ಸುಯಶ್ ಶರ್ಮಾ ಸ್ಪಿನ್ ಮೋಡಿ: ಎರಡಂಕಿ ಮೊತ್ತಕ್ಕೆ ಎದುರಾಳಿ ತಂಡ ಆಲೌಟ್
DPL 2025: ವಿಶೇಷ ಎಂದರೆ ಅಗ್ರ ಕ್ರಮಾಂಕದ ಈ ನಾಲ್ಕು ವಿಕೆಟ್ಗಳನ್ನು ಕಬಳಿಸಿರುವುದು ಸುಯಶ್ ಶರ್ಮಾ. ಈ ಮೂಲಕ 4 ಓವರ್ಗಳಲ್ಲಿ ಕೇವಲ 17 ರನ್ ನೀಡಿ 4 ವಿಕೆಟ್ ಕಬಳಿಸಿ ಮಿಂಚಿದರು. ಈ ಆರಂಭಿಕ ಆಘಾತದಿಂದ ಪಾರಾಗುವ ಮುನ್ನವೇ ಪುರಾಣಿ ದಿಲ್ಲಿ-6 ತಂಡವು ಕೇವಲ 66 ರನ್ಗಳಿಗೆ ಆಲೌಟ್ ಆದರು. ಈ ಮೂಲಕ ಔಟರ್ ಡೆಲ್ಲಿ ವಾರಿಯರ್ಸ್ ತಂಡವು 82 ರನ್ಗಳ ಜಯ ಸಾಧಿಸಿದೆ.
ಡೆಲ್ಲಿ ಪ್ರೀಮಿಯರ್ ಲೀಗ್ನ 6ನೇ ಪಂದ್ಯದಲ್ಲಿ ಯುವ ಸ್ಪಿನ್ನರ್ ಸುಯಶ್ ಶರ್ಮಾ ಸ್ಪಿನ್ ಮೋಡಿ ಮಾಡಿದ್ದಾರೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಔಟರ್ ಡೆಲ್ಲಿ ವಾರಿಯರ್ಸ್ ಹಾಗೂ ಪುರಾಣಿ ದಿಲ್ಲಿ-6 ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್ನಲ್ಲಿ ಟಾಸ್ ಗೆದ್ದ ಔಟರ್ ಡೆಲ್ಲಿ ವಾರಿಯರ್ಸ್ ತಂಡವು ಬ್ಯಾಟಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಔಟರ್ ಡೆಲ್ಲಿ ವಾರಿಯರ್ಸ್ ಪರ ಪ್ರಿಯಾಂಶ್ ಆರ್ಯಾ 16 ರನ್ಗಳಿಸಿದರೆ, ಸನತ್ ಸಾಂಗ್ವಾನ್ 26 ರನ್ ಬಾರಿಸಿದರು. ಇನ್ನು ವರುಣ್ ಯಾದವ್ ಬ್ಯಾಟ್ನಿಂದ 18 ರನ್ಗಳು ಮೂಡಿಬಂದವು. ಹಾಗೆಯೇ ಕೆಳ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ನಾಯಕ ಸಿದ್ಧಾರ್ಥ್ ಶರ್ಮಾ 14 ಎಸೆತಗಳಲ್ಲಿ 21 ರನ್ ಗಳಿಸಿದರು. ಈ ಮೂಲಕ ಔಟರ್ ಡೆಲ್ಲಿ ವಾರಿಯರ್ಸ್ ತಂಡವು 20 ಓವರ್ಗಳಲ್ಲಿ 148 ರನ್ಗಳಿಸಿ ಆಲೌಟ್ ಆದರು.
149 ರನ್ಗಳ ಸುಲಭ ಗುರಿ ಬೆನ್ನತ್ತಿದ ಪುರಾಣಿ ದಿಲ್ಲಿ-6 ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಸುಯಶ್ ಶರ್ಮಾ ಯಶಸ್ವಿಯಾದರು. ಪವರ್ಪ್ಲೇನಲ್ಲೇ ದಾಳಿಗಿಳಿದಿ ಸುಯಶ್ ತನ್ನ ಸ್ಪಿನ್ ಮೋಡಿಯೊಂದಿಗೆ ಬ್ಯಾಟರ್ಗಳನ್ನು ಇಕ್ಕಟಿಗೆ ಸಿಲುಕಿದರು. ಪರಿಣಾಮ ಪುರಾಣಿ ದಿಲ್ಲಿ-6 ತಂಡವು ಕೇವಲ 31 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿತು.
ವಿಶೇಷ ಎಂದರೆ ಅಗ್ರ ಕ್ರಮಾಂಕದ ಈ ನಾಲ್ಕು ವಿಕೆಟ್ಗಳನ್ನು ಕಬಳಿಸಿರುವುದು ಸುಯಶ್ ಶರ್ಮಾ. ಈ ಮೂಲಕ 4 ಓವರ್ಗಳಲ್ಲಿ ಕೇವಲ 17 ರನ್ ನೀಡಿ 4 ವಿಕೆಟ್ ಕಬಳಿಸಿ ಮಿಂಚಿದರು. ಈ ಆರಂಭಿಕ ಆಘಾತದಿಂದ ಪಾರಾಗುವ ಮುನ್ನವೇ ಪುರಾಣಿ ದಿಲ್ಲಿ-6 ತಂಡವು ಕೇವಲ 66 ರನ್ಗಳಿಗೆ ಆಲೌಟ್ ಆದರು. ಈ ಮೂಲಕ ಔಟರ್ ಡೆಲ್ಲಿ ವಾರಿಯರ್ಸ್ ತಂಡವು 82 ರನ್ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಅತ್ಯುತ್ತಮ ಸ್ಪಿನ್ ದಾಳಿ ಸಂಘಟಿಸಿದ ಆರ್ಸಿಬಿ ಆಟಗಾರ ಸುಯಶ್ ಶರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

