AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ವಿವಾದ: ತ್ರಿವರ್ಣ ಧ್ವಜ ಹಾರಿಸಲು ಸಿಎಂ ಸೂಚನೆ

ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ವಿವಾದದ ಬಗ್ಗೆ ಶೋಷಿತರ ಜಾಗೃತಿ ​​ಸಮಾವೇಶಕ್ಕೂ ಮುಂಚೆ ಚಿತ್ರದುರ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ ಹನುಮ ಧ್ವಜವನ್ನು ಹಾರಿಸಿದ್ದರು. ಸದ್ಯ ರಾಷ್ಟ್ರಧ್ವಜ ಹಾರಿಸಲು ನಾವು ಸೂಚಿಸಿದ್ದೇವೆ ಎಂದು ಹೇಳಿದ್ದಾರೆ.  

ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ವಿವಾದ: ತ್ರಿವರ್ಣ ಧ್ವಜ ಹಾರಿಸಲು ಸಿಎಂ ಸೂಚನೆ
ಹನುಮ ಧ್ವಜ ವಿವಾದ
ಬಸವರಾಜ ಮುದನೂರ್, ಚಿತ್ರದುರ್ಗ
| Edited By: |

Updated on: Jan 28, 2024 | 3:55 PM

Share

ಚಿತ್ರದುರ್ಗ, ಜನವರಿ 28: ಮಂಡ್ಯ (Mandya) ದ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ವಿವಾದ ತಾರಕಕ್ಕೇರಿದೆ. ಇದರ ಬೆನ್ನಲ್ಲೇ ರಾಷ್ಟ್ರಧ್ವಜ ಹಾರಿಸಲು ನಾವು ಸೂಚಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಗರದ ಮಾದಾರ ಚನ್ನಯ್ಯ ಮಠದ ಬಳಿ ಮೈದಾನದಲ್ಲಿ ಆಯೋಜಸಿದ್ದ ಶೋಷಿತರ ಜಾಗೃತಿ ​​ಸಮಾವೇಶಕ್ಕೂ ಮುಂಚೆ ಮಾತನಾಡಿದ್ದು, ಹನುಮ ಧ್ವಜ ಹಾರಿಸಿದ್ದರು. ಸದ್ಯ ರಾಷ್ಟ್ರಧ್ವಜ ಹಾರಿಸಲು ನಾವು ಸೂಚಿಸಿದ್ದೇವೆ ಎಂದು ಹೇಳಿದ್ದಾರೆ.

ತ್ರಿವರ್ಣ ಧ್ವಜ ಹಾರಿಸಲು ಮುಂದಾದ ಜಿಲ್ಲಾಡಳಿತ 

ಇತ್ತ ಸಿಎಂ ಸಿದ್ದರಾಮಯ್ಯ ಸೂಚನೆ ನೀಡುತ್ತಿದ್ದಂತೆ ಎಸಿ ನೇತೃತ್ವದಲ್ಲಿ ಧ್ವಜಸ್ತಂಬದ ಮೇಲೆ ತ್ರಿವರ್ಣ ಧ್ವಜ ಹಾರಿಸಲು ಜಿಲ್ಲಾಡಳಿತ ಮುಂದಾಗಿದೆ. ಪೊಲೀಸ್ ಸರ್ಪಗಾವಲಿನಲ್ಲಿ ತ್ರಿವರ್ಣ ಧ್ವಜ ಹಾರಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ವೇಳೆ ಸ್ಥಳದಲ್ಲಿ ನೆರೆದಿದ್ದ ಬಿಜೆಪಿ, ಜೆಡಿಎಸ್‌ ಕಾರ್ಯಕರ್ತರನ್ನು ಪೊಲೀಸರು ಚದುರಿಸಲು ಲಾಠಿ ಚಾರ್ಜ್ ಮಾಡಿದ್ದು, ಕಾರ್ಯಕರ್ತನ ತಲೆಗೆ ಗಂಭೀರ ಗಾಯವಾಗಿ ರಕ್ತ ಹರಿದಿದೆ.

