರು ಎಕರೆ ಜಮೀನುಗಳಲ್ಲಿನ ಬೆಳೆಗಳು ನಾಶವಾಗಿವೆ. ಇಲ್ಲಿಯ ಜನರ ದೌರ್ಭಾಗ್ಯ ನೋಡಿ ಹೇಗಿದೆ. ಕಳೆದ ವರ್ಷ ಮಳೆಯಿಲ್ಲದ ಕಾರಣ ಬೆಳೆಗಳೆಲ್ಲ ಒಣಗಿ ನಾಶವಾದವು, ಈ ಬಾರಿ ಹೆಚ್ಚು ಮಳೆಯ ಕಾರಣ ಬೆಳೆಗಳು ಹಾಳಾಗಿವೆ!
ಬೆಳಗಾವಿ: ಮಹಾರಾಷ್ಟ್ರದಲ್ಲಿ ಮಳೆ ನಿಲ್ಲುತ್ತಿಲ್ಲ ಮತ್ತು ದೂದ್ ಗಂಗಾ ನದಿಪಾತ್ರದಲ್ಲಿರುವ ಗ್ರಾಮದ ನಿವಾಸಿಗಳಲ್ಲಿ ಮನೆ ಮಾಡಿರುವ ಪ್ರವಾಹದ ಆತಂಕವೂ ಕಡಿಮೆಯಾಗುತ್ತಿಲ್ಲ. ಅಲ್ಲಿ ಮಳೆ ಹೆಚ್ಚಿದಂತೆಲ್ಲ ನದಿಗೆ ಹರಿದು ಬರುವ ನೀರಿನ ಪ್ರಮಾಣವೂ ಅಧಿಕವಾಗುತ್ತದೆ. ನಮ್ಮ ಬೆಳಗಾವಿ ವರದಿಗಾರ ನಿನ್ನೆ ನದಿಪಾತ್ರದಲ್ಲಿರುವ ಬೆದಕಿಹಾಳ್ ಗ್ರಾಮಕ್ಕೆ ಹೋಗಿ ಅಲ್ಲಿನ ಪರಿಸ್ಥಿಯನ್ನು ವಿವರಿಸಿದ್ದರು. ಇವತ್ತು ಅವರು ನದಿಪಾತ್ರದ ಮತ್ತೊಂದು ಗ್ರಾಮ ಕಾರದಗಾ ಬಂದಿದ್ದು ಇಲ್ಲಿ ನುಗ್ಗಿ ಬಂದಿರುವ ನದಿ ನೀರಿನಿಂದ ಸ್ಥಿತಿ ಮತ್ತಷ್ಟು ಆತಂಕಮಯವಾಗಿದೆ. ಕಾರದಗಾ ಗ್ರಾಮದ ಹೊರವಲಯಕ್ಕೆ ನೀರು ಹರಿದುಬಂದಿದೆ ಮತ್ತು ಗ್ರಾಮಕ್ಕೂ ನುಗ್ಗುವ ಸನ್ನಿವೇಶವನ್ನು ಸೃಷ್ಟಿಯಾಗಿದೆ. ದೃಶ್ಯಗಳಲ್ಲಿ ಕಾಣುವ ಬಂಗಾಲೀ ಬಾಬಾ ದರ್ಗಾದ ಸುತ್ತ ನೀರು ಹರಿಯುತ್ತಿದೆ, ನೀರಿನ ರಭಸವನ್ನು ಅರಿಯದೆ ಜನ ದರ್ಗಾಗೆ ಹೋಗುವ ಪ್ರಯತ್ನ ಮಾಡುವ ಸಾಧ್ಯತೆ ಇರುವುದರಿಂದ ಈ ಭಾಗದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಪ್ರತಿ ಮಳೆಗಾಲದಲ್ಲೂ ಕಾರದಗಾ ನಿವಾಸಿಗಳು ಪ್ರವಾಹದ ಆತಂಕವನ್ನು ಎದುರಿಸತ್ತಾರಂತೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಉಕ್ಕಿ ಹರಿಯುತ್ತಿರುವ ದೂದ್ ಗಂಗಾ ನದಿ, ಪ್ರವಾಹ ಭೀತಿಯಲ್ಲಿ ನದಿಪಾತ್ರದ ಗ್ರಾಮಸ್ಥರು