Horoscope Today: ಇಂದು ಈ ರಾಶಿಯವರು ಅನಾವಶ್ಯಕ ಖರ್ಚು ನಿಯಂತ್ರಿಸಬೇಕಿದೆ

Horoscope Today: ಇಂದು ಈ ರಾಶಿಯವರು ಅನಾವಶ್ಯಕ ಖರ್ಚು ನಿಯಂತ್ರಿಸಬೇಕಿದೆ

Updated on: Nov 28, 2026 | 7:16 AM

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ನವೆಂಬರ್ 28, 2026ರ ದಿನಭವಿಷ್ಯವನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನ ದ್ವಾದಶ ರಾಶಿಗಳಾದ ಮೇಷದಿಂದ ಮೀನದವರೆಗೆ, ಚಂದ್ರನ ಸಂಚಾರದ ಫಲಾಫಲಗಳು, ರಾಹುಕಾಲ, ಶುಭಕಾಲ, ವೃತ್ತಿ, ಆರೋಗ್ಯ, ಆರ್ಥಿಕ ಸ್ಥಿತಿ, ಮತ್ತು ಸಂಬಂಧಗಳ ಮೇಲೆ ಗ್ರಹಗಳ ಪ್ರಭಾವದ ಕುರಿತು ವಿವರವಾದ ಮಾಹಿತಿ ಇಲ್ಲಿದೆ.

ಪ್ರಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 28-11-2026ರ ಶನಿವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನ ಪರಾಭವನಾಮ ಸಂವತ್ಸರ, ಕಾರ್ತಿಕ ಮಾಸ, ಕೃಷ್ಣಪಕ್ಷ ಚೌತಿ, ಪುನರ್ವಸು ನಕ್ಷತ್ರದಲ್ಲಿ ಚಂದ್ರ ಸಂಚಾರ ಇರುತ್ತದೆ. ಬೆಳಗ್ಗೆ 9:14 ರಿಂದ 10:40 ರವರೆಗೆ ರಾಹುಕಾಲವಿದ್ದು, ಮಧ್ಯಾಹ್ನ 1:33 ರಿಂದ 2:59 ರವರೆಗೆ ಶುಭಕಾಲವಿದೆ. ರವಿ ವೃಶ್ಚಿಕ ರಾಶಿಯಲ್ಲಿದ್ದು, ಚಂದ್ರ ಮಿಥುನ ರಾಶಿಯ ಪುನರ್ವಸು ನಕ್ಷತ್ರದಲ್ಲಿದ್ದಾನೆ.

ಈ ದಿನ ಮೇಷ ರಾಶಿಯವರಿಗೆ ವ್ಯವಹಾರದಲ್ಲಿ ಪ್ರಗತಿ, ಮಿಥುನ ರಾಶಿಯವರಿಗೆ ಆತ್ಮವಿಶ್ವಾಸ ವೃದ್ಧಿ, ಕರ್ಕಾಟಕ ರಾಶಿಯವರಿಗೆ ಕಾರ್ಯಸಿದ್ಧಿ, ಮತ್ತು ಸಿಂಹ ರಾಶಿಯವರಿಗೆ ಕೀರ್ತಿ ಪ್ರಾಪ್ತಿಯ ಯೋಗವಿದೆ. ವೃಷಭ ರಾಶಿಯವರು ಉತ್ತಮ ಮಾತುಗಾರಿಕೆಯಿಂದ ಲಾಭ ಪಡೆಯುವರು. ಕನ್ಯಾ ರಾಶಿಯವರಿಗೆ ಆರ್ಥಿಕ ಏರಿಕೆ, ತುಲಾ ರಾಶಿಯವರಿಗೆ ಕಠಿಣ ಪ್ರಯತ್ನಕ್ಕೆ ಫಲ, ವೃಶ್ಚಿಕ ರಾಶಿಯವರಿಗೆ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಧನುಸ್ಸು ರಾಶಿಯವರಿಗೆ ಮಾನಸಿಕ ಭಯ ಕಾಡಿದರು ಆದಾಯ ವೃದ್ಧಿಯಾಗುವುದು. ಮಕರ ರಾಶಿಯವರಿಗೆ ವೃತ್ತಿಯಲ್ಲಿ ಬಡ್ತಿ, ಕುಂಭ ರಾಶಿಯವರಿಗೆ ಹೊಸ ಯೋಜನೆಗಳು ಫಲಪ್ರದವಾಗಲಿವೆ. ಮೀನ ರಾಶಿಯವರಿಗೆ ಅನಾವಶ್ಯಕ ಖರ್ಚು ನಿಯಂತ್ರಿಸಬೇಕಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Nov 28, 2026 06:31 AM
Loading...
Unable to load recommendations.
Follow Us
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದಾರೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More