ಇದನ್ನೂ ಓದಿ: ರಾಜಕೀಯ ತಿರುವು ಪಡೆದುಕೊಂಡ ಮಂಡ್ಯ ಕೇಸರಿ ಧ್ವಜ ವಿವಾದ; ಕಾಂಗ್ರೆಸ್ ವಿರುದ್ಧ ಬಿಜೆಪಿ-ಜೆಡಿಎಸ್ ಪ್ರತಿಭಟನೆ

ರಸ್ತೆಯಲ್ಲಿ ಮಲಗಿದ್ದ ಕಾರ್ಯಕರ್ತರನ್ನು ಪೊಲೀಸರು ಬಲವಂತವಾಗಿ ಕರೆದೊಯ್ದಿದ್ದಾರೆ. ಬಳಿಕ ಬ್ಯಾನರ್ ತೆರವು ಮಾಡಿದ್ದಾರೆ. ಹಾಗಾಗಿ ಕಾರ್ಯಕರ್ತರು ರಸ್ತೆಯಲ್ಲಿ ಮಲಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ ಹಿನ್ನೆಲೆ

ಜನವರಿ 22ರಂದು ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ವೇಳೆ ಕೆರೆಗೋಡುನಲ್ಲಿ 108 ಅಡಿ ಸ್ತಂಭದಲ್ಲಿ ಹನುಮ ಧ್ವಜವನ್ನು ಹಾರಿಸಲಾಗಿತ್ತು. ಇಂದು ಮುಂಜಾನೆ ಮೂರು ಗಂಟೆಗೆ ಧ್ವಜ ತೆರವು ಮಾಡಲು ಎಸಿ ಮತ್ತು ತಹಶೀಲ್ದಾರ್ ಸೇರಿ ಹಲವು ಅಧಿಕಾರಿಗಳು ಗ್ರಾಮಕ್ಕೆ ಬಂದಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಗ್ರಾಮಸ್ಥರು, ಅಧಿಕಾರಿಗಳ ಜೊತೆ ಜಟಾಪಟಿ ನಡೆಸಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ನೆನಪಿಗಾಗಿ ಹಾರಿಸಲಾದ ಹನುಮ ಧ್ವಜ ತೆರವಿಗೆ ಗ್ರಾಮಸ್ಥರ ವಿರೋಧ, ಲಾಠಿ ಚಾರ್ಜ್​​​​

ಧ್ವಜ ಇಳಿಸಲು ಬಿಡಲ್ಲ. ತಾಕತ್ತಿದ್ದರೇ ಧ್ವಜ ಹಾರುವುದನ್ನು ತಡೆಯಿರಿ. ಧರ್ಮಕ್ಕಾಗಿ ಕುದಿಯದ ರಕ್ತ, ರಕ್ತವೇ ಅಲ್ಲ ಎಂದು ಪ್ರತಿಭಟನೆ ನಡೆಸಿದ್ದರು. ಮಹಿಳೆಯರು, ಯುವಕರು ಭಾಗಿಯಾಗಿ ಜೈ ಶ್ರೀರಾಮ್, ಜೈ ಹನುಮ ಘೋಷಣೆ ಕೂಗಿದ್ದರು. ವಿರೋಧದ ನಡುವೆಯೂ ಸದ್ಯ ಜಿಲ್ಲಾಡಳಿತ ಧ್ವಜ ತೆರವು ಮಾಡಿದೆ. ಬಳಿಕ ತ್ರಿವರ್ಣ ಧ್ವಜ ಹಾರಿಸಲಾಗಿದೆ.

ಹನುಮ ಧ್ವಜ ದಂಗಲ್ ರಾಜಕೀಯ ತಿರುವು ಪಡೆದುಕೊಂಡಿದೆ. ವಿಪಕ್ಷ ನಾಯಕ ಆರ್‌.ಅಶೋಕ್ ನೇತೃತ್ವದಲ್ಲಿ ಬಿಜೆಪಿ ನಿಯೋಗ ಕೆರಗೋಡು ಗ್ರಾಮಕ್ಕೆ ಭೇಟಿ ನೀಡಿದರು, ಈ ವೇಳೆ ಅಶೋಕ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.