BBK Drone Prathap: ‘ಕಷ್ಟದಲ್ಲಿರುವ ಡೆಲಿವರಿ ಬಾಯ್ಸ್ಗೆ ಬೈಕ್ ಕೊಡ್ತೀನಿ’; ಪ್ರತಾಪ್ ಭರವಸೆ
ಸಂಗೀತಾ ಶೃಂಗೇರಿ, ವಿನಯ್ ಗೌಡ ಅವರಂಥ ಘಟಾನುಘಟಿ ಕಲಾವಿದರನ್ನು ಹಿಂದಿಕ್ಕಿ ಸುದೀಪ್ ಪಕ್ಕ ನಿಂತರು ಪ್ರತಾಪ್. ಅಂತಿಮವಾಗಿ ಕಾರ್ತಿಕ್ ಕೈನ ಸುದೀಪ್ ಎತ್ತಿದರು. ಈ ಕುರಿತು ಪ್ರತಾಪ್ ಅವರಿಗೆ ಯಾವುದೇ ಬೇಸರ ಇಲ್ಲ.
ಡ್ರೋನ್ ಪ್ರತಾಪ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ನ ರನ್ನರ್ ಅಪ್ ಆಗಿದ್ದಾರೆ. ವಿನಯ್ ಗೌಡ, ಸಂಗೀತಾ ಶೃಂಗೇರಿ ಅವರಂಥ ಘಟಾನುಘಟಿ ಕಲಾವಿದರನ್ನು ಹಿಂದಿಕ್ಕಿ ಸುದೀಪ್ ಪಕ್ಕ ನಿಂತರು ಪ್ರತಾಪ್. ಅಂತಿಮವಾಗಿ ಕಾರ್ತಿಕ್ ಕೈನ ಸುದೀಪ್ ಎತ್ತಿದರು. ಈ ಬಗ್ಗೆ ಪ್ರತಾಪ್ ಅವರಿಗೆ ಯಾವುದೇ ಬೇಸರ ಇಲ್ಲ. ‘ನನಗೆ ಇಲ್ಲಿಯವರೆಗೆ ಬಂದಿದ್ದು ಖುಷಿ ಇದೆ’ ಎಂದು ವೇದಿಕೆ ಮೇಲೆ ಹೇಳಿದ್ದಾರೆ ಪ್ರತಾಪ್. ಈ ಮಧ್ಯೆ ಪ್ರತಾಪ್ (Drone Prathap) ಅವರು ತಮಗೆ ಸಿಕ್ಕ ಬೌನ್ಸ್ ಸ್ಕೂಟರ್ನ ಫುಡ್ ಡೆಲಿವರಿ ಬಾಯ್ಗೆ ನೀಡುವುದಾಗಿ ಹೇಳಿದ್ದಾರೆ. ಪ್ರತಾಪ್ ನಿರ್ಧಾರವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jan 29, 2024 08:50 AM
Latest Videos