ಮಂಡ್ಯ ಧ್ವಜ ವಿವಾದ: ನಿಷೇಧಾಜ್ಞೆ ಹೇರಿರುವ ಕೆರಗೋಡುನಲ್ಲಿ ಅಹಿತಕರ ಶಾಂತಿ, ಬಿಗಿ ಪೊಲೀಸ್ ಬಂದೋಬಸ್ತ್
ಮೂಲಗಳ ಪ್ರಕಾರ ಕಾರ್ಯಕರ್ತರು ಧ್ವಜಹಾರಿಸಲು ಕೆರೆಗೋಡು ಗ್ರಾಮ ಪಂಚಾಯಿತಿಗೆ ಪತ್ರ ಬರೆದು ಅನುಮತಿ ಕೋರಿದ್ದರು. ಆದರೆ, ಅದು ಸರ್ಕಾರಿ ಜಾಗವಾಗಿರುವುದರಿಂದ ಧಾರ್ಮಿಕ ಧ್ವಜಗಳನ್ನು ಹಾರಿಸಲು ಅನುಮತಿ ನೀಡಲಾಗದು ಎಂದು ಪಂಚಾಯಿತಿ ಪ್ರತಿಕ್ರಿಯೆ ನೀಡಿದ್ದರೂ ಹಿಂದೂ ಕಾರ್ಯಕರ್ತರು ಹನುಮ ಧ್ವಜ ಹಾರಿಸಿದ್ದರು. ಪೊಲಿಸರು ಅದನ್ನು ಕೆಳಗಿಳಿಸಿದಾಗ ಗಲಾಟೆ ಶುರುವಾಗಿತ್ತು.
ಮಂಡ್ಯ: ಜಿಲ್ಲೆಯ ಕೆರಗೋಡುನಲ್ಲಿ (Keragodu) ಹಿತಕರವೆನಿಸದ ಶಾಂತಿ ನೆಲೆಗೊಂಡಿದೆ. ಬಿಜೆಪಿ ಮುಖಂಡರು ಮತ್ತು ಹಿಂದೂ ಕಾರ್ಯಕರ್ತರು (Hindu activists) ಗ್ರಾಮದಲ್ಲಿ ಮತ್ತು ಮಂಡ್ಯದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿರುವುದರಿಂದ ಪರಿಸ್ಥಿತಿ ಪ್ರಕ್ಷುಬ್ದಗೊಳ್ಳುವ ಸಾಧ್ಯತೆ ಇದೆ. 200ಕ್ಕಿಂತ ಹೆಚ್ಚಿನ ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ಗಾಗಿ (police security) ಧ್ವಜಸ್ತಂಭದ ಬಳಿ ನಿಯೋಜನೆಗೊಂಡಿರುವುದನ್ನು ಕಾಣಬಹುದು. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತವು ಗ್ರಾಮದಲ್ಲಿ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಿದೆ. ಫೆಬ್ರವರಿ 9 ರಂದು ಹಿಂದೂಪರ ಸಂಘಟನೆಗಳು ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲು ಕರೆಕೊಟ್ಟಿದ್ದು ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಸಹ ಇದರಲ್ಲಿ ಭಾಗಿಯಾಗುವರೆಂದು ಹೇಳಲಾಗುತ್ತಿದೆ. ದೃಶ್ಯಗಳಲ್ಲಿ ಕಾಣುತ್ತಿರುವ ಧ್ವಜಸ್ತಂಭ ಸರ್ಕಾರಿ ಜಾಗದಲ್ಲಿದ್ದರೂ ಜನವರಿ 22 ರಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಹನುಮ ಧ್ವಜವನ್ನು ಹಾರಿಸಿದ್ದರು. ಮೂಲಗಳ ಪ್ರಕಾರ ಕಾರ್ಯಕರ್ತರು ಧ್ವಜಹಾರಿಸಲು ಕೆರಗೋಡು ಗ್ರಾಮ ಪಂಚಾಯಿತಿಗೆ ಪತ್ರ ಬರೆದು ಅನುಮತಿ ಕೋರಿದ್ದರು. ಆದರೆ, ಅದು ಸರ್ಕಾರಿ ಜಾಗವಾಗಿರುವುದರಿಂದ ಧಾರ್ಮಿಕ ಧ್ವಜಗಳನ್ನು ಹಾರಿಸಲು ಅನುಮತಿ ನೀಡಲಾಗದು ಎಂದು ಪಂಚಾಯಿತಿ ಪ್ರತಿಕ್ರಿಯೆ ನೀಡಿದ್ದರೂ ಹಿಂದೂ ಕಾರ್ಯಕರ್ತರು ಹನುಮ ಧ್ವಜ ಹಾರಿಸಿದ್ದರು. ಪೊಲಿಸರು ಅದನ್ನು ಕೆಳಗಿಳಿಸಿದಾಗ ಗಲಾಟೆ ಶುರುವಾಗಿತ್ತು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