AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಣ್ಣಿಗೆ ಕಾಡಿಗೆ ಹಚ್ಚುವುದರ ಹಿಂದಿನ ರಹಸ್ಯ ಹಾಗೂ ಇದರ ಉಪಯೋಗ ತಿಳಿಯಿರಿ

ಕಣ್ಣಿಗೆ ಕಾಡಿಗೆ ಹಚ್ಚುವುದರ ಹಿಂದಿನ ರಹಸ್ಯ ಹಾಗೂ ಇದರ ಉಪಯೋಗ ತಿಳಿಯಿರಿ

ಗಂಗಾಧರ​ ಬ. ಸಾಬೋಜಿ
|

Updated on:Aug 06, 2025 | 7:01 AM

Share

ಕಾಡಿಗೆ ಹಚ್ಚುವುದು ಒಂದು ಹಳೆಯ ಸಂಪ್ರದಾಯ. ಇದನ್ನು ಮಕ್ಕಳಿಗೆ ಮತ್ತು ತಾಯಂದಿರಿಗೆ ದೃಷ್ಟಿದೋಷವಾಗಬಾರದು ಎಂದು ಬಳಸಲಾಗುತ್ತದೆ. ತಿರುಪತಿಯ ವೆಂಕಟೇಶ್ವರ ದೇವಸ್ಥಾನ ಸೇರಿದಂತೆ ಅನೇಕ ದೇವಾಲಯಗಳಲ್ಲಿ ಕಾಡಿಗೆಯನ್ನು ಬಳಸುವುದನ್ನು ಕಾಣಬಹುದು. ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಕೂಡ ಕಾಡಿಗೆಯ ಉಲ್ಲೇಖವಿದೆ. ಈ ಬಗ್ಗೆ ವಿಡಿಯೋದಲ್ಲಿ ತಿಳಿಸಿಕೊಡಲಾಗಿದೆ.

ಬೆಂಗಳೂರು, ಆಗಸ್ಟ್​ 06: ಕಾಡಿಗೆ ಹಚ್ಚುವುದು ಒಂದು ಪ್ರಾಚೀನ ಸಂಪ್ರದಾಯ. ಇದನ್ನು ದೃಷ್ಟಿ ದೋಷ ಆಗಬಾರದಂದು ಸಹ ಬಳಸಲಾಗುತ್ತದೆ. ಹಿಂದೆ ತಾಯಂದಿರು ತಮ್ಮ ಮಕ್ಕಳಿಗೆ ಕೊಬ್ಬರಿ ಚಿಪ್ಪಿನಿಂದ ತಯಾರಿಸಿದ ಕಾಡಿಗೆಯನ್ನು ಹಚ್ಚುತ್ತಿದ್ದರು. ಇದು ಕೇವಲ ಸಂಪ್ರದಾಯವಲ್ಲದೆ, ಕೆಲವು ಜ್ಯೋತಿಷ್ಯ ಶಾಸ್ತ್ರಗಳಲ್ಲೂ ಉಲ್ಲೇಖಿಸಲ್ಪಟ್ಟಿದೆ. ಕಾಡಿಗೆಯನ್ನು ಸರ್ಪದೋಷ, ಕುಜದೋಷ ಮತ್ತು ಶನಿದೋಷಗಳನ್ನು ನಿವಾರಿಸಲು ಸಹ ಬಳಸಲಾಗುತ್ತದೆ. ಆಧುನಿಕ ಚಿಕಿತ್ಸೆಯ ಜೊತೆಗೆ, ಕಾಡಿಗೆಯ ಬಳಕೆ ಇನ್ನೂ ಕೆಲವು ಜನರ ನಂಬಿಕೆಯನ್ನು ಹೊಂದಿದೆ. ಆದರೆ, ಈ ಬಳಕೆಯ ಬಗ್ಗೆ ವೈಜ್ಞಾನಿಕ ಪುರಾವೆಗಳು ಇಲ್ಲ.

Published on: Aug 06, 2025 07:00 AM

Follow Us
Gangadhar Saboji
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More